7:55 AM Tuesday18 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಹಲ್ಯಾಳ ಗ್ರಾಮದ ಯುವಕರಿಂದ ಕೃಷ್ಣಾ ನದಿ ಸ್ವಚ್ಛತೆ: ಸಾರ್ವಜನಿಕರಿಂದ ಶ್ಲಾಘನೆ

18/02/2022, 14:18

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಒಂದು ಕಡೆ ರಾಜ್ಯದಲ್ಲಿ ಹಿಜಾಬ್ /ಕೇಸರಿ ವಿವಾದ ತಲೆದೋರಿದರೆ, ಇನ್ನೊಂದು ಕಡೆ ಅಥಣಿ ತಾಲೂಕಿನ ಹಲ್ಯಾಳ ಯುವಕರು ಸ್ವಯಂ ಪ್ರೇರಣೆಯಿಂದ ಕೃಷ್ಣಾ ನದಿ ಸ್ವಚ್ಛತೆಗೆ  ಮುಂದಾಗಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.


ಹಲ್ಯಾಳ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರವ್ವ ಪರಸಪ್ಪ ಮಾದರ, ಅವರ ಮಗನಾದ ರಾಹುಲ್ ಪರಸಪ್ಪ, ಮಾದರ್ ಹಾಗೂ ವಿನೋದ್ ಅರ್ಜುನ್ ಕುರಣಿ, ಪುಂಡಲಿಕ್ ಚಂದ್ರಪ್ಪ ಮಾದರ ಅವರು ಸ್ವಯಂ ಪ್ರೇರಿತವಾಗಿ ನದಿ ದಡದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.


ಚಿಂಚಲಿ ಮಯಕ್ಕಾ ದೇವಿಯ ಜಾತ್ರೆ ನಿಮಿತ್ಯ ಸಾವಿರಾರು ಭಕ್ತಾದಿಗಳು ಮೊದಲು ಕೃಷ್ಣ ನದಿ ಪವಿತ್ರ ಸ್ನಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ತದನಂತರ ದೇವಿಯ ದರ್ಶನಕ್ಕೆ ಹೋಗುತ್ತಾರೆ. ಹೋದ ವರ್ಷ ಪ್ರವಾಹದಿಂದ ನದಿ ತೀರಕ್ಕೆ ಅಪಾರ ಪ್ರಮಾಣದಲ್ಲಿ ಮುಳ್ಳುಗಳು ತುಂಬಿ ಜನಗಳಿಗೆ ಸಮಸ್ಯೆ ಆಗುವುದನ್ನು ಅರಿತು ಖುದ್ದಾಗಿ ಗೆಳೆಯರೊಂದಿಗೆ ನದಿ ಸ್ವಚ್ಛತೆ ಕಾರ್ಯವನ್ನು  ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು