ಇತ್ತೀಚಿನ ಸುದ್ದಿ
Bull bull | ರೂಪದರ್ಶಿಗಳ ತರಹ ಸಪೂರ ಶರೀರದ ಬುಲ್ ಬುಲ್ ಹಕ್ಕಿ: ನಗರೀಕರಣವೇ ಕಂಟಕ
05/09/2026, 16:44
ಹೂ ತೋಟಗಳಲ್ಲಿ ಸುಮಧುರವಾಗಿ ಹಾಡುತ್ತಾ, ಸಕ್ರಿಯವಾಗಿ ಚಿಲಿಪಿಲಿ ಶಬ್ದಗಳನ್ನು ಹೊರಡಿಸುತ್ತದೆ. ತಲೆಯ ಮೇಲೆ ಸಣ್ಣ ಜುಟ್ಟನ್ನು ಹೊಂದಿರುವ, ಹಕ್ಕಿ ಬುಲ್ ಬುಲ್ ಗುಬ್ಬಚ್ಚಿಗಳಿಗಿಂತಲೂ ಗಾತ್ರದಲ್ಲಿ ತುಸು ದೊಡ್ಡ, ರೂಪದರ್ಶಿಗಳ ತರಹ ಸಪೂರ ದೇಹ, ಕಣ್ಣಿನ ಪಕ್ಕದಲ್ಲಿ ಕೆಂಪು ಹಳದಿ ಅಥವಾ ಬಿಳಿ ಬಣ್ಣದಲ್ಲಿ ಮೇಕಪ್ ಮಾಡಿದಂತೆ ಕಂಡು ಬರುತ್ತದೆ. ಶರೀರದ ಮೇಲ್ಬಾಗ ಕಂದು ಅಥವಾ ಕಪ್ಪು ಬಣ್ಣದ ಗರಿಗಳನ್ನು ಹೊಂದಿದ್ದು, ಕೆಳಭಾಗ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಚಿಕ್ಕ ಕುತ್ತಿಗೆ, ಉದ್ದವಾದ ಬಾಲ,ಚೂಪದ ಕೊಕ್ಕು ಬಹಳ ಆಕರ್ಷಣೀಯ ಮಾನವರೊಂದಿಗೆ ದ ಹೊಂದಿಕೊಳ್ಳುವ ಈ ಹಕ್ಕಿಯ ಆಹಾರ ಹಣ್ಣು, ಹೂವಿನ ಮಕರಂದ ಹಾಗೂ ಕೀಟಗಳು.




ಸಾಮಾನ್ಯವಾಗಿ ಜೋಡಿಯಾಗಿ ಕಾಣಸಿಗುವ ಪಿಕರಾಳಗಳಲ್ಲಿ ಅನೇಕ ಪ್ರಭೇದಗಳಿವೆ. ಮೀಸೆಯ ಪಿಕರಾಳ, ಕೆಂಪು ಬಾಲದ ಪಿಕರಾಳ, ಕರಿಪಿಕರಾಳ. ಇತ್ಯಾದಿ ಮನೆಯ ಗೋಡೆಗಳಿಗೆ ತಾಗಿ ಅಥವಾ ಪೊದೆಗಳಲ್ಲಿ ಗೂಡು ಕಟ್ಟಿ 2ರಿಂದ 4 ಮೊಟ್ಟೆಗಳನ್ನಿಡುತ್ತದೆ. ಗಂಡು ಹೆಣ್ಣು ಹಕ್ಕಿಗಳೆರಡೂ ಕಾವು ಕೊಟ್ಟು ಮರಿ ಮಾಡುತ್ತದೆ. 2 ವಾರಗಳಲ್ಲಿ ಮರಿಗಳು ಬೆಳೆದು ಸ್ವತಂತ್ರವಾಗಿ ಜೀವಿಸುತ್ತದೆ. ಇವುಗಳ ಜೀವಿತಾವಧಿ 8ರಿಂದ 12 ವರ್ಷಗಳು. ತಮ್ಮ ಚಿಲಿಪಿಲಿ ಶಬ್ದಗಳ ಮೂಲಕ ಸಂವಹನ ನಡೆಸಿ ಸಂಗಾತಿಗೆ ಅಪಾಯ ಮುನ್ಸೂಚನೆ ನೀಡುತ್ತದೆ.
ಅತಿಯಾದ ನಗರೀಕರಣದಿಂದ ನಶಿಸುತ್ತಿರುವ ಹೊತೋಟ ಪಿಕರಾಳಗಳ ಸಂತತಿಗೆ ಕಂಟಕ ವಾಗಬಲ್ಲದು.












