ಇತ್ತೀಚಿನ ಸುದ್ದಿ
ವಿರಾಜಪೇಟೆ | ಬೇತ್ರಿ ಸೇತುವೆ ಮೇಲಿಂದ ಯುವತಿಯ ಕಾವೇರಿ ನದಿಗೆ ತಳ್ಳಿ ಕೊಲೆಗೆ ಯತ್ನ: ತಡವಾಗಿ ಬೆಳಕಿಗೆ ಬಂದ ಪ್ರಕರಣ; ಹಿಂಜಾವೇ ತೀವ್ರ ಖಂಡನೆ
16/07/2026, 21:38
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿರಾಜಪೇಟೆ ತಾಲ್ಲೂಕಿನ ಅಂಬ್ಯುಲೆನ್ಸ್ ಚಾಲಕ ಆಫ್ರೀದಿ ಎಂಬಾತ, ತಾಲ್ಲೂಕಿನ ಕೊಟ್ಟಮುಡಿ ಸಮೀಪದ ಹೊದವಾಡ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಆಕೆ ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಹಣವನ್ನು ಕಿತ್ತುಕೊಂಡು ವಾಪಾಸ್ ಹಣ ಕೇಳಿದಾಗ ಹಿಂತಿರುಗಿಸದೆ ಆರೋಪಿಯು ಆಕೆಯನ್ನು ತಡರಾತ್ರಿ ಮನೆಯ ಬಳಿಯಿಂದ ಕರೆದೊಯ್ದು ತಡರಾತ್ರಿ ಸಮಯದಲ್ಲಿ ಬೇತ್ರಿ ಸೇತುವೆಯಿಂದ ಕೆಳಕ್ಕೆ ತಳ್ಳಿಹಾಕಿ ಕೊಲೆ ಮಾಡಲು ಯತ್ನಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 29ರ ತಡರಾತ್ರಿ ಈ ಘಟನೆ ನಡೆದಿದ್ದು, ನದಿಗೆ ಬಿದ್ದ ಯುವತಿಯನ್ನು ಸ್ಥಳೀಯರು ರಕ್ಷಿಸಿದ್ದು ಘಟನೆ ಸಂಬಂಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 29 ರ ತಡರಾತ್ರಿ ನದಿಯಲ್ಲಿ ಯುವತಿಯ ಕೂಗಾಟದ ಸದ್ದು ಕೇಳಿದ ಸ್ಥಳೀಯರು ಆಕೆಯನ್ನು ನದಿಯಿಂದ ದಡ ಸೇರಲು ಸಹಕರಿಸಿದ್ದಾರೆ. ಸ್ಥಳಕ್ಕೆ ಸ್ಥಳೀಯರ ಆಗಮನವಾಗುತ್ತಿದ್ದಂತೆ ಆರೋಪಿ ಯುವಕ ತನ್ನ ವಾಹನದಲ್ಲಿ ಪರಾರಿಯಾಗಿದ್ದು ತಕ್ಷಣ ಸ್ಥಳೀಯರು 112 ಗೆ ಕರೆ ಮಾಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೋಲೀಸರು ಆರೋಪಿ ಅಫ್ರೀದಿ ಮತ್ತು ಆತನ ಸಹಚರನನ್ನು ಬಂಧಿಸಿ ಕೇಸು ದಾಖಲಿಸಿ ಜೈಲಿಗಟ್ಟಿದ್ದಾರೆ. ಪೋಲೀಸರು ಆರೋಪಿಯ ವಿರುದ್ಧ ಅಟ್ರಾಸಿಟಿ – ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಕೇಸು ದಾಖಲಿಸಿದ್ದಾರೆ. ದುಷ್ಕೃತ್ಯ ನಡೆದ ಮಾಹಿತಿ ತಿಳಿದ ಕೂಡಲೇ ಹಿಂದು ಜಾಗರಣ ವೇದಿಕೆ ಹಾಗೂ ಹಿಂದೂಪರ ಕಾರ್ಯಕರ್ತರು ಯುವತಿಯ ಮನೆಗೆ ಭೇಟಿ ನೀಡಿದ್ದು ನಂತರ ಪೋಲೀಸ್ ಉಪ ಅಧೀಕ್ಷಕರನ್ನು ಭೇಟಿ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುತ್ತಾರೆ.
ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ದುರ್ಬಲರಾಗಿರುವ ಹಿಂದೂ ಮನೆಗಳನ್ನೇ ಗುರಿಯಾಗಿಸಿಕೊಂಡು ಮತಾಂಧರು ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಅವರ ಜೀವನ ಹಾಳು ಮಾಡುತ್ತಿರುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಇಂತಹ ವಿಕೃತ ಮನಸ್ಥಿತಿಯ ಜಿಹಾದಿ ಮತಾಂಧರಿಂದ ನಮ್ಮ ಅಮಾಯಕ ಹೆಣ್ಣು ಮಕ್ಕಳನ್ನು ರಕ್ಷಿಸಬೇಕಿದೆ. ಮಕ್ಕಳ ಸುರಕ್ಷತೆಗಾಗಿ ಪೋಷಕರು ವಿಶೇಷ ಗಮನಹರಿಸಬೇಕಾಗಿದೆ. ಮಾತ್ರವಲ್ಲದೆ ಈ ರೀತಿಯ ಪ್ರಕರಣಗಳ ಸುಳಿವು ಸಿಕ್ಕಿದ ಕೂಡಲೇ ಸಾರ್ವಜನಿಕರು ಸಂಘಟನೆಯ ಗಮನಕ್ಕೆ ತರುವಂತೆ ಹಿಂದು ಜಾಗರಣ ವೇದಿಕೆಯ ಕೊಡಗು ಜಿಲ್ಲಾ ಸಂಯೋಜಕ್ ಬೋಜೇಗೌಡ ತಿಳಿಸಿದ್ದಾರೆ. ಹೊದವಾಡದ ಲವ್ ಜಿಹಾದ್ ಹಾಗೂ ಕೊಲೆಯತ್ನ ಪ್ರಕರಣವನ್ನು ಹಿಂದೂ ಜಾಗರಣ ವೇದಿಕೆಯು ಅತ್ಯುಗ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲದೆ ನೊಂದ ಕುಟುಂಬದ ಪರವಾಗಿ ಸಂಘಟನೆ ನಿಲ್ಲಲಿದೆ. ಕೊಡಗಿನಲ್ಲಿ ಪದೇ ಪದೇ
ಮತಾಂಧ ಜಿಹಾದಿಗಳ ದುಷ್ಕೃತ್ಯಗಳು ನಿರಂತರವಾಗಿ ನಡೆಯಲು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದ ಪೋಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಬೋಜೇಗೌಡ ಆರೋಪಿಸಿದರು.












