11:00 AM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಫಿಶ್ ಫ್ಯಾಕ್ಟರಿ ತ್ಯಾಜ್ಯ ಟ್ಯಾಂಕ್ ನಿಂದ ವಿಷಾನಿಲ ಸೋರಿಕೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆ; 3 ಮಂದಿ ಗಂಭೀರ

18/04/2022, 10:09

ಮಂಗಳೂರು(reporterkarnataka.com): ಎಸ್ ಇ ಝೆಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫಿಶ್ ಫ್ಯಾಕ್ಟರಿಯ ತ್ಯಾಜ್ಯ ಟ್ಯಾಂಕ್ ನಿಂದ ವಿಷಾನಿಲ ಸೋರಿಕೆಯಾಗಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. 3 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಮೃತಪಟ್ಟವರನ್ನು ಪಶ್ಚಿಮ ಬಂಗಾಳದ ಸಮಿರುಲ್ಲ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್ ಎಂದು ಗುರುತಿಸಲಾಗಿದೆ.

ಮಿರಾಜುಲ್ಲ್ ಇಸ್ಲಾಂ, ಸರಾಫತ್ ಆಲಿ, ಅಜನ್ ಆಲಿ, ಕರೀಬುಲ್ಲ, ಅಫ್ತಲ್ ಮಲ್ಲಿಕ್ ಸೇರಿದಂತೆ ಹಲವರು ಗಂಭೀರ ಸ್ಥಿತಿಯಲ್ಲಿದ್ದರು. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟವರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು.

ಎಸ್ ಇಝೆಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೀನಿನ ಫ್ಯಾಕ್ಟರಿಯಲ್ಲಿ ಭಾನುವಾರ ರಾತ್ರಿ ವೇಳೆ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದಿದ್ದಾನೆ. ಈ ವೇಳೆ  ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು