12:11 PM Friday31 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಹೀಗೊಂದು ಹೇಯ ಕೃತ್ಯ: ಹೆತ್ತಬ್ಬೆಗೆ ಜೀಪ್‌ನಿಂದ ಗುದ್ದಿಸಿ ಕೊಲೆ ಮಾಡಿದ ದುಷ್ಟ ಪುತ್ರ

18/02/2022, 19:52

ಮೈಸೂರು(reporterkarnataka.com): ನಡೆದುಕೊಂಡು ಹೋಗುತ್ತಿದ್ದ ತನ್ನ ತಾಯಿಗೆ ಪುತ್ರನೊಬ್ಬ ಜೀಪ್ ನಿಂದ ಗುದ್ದಿಸಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ಗುರುವಾರ ನಡೆದಿದೆ.

ನಾಗಮ್ಮ(65) ಹತ್ಯೆಯಾದ ತಾಯಿ. ಮೃತಳ ಪುತ್ರ ಹೇಮರಾಜ್(45) ಎಂಬಾತನೇ ಕೃತ್ಯವೆಸಗಿದ ಆರೋಪಿ. ಹಣಕಾಸಿನ ವಿಚಾರಕ್ಕೆ ಸಂಬoಧಿಸಿದoತೆ ತಾಯಿ ಮಗನ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಇಂದು ತಾಯಿಯ ವಿರುದ್ಧ ಕುಪಿತಗೊಂಡಿದ್ದ ಮಗ ಹೇಮರಾಜ್, ರಸ್ತೆ ಬದಿಯಲ್ಲಿ ತೆರಳುತ್ತಿದ್ದ ತಾಯಿ ನಾಗಮ್ಮಗೆ ಟ್ರಾವೆಲ್ ಜೀಪ್ ನಿಂದ ಡಿಕ್ಕಿಹೊಡೆಸಿದ್ದಾನೆ.

ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ನಾಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಬೆಟ್ಟದಪುರ ಠಾಣೆಯ ಪೊಲೀಸರು ಆರೋಪಿ ಹೇಮರಾಜನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು