3:25 PM Tuesday21 - July 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ Mangaluru | ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ:… ದಾರಿ ತಪ್ಪಿ ನಾಪೋಕ್ಲು ಪಟ್ಟಣ ಪ್ರವೇಶಿಸಿದ ಜಿಂಕೆ: ವಾಹನಗಳ ಅರ್ಭಟ, ಬೀದಿ ನಾಯಿಗಳ… ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರ ಕೈಬಿಡದಿದ್ದರೆ ಧರಣಿ: ವಿವಿಧ ಸಂಘಟನೆಗಳ ಆಕ್ರೋಶ ಮುತ್ತೈದೆ ಸಾವು ಕಂಡ ಮಹಾತಾಯಿ: ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ… ಬಂಟ್ವಾಳ, ಬಾದಾಮಿ ಸಹಿತ ರಾಜ್ಯದ 4 ರೈಲು ನಿಲ್ದಾಣಗಳಿಗೆ ನ್ಯೂ ಲುಕ್: ಏರ್‌ಪೋರ್ಟ್… ಕೊಡಗಿನಲ್ಲಿ ಅಕ್ರಮ ಬೇಟೆಗಾರರ ಮೇಲೆ ಅರಣ್ಯ ಇಲಾಖೆ ಗುಂಡೇಟು: ಮಾಲು ಸಮೇತ ಇಬ್ಬರು… ವಿರಾಜಪೇಟೆ | ಬೇತ್ರಿ ಸೇತುವೆ ಮೇಲಿಂದ ಯುವತಿಯ ಕಾವೇರಿ ನದಿಗೆ ತಳ್ಳಿ ಕೊಲೆಗೆ… ಬೆಂಗಳೂರಿನಲ್ಲಿ ಘೋರ ದುರಂತ: ಹೋಟೆಲ್ ಲಿಫ್ಟ್ ನಲ್ಲಿ ತಲೆ ಸಿಲುಕಿ ಧಾರವಾಡ ಯುವಕ…

ಇತ್ತೀಚಿನ ಸುದ್ದಿ

Kodagu | ಶನಿವಾರಸಂತೆಯ ಮಾಲಂಬಿ ಬೆಟ್ಟದಲ್ಲಿ ಮಳೆಗಾಗಿ ಪೂಜೆ

21/04/2026, 17:56

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಶನಿವಾರಸಂತೆ ಸಮೀಪದ ಮಾಲಂಬಿ ಗ್ರಾಮದ ದೇವರುಗಳ ಸಮಿತಿ ವತಿಯಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಬಸವಣ್ಣ ಮತ್ತು ಶ್ರೀ ಕನ್ನಂಬಾಡಿ ಅಮ್ಮನವರ ದೇವರ ವಾರ್ಷಿಕ ಪೂಜಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ದೇವರ ಪೂಜಾ ಮಹೋತ್ಸವ ಮತ್ತು ವಾರ್ಷಿಕ ಪೂಜೆ ಅಂಗವಾಗಿ ಸೋಮವಾರ ಬೆಳಗ್ಗೆ ದೇವಸ್ಥಾನ ಸಮಿತಿ, ಗ್ರಾಮಸ್ಥರು, ಭಕ್ತರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ವಾದ್ಯಗೋಷ್ಠಿಯೊಂದಿಗೆ ಮಾಲಂಬಿ ಶ್ರೀ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿದರು.ನಂತರ ಬೆಟ್ಟದ ಮೇಲಿರುವ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದ ಅರ್ಚಕರು ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಮತ್ತು ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಕ್ತರಿಗೆ ತೀರ್ಥ, ಪ್ರಸಾದ ವಿನಿಯೋಗ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು