10:19 PM Saturday25 - July 2026
ಬ್ರೇಕಿಂಗ್ ನ್ಯೂಸ್
ಮುಸ್ಲಿಮರು ಮಾತನಾಡಿದ್ರೆ ಟೆರರಿಸ್ಟ್, ಚಿಂತಕರು ಮಾತನಾಡಿದ್ರೆ ನಕ್ಸಲ್, ಹಾಗಾದ್ರೆ ದೇಶ ಭಕ್ತರು ಯಾರು?:… ಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ ಜಾಲ ಭೇದಿಸಿದ ಪೋಲಿಸರು: ಇಬ್ಬರ ಬಂಧನ, ₹18,000… ಕಡೂರು | ತೆಂಗಿನಕಾಯಿ ಕದ್ದ ಆರೋಪ: ಮಹಿಳೆಯ ಬಟ್ಟೆ ಹರಿದು ಮೂವರು ಪುರುಷರಿಂದ… ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಖಂಡಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ: 3… ಶಾಸಕ ಪೊನ್ನಣ್ಣ ಕೋರಿಕೆ‌: ಭಾಗಮಂಡಲ ಮೇಲ್ಸೇತುವೆ ಸುತ್ತಲಿನ ಕಾಮಗಾರಿಗೆ 3 ಕೋಟಿ ಅನುದಾನ… ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ…

ಇತ್ತೀಚಿನ ಸುದ್ದಿ

ಮುಸ್ಲಿಮರು ಮಾತನಾಡಿದ್ರೆ ಟೆರರಿಸ್ಟ್, ಚಿಂತಕರು ಮಾತನಾಡಿದ್ರೆ ನಕ್ಸಲ್, ಹಾಗಾದ್ರೆ ದೇಶ ಭಕ್ತರು ಯಾರು?: ಅಹಿಂದ ಸಂಘಟನಾ ಕಾರ್ಯದರ್ಶಿ ಅಸಾದಿ ಪ್ರಶ್ನೆ

25/07/2026, 21:54

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಮುಸ್ಲಿಮರು ಮಾತನಾಡಿದ್ರೆ ಟೆರರಿಸ್ಟ್,ಚಿಂತಕರು ಮಾತನಾಡಿದ್ರೆ ನಕ್ಸಲ್ ,ರೈತರು ಮಾತಾಡಿದ್ರೆ ಬೇರೆ ತರ, ದೇಶದಲ್ಲಿ ಯಾರೇ ಮಾತನಾಡಿದ್ರು ದೇಶಕ್ಕೆ ಪೂರಕವಾಗಿಲ್ಲ, ರಾಜಕೀಯ ಪಕ್ಷಗಳು ಮುಂದೆ ಬಂದರೆ ರಾಜಕಾರಣ ಮಾಡುತ್ತಿದ್ದಾವೆ. ಹಾಗಾದ್ರೆ ದೇಶದಲ್ಲಿ ದೇಶ ಭಕ್ತರು ಯಾರು? ಎಂದು ಅಹಿಂದ ಸಂಘಟನಾ ಕಾರ್ಯದರ್ಶಿ ರಹಮತ್ ಉಲ್ಲಾ ಅಸಾದಿ ಪ್ರಶ್ನಿಸಿದರು.
ಶುಕ್ರವಾರ ತೀರ್ಥಹಳ್ಳಿಯ ತಾಲೂಕು ಕಚೇರಿ ಎದುರು ರಾಷ್ಟ್ರಾದ್ಯಂತ ನಡೆಯುತ್ತಿರುವ ನೀಟ್ ಪರೀಕ್ಷೆಯ ವಿಚಾರದಲ್ಲಿ ವಿದ್ಯಾರ್ಥಿಗಳ ಪರವಾಗಿ ಪ್ರತಿಭಟನೆ ನಡೆಸಿ ಮಾತನಾಡಿದರು.
ಈ ಸರ್ಕಾರ ಎಂದಲ್ಲ ಯಾವುದೇ ಸರ್ಕಾರದಲ್ಲಿ ಇಂತಹ ತಪ್ಪು ನಡೆದಾಗ ನಾವು ವಿರೋಧ ಮಾಡುವವರೇ, ಯಾರೋ ನಮಗೆ ಹೇಳುತ್ತಿದ್ದರು ನೀವು ಪ್ರತಿಭಟನೆ ಮಾಡುತ್ತಿದ್ದೀರಾ, ನಿಮ್ಮ ಕಾಂಗ್ರೆಸ್ ನಲ್ಲಿ ಶಿಕ್ಷಣ ಸಚಿವರು ಇದ್ದಾಗ ಪೇಪರ್ ಲೀಕ್ ಆಗಿರಲ್ವಾ? ಹೌದು ಅಲ್ಲಿಯೂ ಪೇಪರ್ ಲೀಕ್ ಆಗಿತ್ತು. ಅದಾದ ಮೇಲೆ ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲೂ ಲೀಕ್ ಆಗಿತ್ತು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿಸುತ್ತೀರಾ ಎಂದರೆ ನಿಮ್ಮ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ದೇಶದ ವಿವಿಧ ಭಾಗದಲ್ಲಿ ಈ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಹೊಟ್ಟೆಯಲ್ಲಿರುವ ಮಗುವಿಗೂ ಸಹ ಈ ಸರ್ಕಾರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ತಿಳಿಯುತ್ತಿದೆ. ಆದರೆ ಈ ಸರ್ಕಾರಕ್ಕೆ ಮಾತ್ರ ಕಾಣಿಸುತ್ತಿಲ್ವಾ ಎಂದು ಕೇಳುತ್ತಿದ್ದರು. ಎಲ್ಲರೂ ಕೇಳುತ್ತಿರುವುದು ಶಿಕ್ಷಣ ಸಚಿವರ ರಾಜೀನಾಮೆಯನ್ನು ಅದನ್ನು ಕೊಡಿಸಲು ಮೀನಾ ಮೇಷ ಯಾಕೆ ಎಂದು ಪ್ರೆಶ್ನೆ ಮಾಡಿದರು.
ಕಾಕ್ರೋಚ್ ಪಾರ್ಟಿ ಎಂಬುದಾಗಿ ಸ್ಥಾಪಿಸಿ ಈಗಾಗಲೇ ಲಕ್ಷಾಂತರ ಮಂದಿ ಆ ಪಾರ್ಟಿ ಸೇರಿದ್ದಾರೆ. ಅವರ ಒತ್ತಾಯ ಕೂಡ ಧರ್ಮೆಂದ್ರ ಪ್ರಧಾನ್ ಅವರ ರಾಜೀನಾಮೆ. ಹಾಗಾದರೆ ರಾಜೀನಾಮೆ ಕೊಟ್ಟರೆ ಸರಿ ಹೋಗುತ್ತಾ? ಎಂದರೆ ಖಂಡಿತ ಅಲ್ಲ ಆದರೆ ಮುಂದೆ ಬರುವ ಯಾವುದೇ ಸಚಿವ ಅಥವಾ ಅಧಿಕಾರಿಗೆ ಆ ಭಯ ಇರಲಿ ಅಂತ. ದಯವಿಟ್ಟು ಪ್ರಧಾನಿ ನರೇಂದ್ರ ಮೋದಿಯವರು ಧರ್ಮೆಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದು ನಿಮ್ಮ ಗೌರವವನ್ನು ಉಳಿಸಿಕೊಳ್ಳಿ ಎಂದರು.


ವರಲಕ್ಷ್ಮಿ ಮಾತನಾಡಿ ನೀಟ್ ಪರೀಕ್ಷೆಯ ವಿಚಾರದಲ್ಲಿ ನ್ಯಾಯ ಕೇಳುತ್ತಿರುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ, ಅವರ ಹಕ್ಕನ್ನು ಕೇಳುತ್ತಿದ್ದಾರೆ, ಪ್ರತಿಭಟನೆ ಮಾಡುವುದು ತಪ್ಪಾ? ಅವರೇನಾದರು ನಿಮ್ಮ ಆಸ್ತಿ ಆಗಲಿ ಅಥವಾ ಲೋಕಸಭೆ ಸೀಟ್ ಕೇಳಿದ್ರಾ? ಅವರು ಬರೆದ ಪರೀಕ್ಷೆ ವಿಚಾರವಾಗಿ ನ್ಯಾಯ ಕೇಳುತ್ತಿದ್ದಾರೆ ಅದಕ್ಕೆ ವಿದ್ಯಾರ್ಥಿಗಳನ್ನು ಹೊಡೆಯುವುದು ಸರಿಯೇ? ಅವರಿಗೆ ನ್ಯಾಯ ಸಿಗಬೇಕು ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ನಾವು ಅಹಿಂದ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸುತ್ತಿದ್ದೇವೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು