2:50 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಅಭಿಮಾನಿಯಿಂದ ಪ್ರಧಾನಿ ಮೋದಿಗೆ ಭಾವಚಿತ್ರ ನೀಡುವಾಸೆ: ತಾನೇ ಕೈಯಾರೆ ರಚಿಸಿದ ಚಿತ್ರಪಟ

11/04/2024, 23:35

ಮಂಗಳೂರು(reporterkarnataka.com): ಬದುಕು ಕಟ್ಟಿಕೊಳ್ಳಲು ಹಲವು ಮಾರ್ಗಗಳಿವೆ. ಎಲ್ಲರಿಗೂ ಅವರದ್ದೇ ಅದ ಪ್ರೊಪೇಶನ್ ಇರುತ್ತದೆ. ವೈದ್ಯರು, ವಕೀಲರು, ಎಂಜಿನಿಯರ್ ವೃತ್ತಿಯಿಂದ ಆರಂಭಗೊಂಡು ಆ್ಯಕ್ಟರ್, ಕಲಾವಿದರು, ಕಲಾಕಾರರು ಇರುತ್ತಾರೆ. ನಾವು ಈಗ ಹೇಳಲು ಹೊರಟಿರುವುದು ಓರ್ವ ಪ್ರತಿಭಾವಂತ ಯುವ ಕಲಾವಿದನ ಕುರಿತು…
ಹಾಗಾದರೆ ಯಾರು ಈ ಕಲಾವಿದ ಎಂಬುದನ್ನು ನೋಡೋಣ ಬನ್ನಿ.
ಪುತ್ತೂರಿನ ಪಾಣಾಜೆ ನಿವಾಸಿಯಾದ ದಿ. ಶಂಕರ ಮೂಲ್ಯ-ಲಕ್ಷ್ಮಿ ಅವರು ಪುತ್ರ ಯೋಗೀಶ್ ಕಡಂದೇಲು ಅವರೇ ಯುವ ಕಲಾವಿದರು.
ಬಣ್ಣಗಳ ಜೊತೆಗೆ ಬದುಕು ಕಟ್ಟಿಕೊಳ್ಳಲು ಹೊರಟವರು ಇವರು. ಕಲಾವಿದರು ಹಲವು ಬಣ್ಣ ಬಣ್ಣದ ಕನಸು ಕಾಣುತ್ತಲೇ ಇರುತ್ತಾರೆ. ಯೋಗೀಶ್ ಅವರದ್ದು ಸ್ವಲ್ಪ ಡಿಫರೆಂಟ್ ಕನಸು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಕೈಯಾರೆ ರಚಿಸಿದ ಭಾವಚಿತ್ರವನ್ನು ಕೊಡಬೇಕೆನ್ನುವುದು ಇವರ ಕನಸು.

