5:28 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಮಡಿಕೇರಿ | ಬೆಟ್ಟತ್ತೂರು ಗ್ರಾಮದ ಕೊಂಪುಳಿ ಮನೆಯಲ್ಲಿ ಅದ್ದೂರಿಯಾಗಿ ನಡೆದ “ಧರ್ಮ ದೈವಗಳ” ಆರಾಧನೆ

15/04/2026, 04:51

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಮಡಿಕೇರಿ ತಾಲ್ಲೂಕು ಬೆಟ್ಟತೂರು ಗ್ರಾಮದಲ್ಲಿ ಕೊಂಪುಳಿ ಕುಟುಂಬದವರು ಇದೆ ಮೊದಲ ಭಾರಿಗೆ ನಡೆಸಿದ ಎರಡು ದಿನಗಳ ಧರ್ಮ ದೈವಗಳ ಆರಾಧನೆ ಅದ್ದೂರಿಯಾಗಿ ನೆರವೇರಿತು. ಇಲ್ಲಿವರೆಗೆ ಕೇವಲ ಕುಟುಂಬದ ಕುಲದೇವರು ವೆಂಕಟರಮಣ ಹರಿಸೇವೆ ಗೆ ಸೀಮಿತವಾಗಿದ್ದ ಆಚರಣೆಗಳು ಇದೀಗ ಕುಟುಂಬದ ಅಭಿವೃದ್ಧಿ ಹಾಗೂ ಸೂಕ್ತ ಸಂಕಷ್ಟ ಪರಿಹಾರವಾಗಿ ಕಾರ್ಯಗಳು ಯಶಸ್ವಿಯಾಗಿ ನಡೆದವು.


ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಗುರುಕಾರಣ ದಿಂದ ಆರಂಭವಾಗಿ ಕುಕ್ಕೆತಿ ಮತ್ತು ಬಲ್ಲು, ಪಾಷಾಣ ಮೂರ್ತಿ ವರ್ಣರ ಪಂಜುರ್ಲಿ, ರಾಜಗುಳಿಗ ಭಾನುವಾರ ಬೆಳಗಿನ ಜಾವದ ವರೆಗೆ ನಡೆದಿದ್ದು, ಮರುದಿನ ರುದ್ರ ಚಾಮುಂಡಿ (ಧರ್ಮ ದೈವ ) ಕೋಲ ನಡೆದು ಕುಟುಂಬಸ್ಥರಿಗೆ ಪರಿಹಾರ ನೀಡಿ ಮುಂದಿನ ದೈವ ಕಾರ್ಯಗಳನ್ನು ನಡೆಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಎರಡು ದಿಂದ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಕುಟುಂಬಸ್ಥರು, ನೆಂಟರಿಷ್ಟರು ಸಹಸ್ರ ಸಂಖ್ಯೆಯಲಿ ಬಂದು ಉತ್ಸವಕ್ಕೆ ಸಾಕ್ಷಿಯಾದರು.

ಇತ್ತೀಚಿನ ಸುದ್ದಿ

ಜಾಹೀರಾತು