11:13 PM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಹಾಸನ, ಶಿರಸಿಗೆ ಇಂದಿನಿಂದ ಕೆಎಸ್ಸಾರ್ಟಿಸಿ  ವೋಲ್ವೋ ಬಸ್ ಆರಂಭ: ಕಡಿಮೆ ದರದಲ್ಲಿ ಆರಾಮದಾಯಕ ಪ್ರಯಾಣ

18/02/2022, 10:39

ಮಂಗಳೂರು(reporterkarnataka.com):-ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದಿಂದ ಮಂಗಳೂರು-ಹಾಸನ-ಮಂಗಳೂರು ವಯಾ ಬಿ.ಸಿ. ರೋಡು, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಗುಂಡ್ಯ, ಸಕಲೇಶಪುರ ಮಾರ್ಗದಲ್ಲಿ ವೋಲ್ವೋ ಸಾರಿಗೆಯನ್ನು ಇದೇ ಫೆ.18ರ ಶುಕ್ರವಾರದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಂತ ಕಡಿಮೆ ದರದಲ್ಲಿ ಪ್ರಾರಂಭಿಸಲಾಗುತ್ತಿದೆ. 

ಮಂಗಳೂರಿನಿಂದ ಸಂಜೆ 5ಕ್ಕೆ ಹೊರಟು ಹಾಸನಕ್ಕೆ ರಾತ್ರಿ 9.30ಕ್ಕೆ ತಲುಪಲಿದೆ. ಅದೇ ರೀತಿ ಹಾಸನದಿಂದ  ಮುಂಜಾನೆ 5.15 ಗಂಟೆಗೆ ಹೊರಟು ಮಂಗಳೂರಿಗೆ ಬೆಳಿಗ್ಗೆ 9.45ಕ್ಕೆ ತಲುಪಲಿದೆ. ಬಸ್ ದರ  320 ರೂ.ಗಳು.

ಮಂಗಳೂರು-ಶಿರಸಿ ವಯಾ ಉಡುಪಿ-ಕುಂದಾಪುರ-ಭಟ್ಕಳ-ಮುರ್ಡೇಶ್ವರ ಕ್ರಾಸ್-ಹೊನ್ನಾವರ ಸರ್ಕಲ್-ಕುಮಟ ಮಾರ್ಗದಲ್ಲಿ ನೂತನವಾಗಿ ವೋಲ್ವೋ ಸಾರಿಗೆಯನ್ನು  ಇದೇ ಫೆ.18ರ ಶುಕ್ರವಾರದಿಂದ ಪ್ರಾರಂಭಿಸಲಾಗುವುದು.

ಮಂಗಳೂರಿನಿಂದ ಮಧ್ಯಾಹ್ನ 3.15 ಹೊರಟು ಶಿರಸಿಗೆ ರಾತ್ರಿ 9.30ಗಂಟೆಗೆ ತಲುಪಲಿದೆ. ಶಿರಸಿಯಿಂದ ಮುಂಜಾನೆ 5 ಗಂಟೆಗೆ ಹೊರಟು ಮಂಗಳೂರನ್ನು ಬೆಳಿಗ್ಗೆ 11 ಗಂಟೆಗೆ ತಲುಪಲಿದೆ. ಬಸ್ ದರ 420 ರೂ.ಗಳಾಗಿವೆ.  

     ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ.

  ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ ನಿಲ್ದಾಣ: 7760990720, ಹಾಸನ ಬಸ್ ನಿಲ್ದಾಣ: 7760990520, ಸಕಲೇಶಪುರ ಬಸ್ ನಿಲ್ದಾಣ: 7022030210, ಉಡುಪಿ ಬಸ್ ನಿಲ್ದಾಣ: 9663266400, ಕುಂದಾಪುರ ಬಸ್ ನಿಲ್ದಾಣ: 9663266009, ಕುಮಟ ಬಸ್ ನಿಲ್ದಾಣ: 7760991730, ಶಿರಸಿ: 7795984168, ಮಂಗಳೂರು ಘಟಕ: 7760990714/7760990728, ಅವತಾರ್: ಮಂಗಳೂರು-9663211553 ಮೊಬೈಲ್ ನಂಬರ್‍ಗಳನ್ನು ಸಂಪರ್ಕಿಸುವಂತೆ ಕರಾರಸಾಸಂಸ್ಥೆಯ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು