5:56 AM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಲೋಡ್ ಶೆಡ್ಡಿಂಗ್: ಚಿಕ್ಕಮಗಳೂರಿನಲ್ಲಿ ಇಂಧನ ಸಚಿವ ಜಾರ್ಜ್ ಏನು ಹೇಳಿದರು ಗೊತ್ತೇ?

15/08/2023, 21:56

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ರಾಜ್ಯದಲ್ಲಿ ಆರಂಭದಲ್ಲಿ ಮಳೆ ಸ್ವಲ್ಪ ಕಡಿಮೆ ಆಯಿತು. ಮಳೆಗಾಲದಲ್ಲಿ ಥರ್ಮಲ್ ಪ್ಲಾಂಟ್ ಗಳ ಸರ್ವೀಸ್ ಮಾಡುವುದರಿಂದ ಥರ್ಮಲ್ ಪ್ಲಾಂಟ್ ಪವರ್ ಜನರೇಟ್ ಮಾಡೋದು ಕಡಿಮೆ ಆಯಿತು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಈಗ ಥರ್ಮಲ್ ಪ್ಲಾಂಟ್ ಜಾಸ್ತಿ ಮಾಡಲು ಆದೇಶ ಮಾಡಿದ್ದೇವೆ.
10 ದಿನದಲ್ಲಿ ಸರ್ವೀಸ್ ಮಾಡೋದನ್ನ ನಿಲ್ಲಿಸುತ್ತಾರೆ ಎಂದರು.
ನಮ್ಮ ಕಲ್ಲಿದ್ದಲು ಕ್ವಾಲಿಟಿ ಅಷ್ಟು ಸಾಕಾಗಲ್ಲ. ಆಮದು ಮಾಡಿಕೊಂಡ ಕಲ್ಲಿದ್ದಲು ಜೊತೆ ಮಿಕ್ಸ್ ಮಾಡಬೇಕು. ಮಹಾರಾಷ್ಟ್ರದ ಮಳೆಯಿಂದ ರೈಲಿನಲ್ಲಿ ಸಾಗಿಸುತ್ತಿದ್ದ ಕಲ್ಲಿದ್ದಲು ಒದ್ದೆಯಾಗಿದೆ. ವಿ ಆರ್ ಲಕ್ಕಿ, ಕರ್ನಾಟಕದಲ್ಲಿ ಸೋಲಾರ್ ಹೆಚ್ಚು ಬಳಸುತ್ತಾರೆ ಎಂದು ಸಚಿವರು ನುಡಿದರು.
4 ದಿನ ಸೌಥ್ ಇಂಡಿಯಾದಲ್ಲಿ ಗಾಳಿ ಬರಲಿಲ್ಲ. ಆಗಲೂ ಉತ್ಪಾದನೆ ಕಡಿಮೆ ಆಯಿತು. ನಿನ್ನೆ-ಮೊನ್ನೆಯಿಂದ ಪಿಕ್ ಅಪ್ ಆಗುತ್ತಿದೆ. ಸೋಲಾರ್ ಸಬ್ ಸ್ಟೇಷನ್ ನಲ್ಲಿ ಸೋಲಾರ್ ಉತ್ಪಾದನೆ ಮಾಡುತ್ತೇವೆ. 10-20-30 ಎಕರೆ ಮಾಡಿ ರಾಜ್ಯಾದ್ಯಂತ ಸೋಲಾರ್ ಉತ್ಪಾದನೆಯನ್ನ ಸಬ್ ಸ್ಟೇಷನ್‌ಗೆ ಕೊಡುತ್ತವೆ ಎಂದು ಇಂಧನ ಸಚಿವ ಜಾರ್ಜ್ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು