4:43 AM Sunday6 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಕೊಟ್ಟೂರು; ಅಪರಾಧಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ: ಪಿಎಸ್ಐ ಗೀತಾಂಜಲಿ ಸಿಂಧೆ

27/12/2023, 21:11

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೊಟ್ಟೂರು ಅಪರಾಧಗಳ ನಿಯಂತ್ರಣದಲ್ಲಿ ಇಲಾಖೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ, ಈ ನಿಟ್ಟಿನಲ್ಲಿ ಇಲಾಖೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿ ಬೇಕಿದೆ ಎಂದು ಪಿಎಸ್ಐ ಗೀತಾಂಜಲಿ ಸಿಂಧೆ ಅಭಿಪ್ರಾಯ ವ್ಯಕ್ತಪಡಿಸಿದರು.

ಪೊಲೀಸರು ಜನಸ್ನೇಹಿಗಳಾಗಿ ಜನರ ಪ್ರಾಣ, ಜನರ ಆಸ್ತಿ- ಪಾಸ್ತಿಗಳ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಸರ್ವರೂ ಪೊಲೀಸರಿಗೆ ನೆರವಾಗಬೇಕು ಎಂದರು.
ಅವರು ಪಟ್ಟಣದಲ್ಲಿ ಅಪರಾಧ ನಿಯಂತ್ರಣ ಕುರಿತು, ಅನುಸರಿಸಬೇಕಿರುವ ಮಾರ್ಗಸೂಚಿಗಳನ್ನು ತಿಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.  
ಅಪರಾಧ ತಡ ಮಾಸಾಚರಣೆ ಪ್ರಯುಕ್ತ ಅವರು ಪಟ್ಟಣದ ಶಾಲಾ ಕಾಲೇಜ್ ಮತ್ತು ಬಸ್ ನಿಲ್ದಾಣ ಹಾಗೂ ಸಂತೆ ಮಾರ್ಕೆಟ್ ಸೇರಿದಂತೆ, ಜನ ಸಂದಣಿ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನ ಕೈಗೊಂಡಿದ್ದರು. ಅಪರಾಧಗಳನ್ನು ತಡೆಯುವಲ್ಲಿ ಇಲಾಖೆಯೊಂದಿಗೆ, ಸಾರ್ವಜನಿಕರ ಮಹತ್ವದ ಬಗ್ಗೆ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಯುವ ಪೀಳಿಗೆಯು ಮೋಜು ಮಸ್ತಿಗೆ ಮಾರು ಹೋಗಬಾರದು, ಕಾನೂನು ಪರಿಪಾಲನೆ ಪ್ರತಿಯೊಬ್ಬರ ಆದ್ಯ ಕರ್ಥವ್ಯವಾಗಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತಾಳದೆ, ಮಕ್ಕಳ ಚಲನವಲನಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಜೇಬುಗಳ್ಳರು ಸರಗಳ್ಳರು ಹಾಗೂ ಮೊಬೈಲ್ ಕಳ್ಳರಿರುವುದು ಮತ್ತು ತಮ್ಮನ್ನು ಬೇರೆಡೆ ಸೆಳೆದು ಹಣದ ಬ್ಯಾಗ್ ದೋಚುವಂತದ್ದು. ಎಟಿಎಂ ಕಾರ್ಡ್ ಸೀಕ್ರೆಟ್ ನಂಬರ್ ಪಿನ್ ಕೋಡ್ ಹ್ಯಾಕರ್ ಇದ್ದು, ಯಾವುದೇ ಮೋಸಕ್ಕೆ ಬಲಿಯಾಗಬಾರದು. ಅದಕ್ಕಾಗಿ ಎಚ್ಚರ ವಹಿಸಬೇಕು ಎಂದರು. ಮಹಿಳೆಯರು ಆಭರಣಗಳನ್ನು ಹೊರಗಡೆ ಕಾಣುವಂತೆ ಧರಿಸಿ ವಾಯುವಿಹಾರಕ್ಕೆ ತೆರಳಬೇಡಿ, 4-5 ದಿನಗಳು ಊರಿಗೆ ಹೋದರೆ ಮನೆಯಲ್ಲಿನ ಆಭರಣಗಳನ್ನು ಮತ್ತು ಹಣವನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟು ಹೋಗತಕ್ಕದ್ದು. ಹಾಗೆ ಬೈಕ್ ಗಳನ್ನು ಬಿಟ್ಟು ಹೋಗುವಾಗ ಹ್ಯಾಂಡ್ ಲಾಕ್ ಮಾಡಿ ಹೋಗತಕ್ಕದ್ದು ಎಂದರು.
ಸಾರ್ವಜನಿಕರಲ್ಲಿ ಇಲಾಖೆಯಿಂದ ಸೇವೆಯ ನೆರವು ದೊರಕಬಹುದಾದ, ಸುಮಾರು12 ಜಾಗೃತಿ ಮಾಹಿತಿಗಳನ್ನು ತಿಳಿಸಿದರು.
ಏನೇ ಅಪರಾಧ ಸಮಸ್ಯೆ ಇದ್ದು ನೆರವು ಬೇಕಾದಲ್ಲಿ, 24×7 ತಾಸು ಕಾರ್ಯನಿರತವಾಗಿರುವ ಪೋಲಿಸ್ ವಾಹನದ ಉಚಿತ ಕರೆ112 ಗೆ ಸಂಪರ್ಕಿಸಿ, ಸಕಾಲಕ್ಕೆ ರಕ್ಷಣೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿ ಹೇಳಿದರು. ಅಪರಾಧ ಮುಕ್ತ ಹಾಗೂ ಶಾಂತಿಯುತ ಸಮಾಜ ನಿರ್ಮಾಣಕ್ಕಾಗಿ, ಪ್ರತಿಯೊಬ್ಬರೂ ಶಪಥ ಮಾಡಬೇಕಿದೆ ಇದು ಎಲ್ಲರ ಆಧ್ಯಕರ್ಥವ್ಯವಾಗಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು