12:24 AM Tuesday7 - April 2026
ಬ್ರೇಕಿಂಗ್ ನ್ಯೂಸ್
ಕೊಡಗಿನ ಅಳಿಯನಿಗೆ ಭರ್ಜರಿ ಪಾರ್ಟಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತವರಿನಲ್ಲಿ ಅದ್ದೂರಿ… ಎನ್.ಆರ್.ಪುರ: ಶಿವಮೊಗ್ಗದ ನರ್ಸ್ ಆತ್ಮಹತ್ಯೆ; ಹೊಳೆಗೆ ಹಾರಿ ಜೀವತ್ಯಾಗ Kodagu | ನಟಿ ರಶ್ಮಿಕಾ ಮಂದಣ್ಣಗೆ ತಂದೆಯಿಂದ ವಿರಾಜಪೇಟೆಯ “ಸೆರಿನಿಟಿ ಕಾಟೇಜ್” ಗಿಫ್ಟ್ ಮಧ್ಯಪ್ರಾಚ್ಯ ಯುದ್ಧ: ಕೊಡಗಿನಲ್ಲಿ ಸಿಲುಕಿದ ಇರಾನಿ ದಂಪತಿ; ಪಾಸ್‌ಪೋರ್ಟ್ ಆತಂಕ ಬಾಗಲಕೋಟೆ ಉಪ ಚುನಾವಣೆ | ಬಿಜೆಪಿ ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು… ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಗೆಡಿಸಿದ ಉಪ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ Bangalore | ಅಡುಗೆ ಅನಿಲ ದಾಸ್ತಾನು ಕೊರತೆ ಇಲ್ಲ: ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ… ಮಂಜೇಶ್ವರ ದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ | ಪ್ರಧಾನಿ ಮೋದಿ ಅವರಿಂದ ಆಹಾರ… ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ

ಇತ್ತೀಚಿನ ಸುದ್ದಿ

ಹೈಟೆಕ್ ಸೆಕ್ಸ್ ದಂಧೆ: ಬೆಂಗಳೂರಿನ ಯುವತಿ ಸೇರಿದಂತೆ 12 ಮಂದಿ ಬಂಧನ;  ವ್ಯವಸ್ಥಿತ ಜಾಲಕ್ಕೆ ರಾಜಕೀಯ ನಂಟು?

14/09/2022, 13:46

ಭೂಪಾಲ್ (reporterkarnataka.com):ಹೈ ಪ್ರೊಫೈಲ್ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಅಪರಾಧ ನಿಗ್ರಹ ಮತ್ತು ಸೈಬರ್​ ಘಟಕ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ 11 ಯುವತಿಯರು ಹಾಗೂ ಓರ್ವ ಕಿಂಗ್​​ಪಿನ್​ ಬಂಧಿಸಲಾಗಿದೆ. ವ್ಯವಸ್ಥಿತ ಜಾಲಕ್ಕೆ ರಾಜಕೀಯ ನಂಟಿನ ವಾಸನೆ ಬಡಿಯಲಾರಂಭಿಸಿದೆ. ಇದೆಲ್ಲ ನಡೆದದ್ದು ಮಧ್ಯಪ್ರದೇಶದ ರಾಯ್ಪುರದಲ್ಲಿ.

ಹೋಟೆಲ್​​​ನಲ್ಲಿ ಈ ಅಕ್ರಮ ದಂಧೆ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಅದರ ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ.

11 ಯುವತಿಯರು, ಓರ್ವ ಕಿಂಗ್​ಪಿನ್​ ಬಂಧನ:

ರಾಯ್ಪುರ್​​ದ ಪ್ರಮುಖ ಫೋರ್​​​ಸ್ಟಾರ್​​ ಹೋಟೆಲ್​​ನಲ್ಲಿ ಹೈ-ಪ್ರೊಫೈಲ್​ ಸೆಕ್ಸ್ ರಾಕೆಟ್ ದಂಧೆ ನಡೆಸಲಾಗ್ತಿತ್ತು. ಇಂದು ಬೆಳಗ್ಗೆ ಪೊಲೀಸರು ದಿಢೀರ್​ ದಾಳಿ ನಡೆಸಿದ್ದು, ಈ ವೇಳೆ ಬೆಂಗಳೂರಿನ ಓರ್ವ ಯುವತಿ ಸೇರಿದಂತೆ 11 ಹುಡುಗಿಯರು ಹಾಗೂ ಓರ್ವ ಕಿಂಗ್​ ಪಿನ್​ ಬಲೆಗೆ ಬಿದ್ದಿದ್ದಾರೆ.

ಬಂಧಿತ ಯುವತಿಯರು ಮೂಲತಃ ನೇಪಾಳ, ಮುಂಬೈ, ದೆಹಲಿ, ಗುಜರಾತ್​ ಮತ್ತು ಬೆಂಗಳೂರು ಮೂಲದವರು ಎಂದು ವರದಿಯಾಗಿದೆ. ಇವರೆಲ್ಲರೂ ಸೆಕ್ಸ್ ರಾಕೆಟ್ ದಂಧೆಗೆ ಇಳಿದಿದ್ದರು. ಬಂಧಿತ ಹುಡುಗಿಯರ ಮೊಬೈಲ್​ ಫೋನ್​​ಗಳಲ್ಲಿನ ಚಾಟ್ ಸಂದೇಶ ಚೆಕ್​ ಮಾಡಿರುವ ಪೊಲೀಸರಿಗೆ ಶಾಕ್ ಆಗಿದ್ದು, ಇದರಲ್ಲಿ ಕೆಲ ರಾಜಕೀಯ ನಾಯಕರ ಹೆಸರು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅವರ ಹೆಸರು ಬಹಿರಂಗಪಡಿಸಿಲ್ಲ.

ರಾಜಕೀಯ ನಾಯಕರ ನಂಟು: ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿರುವ ಯುವತಿಯರು ಅನೇಕ ರಾಜಕೀಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದು, ಅವರು ಬಳಕೆ ಮಾಡ್ತಿದ್ದ ಮೊಬೈಲ್​ ಫೋನ್​​ಗಳಿಂದ ಈ ಮಹತ್ವದ ಮಾಹಿತಿ ಹೊರಬಿದ್ದಿದೆ. ಆದರೆ, ಯಾವೆಲ್ಲ ರಾಜಕೀಯ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಹೊರಹಾಕಿಲ್ಲ.

ಹೋಟೆಲ್​​ನಲ್ಲಿ ಸೆಕ್ಸ್​ ದಂಧೆ ನಡೆಯುತ್ತಿದ್ದ ಬಗ್ಗೆ ರಾಯ್ಪುರ್​​ ಪೊಲೀಸ್​ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕಕ್ಕೆ ದೂರು ನೀಡಲಾಗಿತ್ತು. ಇದಕ್ಕೋಸ್ಕರ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಎಸ್​​​ಎಸ್​ಪಿ ಅಭಿಷೇಕ್​​ ಮಹೇಶ್ವರಿ ಅವರ ಸೂಚನೆಯಂತೆ ಹೋಟೆಲ್​ಗೆ ವಿಶೇಷ ತಂಡ ಲಗ್ಗೆಹಾಕಿತ್ತು. ಈ ವೇಳೆ, ದಂಧೆ ನಡೆಯುತ್ತಿರುವುದು ಕಂಡು ಬಂದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಅಪರಾಧಿಗಳ ಬಂಧನ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು