9:43 PM Saturday23 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್…

ಇತ್ತೀಚಿನ ಸುದ್ದಿ

ಬಂಜಾರ ಸಮಾಜದ ಸಂಸ್ಕೃತಿ, ಪರಂಪರೆ ಉಳಿಸಿ: ಜೈರಾಮ್ ಹರವತ್

19/08/2024, 22:28

ಶಿವು ರಾಠೋಡ ಯಾದಗಿರಿ

info.reporterkarnataka@gmail.com

ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಅರಿತು ಆತ್ಮಗೌರವವನ್ನು ಹೆಚ್ಚಿಸಿಕೊಂಡಾಗ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯ ಎಂದು ಗೋರ್ ಸೇನಾ ಕುರೇಕನಾಳ ತಾಂಡಾ ಅಧ್ಯಕ್ಷರ ಜೈರಾಮ್ ಹರವತ್ . ಹೇಳಿದರು.


ಸದ್ಗುರು ಸೇವಾಲಾಲರ ಮಾಹರಾಜರು ಬಂಜಾರ ಸಾಂಸ್ಕೃತಿಕ ಜಾಗೃತಿ ಬಗ್ಗೆ ಮಾತನಾಡಿದರು.
ಬಂಜಾರ ಸಮಾಜದ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಹೊಂದಿದೆ. ಪ್ರತಿಯೊಬ್ಬ ಬಂಜಾರ ಗೋರ್ ಸೇನಾ ಗೋರ್ ಸಿಕವಾಡಿ ಸಂಘಟನೆಯಲ್ಲಿ ಬಂಜಾರ ಸಮಾಜದ ವಿದ್ಯಾವಂತ ಯುವಕರು ಈ ಸಂಘಟನೆಯ ಮೂಲಕ ನಮ್ಮ ಸಮಾಜದಲ್ಲಿ ನಡೆದುಬಂದ ಹಾದಿ, ಸಂಸ್ಕೃತಿ, ಪರಂಪರೆ ಅರಿವು ತಿಳಿಯುವಂತಾಗುತ್ತದೆ. ಹಾಗೆ ಗೋರ್ ಬಂಜಾರ ಸಮಾಜದ ಪ್ರತಿಯೊಬ್ಬರೂ ವಿದ್ಯಾವಂತರಾಗುವ ಮೂಲಕ ಸಮಾಜವನ್ನು ಉನ್ನತಿಗೆ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.
ಶ್ರವಣ ಮಾಸದ 30 ದಿನ ಮನೆ ಮನೆಯಲ್ಲಿ ಸತಗರು ಸೇವಾಲಾಲ್ ಮಹಾರಾಜರ ಭೋಗ್ ಕಾರ್ಯಕ್ರಮ ನಡೆಯುತ್ತಿರುವುದರಿಂದ ಶ್ರವಣ ಮಾಸದ 17/08/2024ರಂದು ಶನಿವಾರದಂದು ಜೈರಾಮ್ ಹರವತ್ ಮನೆಯ ಆವರಣದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಬಂಜಾರ ಸಮಾಜದ ಅನೇಕ ಲೇಖಕರು, ಬರಹಗಾರರು, ಅಂಕಣಕಾರರು, ಸಾಹಿತಿಗಳಿದ್ದರೂ ಅವರುಗಳನ್ನು ಕಡೆಗಣಿಸಲಾಗುತ್ತಿದೆ. ಅವರಿಗೆ ಸಿಗಬೇಕಾದ ಯೋಗ್ಯ ಸ್ಥಾನಮಾನಗಳು, ಗೌರವ ಪ್ರತಿಷ್ಟೆಗಳು ಸಿಗುತ್ತಿಲ್ಲ. ಬಂಜಾರ ಸಮುದಾಯಕ್ಕೆ ಸೇರಿದ ಶಾಸಕರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅವರನ್ನು ನೇರವಾಗಿ ನೀವು ಸಮಾಜಕ್ಕೆ ಯಾವ ಕೊಡುಗೆ ನೀಡಿದ್ದೀರಿ ಎಂದು ಪ್ರಶ್ನಿಸುವಂತಾಗಿದೆ ಎಂದರು.
ಚಂದು ಹರಾವತ್ ಅವರು ಬಂಜಾರ ಸಂಸ್ಕೃತಿ ಕುರಿತು ಮಾತನಾಡಿದರು. ನಮ್ಮ ತಾಯಂದಿರು ಮೊದಲು ನಮ್ಮ ಸಮಾಜದ ಬಗ್ಗೆ ಅರಿತರೆ ಸಾಕು ಸಮಾಜ ಬೆಳೆಯಲ್ಲೂ ಅಸಾಧ್ಯವಾಗುತ್ತದೆ ಇದು ತಿಳ್ಳಿಸಿದರು .
ಇದೆ ಸಂದರ್ಭದಲ್ಲಿ ಹರಿಕೃಷ್ಣ ಮೂಡ್, ಜೈರಾಮ್ ಹರವತ್, ಕೃಷ್ಣ್ ಜಾಧವ, ವಿನೋದ ಪವಾರ್, ಸೋಮಲಪ್ಪ ಪವಾರ್, ಸೀತಾಬಾಯಿ, ಪವಾರ್, ಬಾಲಚಂದ್ರ ಮೋತಿಲಾಲ್ ನಾಯಕ್, ಗೋಪಾಲ ಹರಾವತ್, ಸಂತೋಷ ಪವಾರ್ , ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು