2:41 PM Sunday19 - April 2026
ಬ್ರೇಕಿಂಗ್ ನ್ಯೂಸ್
ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು Udupi | ಕಾಪು ಬಳಿ ಭೀಕರ ಲಾರಿ-ಕಾರು ಅಪಘಾತ: ಓರ್ವ ಸಾವು; ಇಬ್ಬರು… ಮಂತ್ರಾಲಯದ ಬಳಿ ಭೀಕರ ಅಪಘಾತ: 8 ಮಂದಿ ಸಾವು, ತರೀಕೆರೆ ತಾಲೂಕಿನ ಇಬ್ಬರು… ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ಆರೋಗ್ಯ… ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ 17 ಮಂದಿಗೆ ಜೀವಾವಧಿ…

ಇತ್ತೀಚಿನ ಸುದ್ದಿ

ಬೆಳಗ್ಗೆ 6ರಿಂದ ಕುಶಾಲನಗರದಿಂದ ಮಡಿಕೇರಿ ಕಡೆ ಬಸ್ ವ್ಯವಸ್ಥೆ ಕಲ್ಪಿಸಿ: ನಾಗರಿಕರ ಹಕ್ಕೊತ್ತಾಯ

19/04/2026, 14:02

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಪ್ರತಿ ದಿನ ಕುಶಾಲನಗರದಿಂದ ಮಡಿಕೇರಿ ಕಡೆಗೆ ಬೆಳಗ್ಗಿನ ಜಾವಾ(5-8) ಗಂಟೆವರೆಗೆ ಪ್ರಯಾಣಿಕರು ಬಸ್ ಸೇವೆ ಇಲ್ಲದೆ ಪರದಾಡುತ್ತಿದ್ದಾರೆ. ಇಷ್ಟುದಿನ ಅಂತಾರರಾಜ್ಯ ಬಸ್ ಗಳನ್ನು ಅವಲಂಬಿಸುತ್ತಿದ್ದ ಕುಶಾಲನಗರದ ಪ್ರಯಾಣಿಕರು ಕೆಲವೊಂದು ಬಸ್ ಗಳು ಬಾರದ ಹಿನ್ನಲೆಯಲ್ಲಿ 6.45ಕ್ಕೆ ಕುಶಾಲನಗರ ಮಾರ್ಗವಾಗಿ ಮಂಗಳೂರು ಕಡೆ ತೆರಳುವ ಬಸ್ ಅವಲಂಬಿಸುವಂತಾಗಿದೆ.


ಕುಶಾಲನಗರದಲ್ಲೇ ಮಡಿಕೇರಿ ಕಡೆಗೆ ತೆರಳುವ ಮಂದಿ ಒಂದು ಬಸ್ ನಷ್ಟು ಇದ್ದು ಇದೆ ಬಸ್ ನಲ್ಲಿ ಪುರುಷರಾದರೆ ಅದೇಗೋ ಅಡ್ಜಸ್ಟ್ ಮಾಡಿಕೊಂಡು ಹೋದರೆ ಮಹಿಳೆಯರು, ವೃದ್ಧರು, ಮಕ್ಕಳ ಗತಿಯೇನು.ಕುಶಾಲನಗರದಿಂದ ಮಡಿಕೇರಿಯಿಂದ ಭಾಗಮಂಡಲ,ಬೆಟ್ಟತ್ತೂರು, ಅವಂದೂರು ಕಡೆಗೆ ಹೊರಡುವ ಬಸ್ ಗಳನ್ನು ನಂಬಿ ಬೆಳಗಿನ ಜಾವಾ ಹೊರಡುವವರಿದ್ದಾರೆ, ಅಲ್ಲಿ ಈ ಬಸ್ ಗಳು ಮಿಸ್ ಆದಲ್ಲಿ ತೋಟಕ್ಕೆ ಹೋಗುವವರು, ತುರ್ತು ಕೆಲಸ, ದೇವಸ್ಥಾನ, ಊರುಗಳಿಗೆ ಹೋಗುವವರು ಪರದಾಡುತ್ತಾರೆ. ದಯವಿಟ್ಟು ಕನಿಷ್ಠ ಕುಶಾಲನಗರದಿಂದ 6 ಗಂಟೆಗೆ ಮಡಿಕೇರಿವರೆಗೆ ಬಸ್ ಸೇವೆ ಒದಗಿಸಿ ಕೊಡುವಂತೆ ಸ್ಥಳೀಯ ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು