1:26 PM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಕಾಗವಾಡದ ಬಹು ದಿನಗಳ ಕನಸು ನನಸು: ಸಿವಿಲ್ ಜಡ್ಜ್  ಮತ್ತು ಜೆಎಂಎಫ್ ಸಿ ನ್ಯಾಯಾಲಯ ಉದ್ಘಾಟನೆ

12/07/2021, 08:34

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಕಾಗವಾಡದ ಎಪಿಎಂಸಿ ಆವರಣದಲ್ಲಿ ನೂತನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು

ಬಹುದಿನಗಳಿಂದ ಬೇಡಿಕೆಯಾಗಿ ಉಳಿದಿರುವ ಕಾಗವಾಡದಲ್ಲಿ ಸ್ವತಂತ್ರ್ಯ ನ್ಯಾಯಾಲಯ ಪ್ರಾರಂಭಿಸುವ ಕನಸ್ಸು, ಇಂದು ನನಸಾಗಿದೆ. ರಾಜ್ಯದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ ಹಾಗೂ ಸಚಿನ ಮಗದುಮ ಇವರು ನ್ಯಾಯಾಲಯವನ್ನು ಉದ್ಘಾಟಿಸಿದರು.

ಕಾಗವಾಡದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಮುಖ್ಯ ಉಪಸ್ಥಿತಿಯಲ್ಲಿ ನ್ಯಾಯಾಲಯ ಉದ್ಘಾಟಿಸಿ ಚಾಲನೆ ನೀಡಲಾಯಿತು.

ನ್ಯಾಯಮೂರ್ತಿಗಳಾದ ಅರವಿಂದಕುಮಾರ ನ್ಯಾಯಾಲಯ ಉದ್ಘಾಟಿಸಿದ ಬಳಿಕ ಮಾತನಾಡಿ ಕಾಗವಾಡದಲ್ಲಿ ನ್ಯಾಯಾಲಯ ಪ್ರಾರಂಭಿಸಲು 2017ರಿಂದ ನಾನು ಪ್ರಯತ್ನಿಸುತ್ತಿದ್ದೆ. ಅದು ಈಗ ಕಾಲ ಕೂಡಿ ಬಂದಿದೆ. ಇದನ್ನು ಪ್ರಾರಂಭಿಸಲು ಅಥಣಿ ಶಾಸಕರು ಹಾಗೂ ರಾಜ್ಯದ ಡಿಸಿಎಂ ಲಕ್ಷ್ಮಣ ಸವದಿ, ಕಾಗವಾಡ ಕ್ಷೇತ್ರ ಶಾಸಕರು ಹಾಗೂ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲರ ವಿಶೇಷ ಪ್ರಯತ್ನವಿದೆ. ನ್ಯಾಯವಾದಿಗಳು ಈ ಮೊದಲು ತಮ್ಮ ಕಕ್ಷಿಗಾರರನ್ನು ತೆಗೆದುಕೊಂಡು ಅಥಣಿಗೆ ಹೋಗಬೇಕಾಗಿತ್ತು. ಸೋಮವಾರದಿಂದ ಈ ಭಾಗದ ಎಲ್ಲಾ ದಾವೆಗಳು ಕಾಗವಾಡದಲ್ಲಿ ವರ್ಗಾಯಿಸಿದ್ದು, ಕಾಗವಾಡದ ನ್ಯಾಯಾಧೀಶರಾದ ಚನ್ನಬಸಪ್ಪಾ ಕೋಡಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಎಲ್ಲ ನ್ಯಾಯವಾದಿಗಳು ಕಕ್ಷಿಗಾರರಿಗೆ ಒಳ್ಳೆಯ ನ್ಯಾಯ ಕೊಡಿಸಿ, ಮಾದರಿ ನ್ಯಾಯಾಲಯವಾಗಿ ಮಾಡಿರಿ ಎಂದು ಸಲಹೆ ನೀಡಿದರು.


ನಂತರ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ ನ್ಯಾಯಮೂರ್ತಿಗಳಾದ ಅರವಿಂದಕುಮಾರ ಇವರು ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಆಡಳಿತಾತ್ಮಕ ಸೇವೆ ನೀಡಿದ್ದು, ಒಳ್ಳೆ ನ್ಯಾಯಾಧೀಶರೆಂದು ಹೇಳಿ ಅವರ ಕಾರ್ಯಕಲಾಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಅಥಣಿ ನ್ಯಾಯವಾದಿಗಳ ಬೇಡಿಕೆಯಂತೆ ಅಥಣಿಯಲ್ಲಿ ಜಿಲ್ಲಾ ನ್ಯಾಯಾಲಯ ಪ್ರಾರಂಭಿಸಬೇಕೆಂದು ಬೇಡಿಕೆಯಿಟ್ಟರು.

ಇತ್ತೀಚಿನ ಸುದ್ದಿ

ಜಾಹೀರಾತು