4:28 AM Tuesday8 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಬಸ್ ನಲ್ಲಿ ದೊರಕಿದ್ದ ದುಬಾರಿ ಮೊಬೈಲ್‌: ಮಾಲೀಕರಿಗೆ ತಲುಪಿಸಿದ ಸಂಡೂರು ಮೂಲದ ದಂಪತಿ

01/01/2023, 11:44

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ಸಾರಿಗೆ ಬಸ್ ನಲ್ಲಿ ಮರೆತು ಬಿಟ್ಟು ಹೋದ ದುಬಾರಿ ಬೆಲೆಯ ಮೊಬೈಲ್‌ ನ್ನು. ಸಾರಿಗೆ ಸಿಬ್ಬಂದಿ ಮೊಬೈಲ್‌ ಮಾಲೀಕರಿಗೆ ಸುರಕ್ಷಿತವಾಗಿ ತಲುಪಿಸುವ ಮೂಲಕ, ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದ ಪ್ರಸಂಗ ಜರುಗಿದೆ.

ಕಲ್ಯಾಣ ಕರ್ನಾಟಕ ಸಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕೂಡ್ಲಿಗಿ ಪಟ್ಟಣದ ಎಸ್ಡಿ ಎಮ್ಸಿ ತಾಲೂಕು ಘಟಕ ಅಧ್ಯಕ್ಷೆ ಹಾಗೂ ಪತ್ರಕರ್ತೆ ಡಿ.ಭಾಗ್ಯಮ್ಮ ಸೋಮುರವರು ಘಟನೆಗೆ ಸಾಕ್ಷಿಯಾಗಿದ್ದಾರೆ. ಅವರು ಕಳೆದೆರೆಡು ದಿನಗಳ ಹಿಂದೆಯಷ್ಟೇ ದಾವಣಗೆರೆಗೆ ತೆರಳಿ, ಮರುದಿನ ದಾವಣಗೆರೆ ಯಿಂದ ಕೂಡ್ಲಿಗಿ ಗೆ ಸಾರಿಗೆ ಬಸ್ ನಲ್ಲಿ ಹಿಂದಿರುಗಿ ಬಂದಿದ್ದಾರೆ.

ಕೂಡ್ಲಿಗಿ ಪಟ್ಟಣದಲ್ಲಿ ಬಸ್ ನಿಂದ ಕೆಳಗಿಳಿಯುವಾಗ ತಮ್ಮ ಮೊಬೈಲ್‌ ನ್ನು, ಅವರು ತಾವು ಕುಳಿತ ಬಸ್ ನ ಸೀಟ್ ನಲ್ಲಿಯೇ ಮರೆತು ಇಳಿದೋಗಿದ್ದಾರೆ. ನಂತರ ತಡವಾಗಿಯೇ ಮೊಬೈಲ್‌ ನ್ನು ಗಮನಿಸಿದ ಹತ್ತಿರದ ಸೀಟ್ ನಲ್ಲಿದ್ದ, ಸಹ ಪ್ರಯಾಣಿಕರಾದ ಸಂಡೂರು ಮೂಲದ ಅಪರಿಚಿತ ದಂಪತಿ ಭಾಗ್ಯಮ್ಮರವರ ಮೊಬೈಲ್‌ ನ್ನು ಬಸ್ ನಿರ್ವಾಹಕ ಹಾಗೂ ಚಾಲಕರಿಗೆ ತಲುಪಿಸಿದ್ದಾರೆ, ಕೂಡ್ಲಿಗಿ ಘಟಕದ ಸಿಬ್ಬಂದಿ ಮಾಲೀಕರಾದ ತಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ನಂತರ ಘಟಕ ದ ಕಚೇರಿಗೆ ತಮ್ಮ ಕರೆಸಿಕೊಂಡು ಮೊಬೈಲ್‌ನ್ನು ತಮಗೆ ತಲುಪಿಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಯಾಣಿಕರಾದ ಸಂಡೂರು ಮೂಲದ ಅಪರಿಚಿತ ದಂಪತಿ ಹಾಗೂ ಸಾರಿಗೆ ಘಟಕ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು