1:31 AM Friday3 - July 2026
ಬ್ರೇಕಿಂಗ್ ನ್ಯೂಸ್
Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ

ಇತ್ತೀಚಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 68 ಶಿಕ್ಷಕರಲ್ಲಿ ಕೊರೊನಾ ಪಾಸಿಟಿವ್ !

28/01/2022, 12:40

ಮಂಗಳೂರು (reporterkarnataka.com)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜ.1 ರಿಂದ 27 ರವರೆಗೆ ಒಟ್ಟು 421 ಶಾಲಾ ಮಕ್ಕಳು ಮತ್ತು 68 ಶಿಕ್ಷಕರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ ಎಂದು ಸಚಿವ ಡಾ.ಸುಧಾಕರ್ ಮಾಹಿತಿಯನ್ನು ನೀಡಿದ್ದಾರೆ.

ದ. ಕ ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಂಕಿಗೊಳಗಾಗಿದ್ದಾರೆ.

ಅಲ್ಲದೆ ಜಿಲ್ಲೆಯ 68 ಶಾಲಾ ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆ ಹೆಚ್ಚು ಸೋಂಕು ಇರುವ ಶಾಲೆಗಳನ್ನು ಬಂದ್ ಮಾಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಮಂಗಳೂರಿನಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಶೂನ್ಯದಲ್ಲಿದೆ ಎಂದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದ. ಕ ದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಐದಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾದರೂ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು