5:57 PM Wednesday7 - October 2026
ಬ್ರೇಕಿಂಗ್ ನ್ಯೂಸ್
ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;…

ಇತ್ತೀಚಿನ ಸುದ್ದಿ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: 6ನೇ ಸ್ಪಾಟ್ ನಲ್ಲಿ ಸಿಕ್ಕಿದ್ದು ಬರೇ ಮೂಳೆ ಚೂರುಗಳಲ್ಲ; ಹಾಗಾದರೆ ಮತ್ತೇನು?

31/07/2025, 17:43

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ವಿಶೇಷ ತನಿಖಾ ತಂಡದಿಂದ ಮೂರನೇ ದಿನವಾದ ಇಂದು(ಗುರುವಾರ) ಕೂಡ ಸಮಾಧಿ ಉತ್ಖನನ ಮುಂದುವರಿದಿದ್ದು, 6ನೇ ಸ್ಪಾಟ್ ನಲ್ಲಿ ಮಾನವ ಮೂಳೆ ಚೂರುಗಳು ಮಾತ್ರವಲ್ಲದೆ ತಲೆ ಬುರುಡೆಯ ಅವಶೇಷಗಳೂ ಪತ್ತೆಯಾಗಿವೆ ಎಂದು ವಿಶ್ವಸನೀಯ ಮೂಲಗಳು ದೃಢಪಡಿಸಿವೆ.
ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಗುರುತಿಸಲಾದ 6ನೇ ಸ್ಪಾಟ್ ನಲ್ಲಿ ನಡೆಸಲಾದ
ಸಮಾಧಿ ಅಗೆತ ಸಂದರ್ಭದಲ್ಲಿ ಮಾನವ ಮೂಳೆ ತುಂಡುಗಳು ಮಾತ್ರವಲ್ಲದೆ ತಲೆ ಬುರುಡೆ ಚೂರುಗಳು, ಕೈಕಾಲಿನ ಅವಶೇಷಗಳು ಎಂದು ತಿಳಿದು ಬಂದಿದೆ.
ಈ ನಡುವೆ ಎಸ್ಐಟಿ ದ.ಕ. ಜಿಲ್ಲೆಯಲ್ಲಿ ನಾಪತ್ತೆಯಾದವರ ಬಗ್ಗೆ ವಿವರ ನೀಡುವಂತೆ ಪ್ರತಿ ಪೊಲೀಸ್ ಠಾಣೆಗೆ ಸೂಚಿಸಿದೆ. ಕಳೆದ 20 ವರ್ಷಗಳಲ್ಲಿ ನಾಪತ್ತೆಯಾದವರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿ ಮೂರು ದಿನಗಳಿಂದ ಸಾಕ್ಷ್ಯ ಪತ್ತೆಗಾಗಿ ಎಸ್‌ಐಟಿ ತಂಡ ಕಾರ್ಮಿಕರ ಮೂಲಕ ಅಗೆಯುವ ಕೆಲಸದಲ್ಲಿ ತೊಡಗಿದೆ. ಮೂರು ದಿನಗಳಲ್ಲಿ ಗುರುತು ಹಾಕಿದ ಐದು ಕಡೆ ಅಗೆತ ನಡೆಸಿದಾಗ, ಯಾವುದೇ ಸಾಕ್ಷ್ಯ ಲಭಿಸಿರಲಿಲ್ಲ.
ಇಂದು ಬೆಳಗ್ಗಿನಿಂದ ಆರನೇ ಸಮಾಧಿ ಜಾಗದಲ್ಲಿ ಅಗೆಯಲಾಗಿದ್ದು ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಜೋಪಾನವಾಗಿ ಅಗೆಯುವ ಕೆಲಸ ನಡೆಯುವ ಸಾಧ್ಯತೆ ಇದೆ. ಸ್ಥಳದಲ್ಲಿ ಡಿಐಜಿ ಅನುಚೇತ್, ಎಸ್ಪಿ ಜಿತೇಂದ್ರ ದಯಾಮ, ಪುತ್ತೂರು ಎಸಿ ಸ್ಟೆಲ್ಲಾ ಮೇರಿಸ್ ಇದ್ದಾರೆ. ದೂರುದಾರ ವ್ಯಕ್ತಿಯ ಸಮ್ಮುಖದಲ್ಲಿ ಅಗೆಯುವ ಕೆಲಸ ಮಾಡಲಾಗುತ್ತಿದ್ದು ಹೆಣ ಹೂತ ಪ್ರಕರಣ ಸಾರ್ವಜನಿಕರ ಗಮನ ಸೆಳೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು