3:41 AM Tuesday1 - September 2026
ಬ್ರೇಕಿಂಗ್ ನ್ಯೂಸ್
ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.…

ಇತ್ತೀಚಿನ ಸುದ್ದಿ

ಮನೆ ಬಾಗಿಲಿಗೆ ಬಂದ ದೈತ್ಯ ಮೊಸಳೆ!: ಮರಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು!!

12/06/2023, 10:50

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಬೇಸಿಗೆ ಹೊಡೆತಕ್ಕೆ ದಿನದಿಂದ ದಿನಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ನದಿ ಒಡಲಿನಿಂದ ಮೊಸಳೆಗಳು ಆಹಾರಗಳನ್ನು ಆರಿಸಿ ರೈತರ ತೋಟದ ವಸತಿ ಪ್ರದೇಶಕ್ಕೆ ಆಗಮಿಸಿದ್ದು,ಗ್ರಾಮಸ್ಥರು ಭೀತಿಗೊಂಡಿದ್ದಾರೆ.
ರೈತರಿಗೆ ಒಂದು ಕಡೆ ತಮ್ಮ ಪ್ರಾಣದ ಭೀತಿ ಎದುರಾದರೆ, ಇನ್ನೊಂದು ಕಡೆ ತಮ್ಮ ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಬೃಹದಾಕಾರದ ಮೊಸಳೆಯನ್ನು ಗಿಡಕ್ಕೆ ಕಟ್ಟಿಹಾಕಿ ಅಪಾಯಕಾರಿ ಸಾಹಸವನ್ನು ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ದರ್ಗಾ ಗ್ರಾಮದ ನದಿ ತೀರದ ಜನ ವಸತಿ ಪ್ರದೇಶಗಳಿಗೆ ನಸುಕಿನ ಜಾವ 3 ಗಂಟೆ ಆಸುಪಾಸಿನಲ್ಲಿ ಪ್ರಕಾಶ ಸನದಿ ಎಂಬುವರ ಮನೆಯ ಬಳಿ ದೈತ್ಯಾಕಾರದ ಮೊಸಳೆ ಪತ್ತೆಯಾಗಿತ್ತು. ಇದೇ ವೇಳೆ ರೈತರು ಸಾಕಿರುವ ಪ್ರಾಣಿಗಳ ಮೇಲೆ ದಾಳಿ ಮಾಡಕ್ಕೆ ಮುಂದಾಗುತ್ತಿದ್ದಂತೆ ಕುಟುಂಬಸ್ಥರು ದೊಣ್ಣೆಯಿಂದ ಮೊಸಳೆಯನ್ನು ಹೊಡೆದು ಅಕ್ಕ ಪಕ್ಕದ ರೈತರು ಒಟ್ಟಾಗಿ ಮೊಸಳೆಯನ್ನು ಕಟ್ಟಾಕಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೊಸಳೆಯನ್ನು ರಕ್ಷಣೆ ಕಾರ್ಯ ಮಾಡಿದ್ದಾರೆ.


ಇದೆ ವೇಳೆ ರೈತ ಪ್ರಕಾಶ ಸನದಿ ಮಾತನಾಡಿ, ನಸುಕಿನ ಮೂರು ಗಂಟೆಗೆ ಮೊಸಳೆ ಮನೆಗೆ ಬಂದಿತ್ತು, ನಮ್ಮ ಆಡಿನ ಮರಿಯನ್ನು ಮೊಸಳೆ ಹಿಡಿದಿತ್ತು. ಅವಾಗ ಮೇಕೆಗಳ ಚೀರಾಟ ಮಾಡುತ್ತಿದ್ದಂತೆ ನಾವು ಎಚ್ಚೆತ್ತುಕೊಂಡು ನಾವು ಮೊಸಳೆ ಬಾಯಿಂದ ನಮ್ಮ ಆಡದ ಮರಿಯನ್ನು ರಕ್ಷಣೆ ಮಾಡಿದ್ದೆವು, ನಂತರ ತೊಟದ ಜನರು ಸೇರಿ ಮೊಸಳೆಯನ್ನು ಹಗ್ಗದ ಸಹಾಯದಿಂದ ಮರಕ್ಕೆ ಕಟ್ಟಿಹಾಕಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ನದಿಯಲ್ಲಿ ನೀರು ಕಡಿಮೆ ಆಗುತ್ತಿದ್ದಂತೆ ಮೊಸಳೆಗಳು ಕೃಷಿ ಜಮೀನಿನಲ್ಲಿ ಬರುತ್ತಿದ್ದಾವೇ ನಮಗೆ ತುಂಬಾ ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನದಿ ತೀರದಲ್ಲಿ ಇದ್ದು ನಮಗೆ ರಕ್ಷಣೆ ನೀಡಬೇಕು ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು