9:12 PM Friday26 - June 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;…

ಇತ್ತೀಚಿನ ಸುದ್ದಿ

ಬೆಂಗಳೂರು ಕಾಶಿ ಮಠ ಗಣೇಶೋತ್ಸವ: ವೈಭವದ ಶೋಭಾಯಾತ್ರೆ; ಮಂಗಳಮೂರ್ತಿಯ ವಿಸರ್ಜನೆ

04/09/2022, 22:13

ಬೆಂಗಳೂರು(reporterkarnataka.com): ನಗರದ ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಶ್ರೀ ಕಾಶಿ ಮಠ ವ್ಯವಸ್ಥಾಪಕ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಶೋಭಾಯಾತ್ರೆ ಹಾಗೂ ಮಂಗಳಮೂರ್ತಿಯ ವಿಸರ್ಜನೆ ಭಾನುವಾರ ಮಠದ ಕಲ್ಯಾಣಿಯಲ್ಲಿ ಭಕ್ತಿ ಸಂಭ್ರಮದಿಂದ ನಡೆಯಿತು.

ಸಂಜೆ 5.30ಕ್ಕೆ ಗಣೇಶ ಮೂರ್ತಿಯ ವೈಭವದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಮಠದ ಹೊರಗಡೆ ಸುಮಾರು 1.5 ಕಿಮೀ ನಷ್ಟು ಶೋಭಾಯಾತ್ರೆಯ ಮೆರವಣಿಗೆ ನಡೆಸಲಾಯಿತು. ನಂತರ ರಾತ್ರಿ ಸುಮಾರು 7.00ರ ವೇಳೆಗೆ ಮಂಗಳಮೂರ್ತಿಯ ವಿಸರ್ಜನೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿತು. ಪೀಠ ಪೂಜೆ ನೆರವೇರಿಸಲಾಯಿತು. ಪಾರ್ಥಸಾರಥಿ ದೇವರಿಗೆ ಮಹಾ ಮಂಗಳಾರತಿ ಬೆಳಗಲಾಯಿತು.

ಇದಕ್ಕೆ ಮುನ್ನ. ಬೆಳಗ್ಗೆ 8.30ಕ್ಕೆ ಸಿದ್ಧಿ ವಿನಾಯಕನಿಗೆ ಪ್ರಾತಃ ಪೂಜೆ ನೆರವೇರಿತು. 9.30ಕ್ಕೆ ಗಣಹೋಮ, ಸಹಸ್ರ ಮೋದಕ ಹವನ ನೆರವೇರಿತು. 10.30ಕ್ಕೆ ಕೃಷ್ಣಪ್ರಿಯ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಮೇಳೈಸಿತು. 12.30ಕ್ಕೆ ಪಾರ್ಥಸಾರಥಿ ದೇವರಿಗೆ ಮಧ್ಯಾಹ್ನದ ಪೂಜೆ, ಸಿದ್ಧಿ ವಿನಾಯಕ ದೇವರಿಗೆ ಮಧ್ಯಾಹ್ನದ ಪೂಜೆ, ಮಹಾಸಮರಾಧನೆ, ಮಧ್ಯಾಹ್ನ 2 ಗಂಟೆಗೆ ಸೇವಾ ಸಂಕಲ್ಪ ನಡೆಯಿತು. 3 ಗಂಟೆಗೆ ದೇವಕಿಕೃಷ್ಣ ಭಜನಾ ಮಂಡಳಿಯಿಂದ ಭಜನೆ, 4.30ಕ್ಕೆ ಸಿದ್ಧಿ ವಿನಾಯಕ ವಿಸರ್ಜನೆ ಮುನ್ನದ ರಾತ್ರಿ ಪೂಜೆ, 5.30ಕ್ಕೆ ಪಾರ್ಥ ಸಾರಥಿ ದೇವರ ವಿಸರ್ಜನೆ ಮುನ್ನದ ರಾತ್ರಿ ಪೂಜೆ ಹಾಗೂ ರಾತ್ರಿ 7.00ಕ್ಕೆ ಮಠದಲ್ಲಿ ವಿಸರ್ಜನೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು