ಇತ್ತೀಚಿನ ಸುದ್ದಿ
ಜಪ್ಪು ಸಿ.ಎಸ್.ಐ. ಕಾಂತಿ ದೇವಾಲಯಕ್ಕೆ ಪದ್ಮರಾಜ್ ಆರ್. ಭೇಟಿ: ಈಸ್ಟರ್ ಶುಭಾಶಯ ಕೋರಿದ ಕಾಂಗ್ರೆಸ್ ಅಭ್ಯರ್ಥಿ
31/03/2024, 18:00

ಮಂಗಳೂರು(reporterkarnataka.com): ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಭಾನುವಾರ ಜಪ್ಪು ಸಿ.ಎಸ್.ಐ. ಕಾಂತಿ ದೇವಾಲಯಕ್ಕೆ ಭೇಟಿ ನೀಡಿದರು.
ಈಸ್ಟರ್ ಹಬ್ಬದ ಸಂಭ್ರಮದಲ್ಲಿದ್ದ ಕ್ರೈಸ್ತ ಬಂಧುಗಳಿಗೆ ಶುಭಾಶಯ ಕೋರಿದರು.
ಸಿ.ಎಸ್.ಐ. ಕಾಂತಿ ದೇವಾಲಯದ ಧರ್ಮಗುರು ರೆ.ಫಾ. ಎಬ್ನೆಝೆರ್ ಜತನ್ನಾ ಪ್ರಾರ್ಥನೆ ಸಲ್ಲಿಸಿದರು.
ಜಯಕರ ಸಮರ್ಥ, ಶೆರಿನ್ ಅಯೊನಾ , ಶಾನ್, ಟಿ.ಕೆ. ಸುಧೀರ್, ಸುನಿಲ್ ರಾಜ್ ಪೂಜಾರಿ, ಸೌಹಾನ್ ಎಸ್.ಕೆ., ರಮಾನಂದ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.