ಯೋಗೀಶ್ ಅವರಿಗೆ
ತನ್ನ ಸಣ್ಣ ಪ್ರಾಯದಲ್ಲಿಯೇ ಚಿತ್ರಕಲೆಯ ಮೇಲೆ ಆಸಕ್ತಿ ಹೊಂದಿದ್ದರು. ಅರಣ್ಯ ಪ್ರದೇಶದೊಳಗಿರುವ ತನ್ನ ಮನೆಯಿಂದ ಶಾಲೆಗೆ ಪ್ರತಿನಿತ್ಯ 2 ಕಿ.ಮೀ. ದೂರ ಕ್ರಮಿಸಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದರು. ಪ್ರೌಢ ಶಿಕ್ಷಣದ ಸಂದರ್ಭದಲ್ಲಿ ತನ್ನ ತಂದೆಯನ್ನು ಕಳೆದುಕೊಂಡರು. ತಂದೆಯ ಅಕಾಲಿಕ ಮರಣದಿಂದ ಶಿಕ್ಷಣವನ್ನು ಮೊಟುಕುಗೊಳಿಸಿ, ಕೂಲಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು. ಸಂಜೆ ಬಿಡುವಿನ ಸಮಯದಲ್ಲಿ ತನ್ನ ಚಿತ್ರಕಲೆ ಅಭ್ಯಾಸವನ್ನು ಮುಂದುವರಿಸಿದರು. ಅವರ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿ ಶಾರದಾ ಹಾಗೂ ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಲಿತಾ ಹೆಗ್ಡೆ ಅವರು ಮರಳಿ ಶಿಕ್ಷಣವನ್ನು ಪಡೆಯುವಂತೆ ಮಾಡಿದರು.
ನಂತರ ರೆಂಜದ ಶ್ರೀ ಗುರು ಟುಟೋರಿಯಲ್‌ನಲ್ಲಿ ನೇರ ಹತ್ತನೇ ತರಗತಿಯ ಪರೀಕ್ಷೆಯ ಸಿದ್ಧತೆ ನಡೆಸಿದರು. ಅಲ್ಲಿನ ಶಿಕ್ಷಕರಾದ ಮೀನಾಕ್ಷಿ ಮಂಜುನಾಥ್ ಮತ್ತು ಮಂಜುನಾಥ್ ಅವರ ಸಂಪೂರ್ಣ ಸಹಕಾರದಲ್ಲಿ ಹತ್ತನೇ ತರಗತಿಯಲ್ಲಿ ತೇರ್ಗಡೆಗೊಂಡು, ಮುಂದೆ ಪಿಯುಸಿ ಶಿಕ್ಷಣವನ್ನು ಕೂಡ ಅಲ್ಲೇ ಪೂರೈಸಿದರು. ಇದಾದ ಬಳಿಕ ಮತ್ತೊಬ್ಬ ಶಿಕ್ಷಕ ಪ್ರಕಾಶ್ ಎಂಬವರ ಪ್ರೇರಣೆಯಿಂದ ಮೈಸೂರಿನ ಚಿತ್ರಕಲಾ ಯುನಿವರ್ಸಿಟಿ ಒಂದರಲ್ಲಿ ಮೂರು ವರ್ಷಗಳ ಕಾಲ ಚಿತ್ರಕಲೆಯನ್ನು ಅಭ್ಯಸಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.
ಇವರಿಗೆ ಚಿತ್ರಕಲೆ ದೈವದತ್ತವಾಗಿ ಒಲಿದು ಬಂದ ವಿದ್ಯೆ. ತನ್ನ ವಿದ್ಯಾಭ್ಯಾಸದ ದಿನಗಳಲ್ಲಿ ಚಿತ್ರಗಳನ್ನು ಬರೆದು ಬಹುಮಾನವನ್ನು ಗಿಟ್ಟಿಸಿಕೊಳ್ಳುತ್ತಾ, ಎರಡನೇ ತರಗತಿಯಲ್ಲೇ ಸ್ಲೆಟಿನಲ್ಲಿ ಚಿತ್ರ ಬರೆದು ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದರು. ಮುಂದೆ ಸ್ನೇಹಿತರ ಪ್ರೋತ್ಸಾಹವೇ ಇವರನ್ನು ಈ ಮಟ್ಟಕ್ಕೆ ಬೆಳೆಸುವಲ್ಲಿ ಸಹಕಾರಿಯಾಯಿತು ಎನ್ನುತ್ತಾರೆ ಯೋಗೀಶ್ ಕಡಂದೇಲು.
ಶಿಕ್ಷಣದ ಬಳಿಕ ತೈಲ ವರ್ಣಗಳಲ್ಲಿ ಸಾಕಷ್ಟು ಪರಿಣತಿಯನ್ನು ಪಡೆದಿದ್ದ ಇವರು ಅನೇಕ ಚಿತ್ರಗಳನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯನ್ನು ಪಡೆದಿದ್ದರು. ಇದೇ ಸಮಯ ನಾರಾಯಣ ಪ್ರಕಾಶ್ ನೆಲ್ಲಿತ್ತುಮಾರ್ ಇವರ ನೇತೃತ್ವದಲ್ಲಿ ಸುವರ್ಣ ವಾಹಿನಿ ಮತ್ತು ಈ ಟಿವಿ ವಾಹಿನಿಯ ಸಂದರ್ಶನ ಇವರ ಬೆಳವಣಿಗೆಗೆ ಮತ್ತಷ್ಟು ಪ್ರೇರಣೆಯಾಯಿತು. ಇದರಿಂದಾಗಿ ಏಷ್ಯಾದ ಅತಿ ವೇಗದ ಚಿತ್ರಗಾರ ವಿಲಾಸ್ ನಾಯಕ್ ಅವರ ಗೆಳೆತನ ಸುಯೋಗ ಒದಗಿಬಂತು. ಜೊತೆಗೆ ಝಿ ಟಿವಿ ಸರಿಗಮ ಕಾರ್ಯಕ್ರಮದ ವಿಜಯ್ ಪ್ರಕಾಶ್ ಅವರ ಭೇಟಿ, ಈ ಎಲ್ಲಾ ಅವಕಾಶಗಳು ಕೂಡ ಇವರಿಗೆ ಮತ್ತಷ್ಟು ವಿಪುಲ ಅವಕಾಶಕ್ಕೆ ದಾರಿಯಾಯಿತು.


ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ತೈಲ ಚಿತ್ರವನ್ನು ಬಿಡಿಸಿ ಅದನ್ನು ಅವರಿಗೆ ಸಮರ್ಪಿಸುವುದರ ಮೂಲಕ ಅವರಿಂದಲೂ ಸೈ ಎನಿಸಿಕೊಂಡು ತಾನೊಬ್ಬ ಸಮರ್ಥ ತೈಲವರ್ಣಚಿತ್ರ ಕಲಾವಿದನೆಂಬ ಪ್ರಶಂಸೆಗೆ ಪಾತ್ರರಾದರು. ಇದೀಗ ಪೆನ್ಸಿಲ್ ಬಾಕ್ಸ್ ಎಂಬ ಚಲನಚಿತ್ರದಲ್ಲಿ ಮೊತ್ತ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕಲಾನಿರ್ದೇಶಕನ ಸ್ಥಾನವನ್ನು ನಿಭಾಯಿಸಿ ಯಶಸ್ವಿಯಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು