8:53 PM Friday18 - September 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ

ಇತ್ತೀಚಿನ ಸುದ್ದಿ

Mangaluru | ಮಹಿಳಾ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಗೀತಾ ಸುರತ್ಕಲ್ ಆಯ್ಕೆ

27/06/2025, 21:43

ಮಂಗಳೂರು(reporterkarnataka.com): ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾ ಸಮ್ಮೇಳನವು ಜುಲೈ 27ರಂದು ಮಂಗಳೂರಿನಲ್ಲಿ ಜರುಗಲಿದ್ದು ,ಇದರ ಯಶಸ್ವಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಚಿತ್ರನಟಿ, ರಂಗನಟಿ, ಸ್ತ್ರೀವಾದಿ ಚಿಂತಕಿ ಗೀತಾ ಸುರತ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಗೀತಾ ಸುರತ್ಕಲ್ ಅವರು ಸ್ತ್ರೀವಾದಿ ಚಿಂತನೆಯ ಪ್ರಗತಿಪರ ಸಾಹಿತಿಗಳಾಗಿದ್ದು, ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ – 2018 ಇದರ ಉದ್ಘಾಟಕರಾಗಿದ್ದರು. ನಾಟಕ ರಂಗ ಗೀತಾ ಸುರತ್ಕಲ್ ಅವರಾಸಕ್ತಿಯ ಕ್ಷೇತ್ರ. ಸಮಾಜ ಬದಲಾವಣೆಯಲ್ಲಿ ನಾಟಕಗಳ ಪಾತ್ರ ಅಪಾರವಾಗಿರುವುದರಿಂದ ರಂಗ ಕ್ಷೇತ್ರವನ್ನು ನೆಚ್ಚಿಕೊಂಡಿದ್ದರು. ನಾಟಕದಲ್ಲಿ ಇವರ ಪಾತ್ರಗಳು ರಾಜ್ಯಾಧ್ಯಂತ ಮೆಚ್ಚುಗೆ ಗಳಿಸಿದ್ದವು.
ಸಿನೇಮಾದಲ್ಲೂ ಗುರುತರ ಪಾತ್ರಗಳನ್ನು ನಿರ್ವಹಿಸಿರುವ ಗೀತಾ ಸುರತ್ಕಲ್ ಅವರು ಆ ಮೂಲಕ ಸಮಾಜಕ್ಕೆ ವಿಶಿಷ್ಠ ಸಂದೇಶ ನೀಡಿದ್ದಾರೆ. ಬೋಳುವಾರು ಮಹಮ್ಮದ್ ಕುಂಞಿ ಅವರ ಪ್ರಸಿದ್ಧ ಕತೆಯನ್ನು ಅನನ್ಯ ಕಾಸರವಳ್ಳಿ ಅವರು ‘ಕಪ್ಪು ಕಲ್ಲಿನ ಶೈತಾನ’ ಸಿನಿಮಾ ನಿರ್ದೇಶಿಸಿದ್ದು ಕಲಾವಿದೆ ಗೀತಾ ಸುರತ್ಕಲ್ ಪ್ರಧಾನ ಭೂಮಿಕೆ ನಿರ್ವಹಿಸಿದ್ದಾರೆ. ಇದಲ್ಲದೇ ಇತ್ತಿಚ್ಚಿನ ಅಮ್ಮಚ್ಚಿ ಎಂಬ ನೆನಪು, ತುರ್ತು ನಿರ್ಗಮನ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ.
ಕರಾವಳಿಯ ವರ್ತಮಾನದ ದುರಿತಗಳಿಗೆ ಸದಾ ಸ್ಪಂದಿಸುವ ಗೀತಾ ಸುರತ್ಕಲ್ ಅವರು, ಮಂಗಳೂರು ಮತೀಯ ಅಸಹಿಷ್ಣುತೆಯ ತಾಣವಾಗುವುದನ್ನು ಕಂಡು ಸುಮ್ಮನಿರದೆ ಚಳವಳಿಗಳಿಗೆ ಹೆಗಲು ಕೊಡುತ್ತಿದ್ದಾರೆ. ಗೀತಾ ಸುರತ್ಕಲ್ ಅವರು ಈ ಬಾರಿಯ ಜನವಾದಿ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಗತಿಪರ ಸ್ತ್ರೀವಾದಿ ಚಳವಳಿಯ ನೇತೃತ್ವ ವಹಿಸಲಿದ್ದಾರೆ.
ಅದರಂತೆ ಸ್ವಾಗತ ಸಮಿತಿಯ ಅದ್ಯಕ್ಷರಾಗಿ ಪ್ಲೇವಿ ಕ್ರಾಸ್ತಾ ಅತ್ತಾವರ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತಿ ಬಿ ಶೆಟ್ಟಿ, ಖಜಾಂಚಿಯಾಗಿ ಅಸುಂತ ಡಿಸೋಜರವರು ಆಯ್ಕೆಗೊಂಡಿದ್ದಾರೆ. ಇತರ ಪದಾಧಿಕಾರಿಗಳಾಗಿ ಚಂದ್ರಕಲಾ ನಂದಾವರ, ಬಿ. ಎಂ. ರೋಹಿಣಿ, ಮಂಜುಳಾ ನಾಯಕ್, ಸ್ವರ್ಣ ಭಟ್, ಸುಮತಿ ಹೆಗ್ಡೆ, ಶರೀಲ್ ಅರುಣ್ ಬಂಗೇರ, ಗ್ರೆಟ್ಟಾ ಟೀಚರ್, ಧನವಂತಿ ಪೂಜಾರಿ, ವಿದ್ಯಾ ಶೆಣೈ, ಬದ್ರುನ್ನೀಸಾ, ಉಮೈನಾ, ಶಾಲಿನಿ, ಅರ್ಚನಾ ರಾಮಚಂದ್ರ, ದೇವಿಕಾ ರೈ, ಡಾ.ಹರಿಣಾಕ್ಷಿ ಕುಂಪಲ, ಡಾ.ಸವಿತಾ ಸುವರ್ಣ, ಕಾರ್ಮಿಲಿಟಾ ಡಿಸೋಜ, ಚಂದ್ರಕಲಾ,ಚಿತ್ರಲೇಖಾ,ಆಶಾ ಸಂಜೀವನಾ, ದಿಷಾ ರೀಟಾ ಪುರ್ತಾಡೋ,ಗುಣವತಿ ಕಿನ್ಯಾ ಸೇರಿದಂತೆ ಸುಮಾರು 100 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು