ಇತ್ತೀಚಿನ ಸುದ್ದಿ
Mangaluru | ಬಿಜೆಪಿ ಶಿಕ್ಷಣ ಪ್ರಕೋಷ್ಠದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪದಗ್ರಹಣ
29/09/2026, 15:43
ಮಂಗಳೂರು(reporterkarnataka.com): ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಪ್ರಕೋಷ್ಟದ ಆರಂಭ ಮತ್ತು ಪ್ರಥಮ ಸಭೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಜಿಲ್ಲಾಧ್ಯಕ್ಷರು ನೇಮಿಸಿದರು ಮತ್ತು ಪದಗ್ರಹಣ ನಡೆಯಿತು.
1. ವಸಂತ ಮಂಜನಾಡಿ , ಜಿಲ್ಲಾ ಸಂಚಾಲಕರು
2. ನಾರಾಯಣ ಗೌಡ ಬಂಟ್ವಾಳ , ಸಹ ಸಂಚಾಲಕರು
3. ಸುರೇಶ್ ಭಂಡಾರಿ , ಮೂಡಬಿದ್ರೆ
4. ವಿನೀತ್ ನಾಯರ್ , ಮಂಗಳೂರು ಉತ್ತರ
5. ಸತ್ಯನಾರಾಯಣ ಭಟ್ , ಮಂಗಳೂರು ಸೌತ್
6. ಸುರೇಶ್ ಎಂ ಎಸ್ , ಬೆಳ್ತಂಗಡಿ
7. ಮನಮೋಹನ್ , ಸುಳ್ಯ
8. ರಾಜೇಂದ್ರ ಮಾಸ್ಟರ್ , ಪುತ್ತೂರು
9. ಏಕೆ ಬಾಬು , ಮಂಗಳೂರು ಸೌತ್ ಸಂಚಾಲಕರು
10. ವಸಂತ್ ರೈ ಬಿಕೆ , ಮಂಗಳೂರು ಮಂಡಲ ಸಂಚಾಲಕರು
ಈ ಸಭೆಯಲ್ಲಿ ರಾಜ್ಯಬಿಜೆಪಿ ಶಿಕ್ಷಣ ಸಹ ಸಂಚಾಲಕರು ಮತ್ತು ಬಿಜೆಪಿ ಸೇವಾಸಂಕಲ್ಪದ ಬದಲಾವಣೆಯ ಕಥೆಯ ರಾಜ್ಯ ಸಹ ಉಸ್ತುವಾರಿ ಎಂ ಜಿ ಭಟ್ ಕುಮಟಾ ಭಾಗವಹಿಸಿ ಬದಲಾವಣೆಯ ಕಥೆ ಕಾರ್ಯಕ್ರಮದ ಚಟುವಟಿಕೆಯಲ್ಲಿ ಪ್ರಕೋಷ್ಠದ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಸೂಚನೆಯನ್ನು ನೀಡಿದರು .ಅದೇ ರೀತಿ ಪ್ರಕೋಷ್ಟದ ಜಿಲ್ಲಾ ಮತ್ತು ಮಂಡಲ ಮಟ್ಟದ ಸಮಿತಿ ಯ ಬಗ್ಗೆ ಮಾರ್ಗದರ್ಶನ ನೀಡಿದರು.



ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಂಯೋಜಕರುಗಳಾದ ಸುಧೀರ್ ಶೆಟ್ಟಿ ಕಣ್ಣೂರು ,
ಮತ್ತು ಕರ್ನಾಟಕ ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಟದ ಸದಸ್ಯರು ಮತ್ತು ದಕ್ಷಿಣ ಕನ್ನಡ ಶಿಕ್ಷಣ ಪ್ರಕೋಷ್ಠದ ಉಸ್ತುವಾರಿ ಮುರಳಿ ಹೊಸಮಜಲು ಅವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ವಸಂತಕುಮಾರ್ ಮಂಜನಾಡಿ ವಂದಿಸಿದರು.













