3:55 PM Thursday10 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಆಧ್ಯಾತ್ಮ ಎನ್ನುವ ವಿಷಯ ನೀಡಿದರೆ ಮುಂದಿನ ವರ್ಷ ನಾರಾಯಣ ಗುರುಗಳ ಸ್ತಬ್ಧಚಿತ್ರ : ಸಚಿವ ವಿ.ಸುನೀಲ್ ಕುಮಾರ್

28/01/2022, 13:28

ಮಂಗಳೂರು(ReporterKarnataka.com) ಮುಂದಿನ ವರ್ಷ ಗಣರಾಜ್ಯೋತ್ಸವದ ಪರೇಡ್‌ಗೆ ಆಧ್ಯಾತ್ಮ ಎಂಬ ವಿಷಯವನ್ನು ಕೊಟ್ಟರೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಕಳುಹಿಸುತ್ತೇವೆ ಎಂದು ದ.ಕ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ.

ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಮಾಧ್ಯಮದ ಜತೆ ಮಾತನಾಡಿದ ಅವರು,
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕೇಂದ್ರ ಸರ್ಕಾರದ ಸಮಿತಿ ಅಮೃತಮಹೋತ್ಸವ ಎಂಬ ವಿಷಯದ ಸ್ತಬ್ದಚಿತ್ರ ಕಳುಹಿಸಲು ಹೇಳಿತ್ತು.

ಮುಂದಿನ ವರ್ಷ ಯಾವ ಆಯಾಮದಲ್ಲಿ ಸ್ತಬ್ಥಚಿತ್ರ ಕಳುಹಿಸಬೇಕು ಎಂಬುವುದನ್ನು ಕೇಂದ್ರ ಸರಕಾರದ ಸಮಿತಿ ತೀರ್ಮಾನಿಸುತ್ತದೆ. ಮುಂದಿನ ವರ್ಷ ಪ್ರವಾಸೋದ್ಯಮ, ಅರಣ್ಯ ಹೀಗೆ ವಿಷಯ ನೀಡಿದರೆ ಅದಕ್ಕೆ ತಕ್ಕುದಾದ ಸ್ತಬ್ಧಚಿತ್ರ ಕಳುಹಿಸುತ್ತೇವೆ. ಆಧ್ಯಾತ್ಮ ಎಂಬ ವಿಷಯ ಕೊಟ್ಟರೆ ನಾರಾಯಣ ಗುರು ಸ್ತಬ್ಧಚಿತ್ರ ಕಳುಹಿಸುತ್ತೇವೆ ಎಂದು ಹೇಳಿದರು.

ಈ ಬಾರಿಯ ನಾರಾಯಣ ಗುರು ಟ್ಯಾಬ್ಲೋ ವಿಚಾರವನ್ನು ಕೇರಳ ಸರ್ಕಾರ ರಾಜಕೀಯಗೊಳಿಸಿದೆ. ನಾರಾಯಣ ಗುರುಗಳನ್ನು ಬಿಜೆಪಿ ರಾಜಕಾರಣಕ್ಕೆ ಈ ಹಿಂದೆಯೂ ಬಳಸಿಲ್ಲ.
ಮುಂದೆಯೂ ಬಳಸಲ್ಲ. ಕಾಂಗ್ರೆಸ್‌ ಇದನ್ನು ರಾಜಕೀಯಗೊಳಿಸಿರಬಹುದು. ಅವರ ಆದರ್ಶಗಳನ್ನು ಸರ್ಕಾರದ ಕಾರ್ಯಕ್ರಮಗಳಲ್ಲಿ ಬಳಸುತ್ತೇವೆ.

ಲೇಡಿಹಿಲ್‌ ಸರ್ಕಲ್‌ಗೆ ಶೀಘ್ರ ಕಾನೂನಾತ್ಮಕ ನಾಮಕರಣ
ಲೇಡಿಹಿಲ್‌ ಸರ್ಕಲ್‌ಗೆ ನಾರಾಯಣ ಗುರು ಹೆಸರಿಡಬೇಕು ಎನ್ನುವುದು ಬಿಜೆಪಿಯ ಮಹಾನಗರ ಪಾಲಿಕೆಯ ನಿರ್ಣಯ. ಅದು ನಮ್ಮ ಬದ್ಧತೆ. ಇದರಲ್ಲಿ ರಾಜಕಾರಣ ಇಲ್ಲ. ಕಾನೂನು ಬದ್ದವಾಗಿ ಆಗಬೇಕು ಎನ್ನುವುದು ಶಾಸಕ, ಕಾರ್ಪೋರೇಟರ್‌ಗಳ ಅಭಿಪ್ರಾಯ. ಇದು ಅಂತಿಮ ಹಂತದಲ್ಲಿದೆ. ಇದರ ಮೊದಲೇ ಬೋರ್ಡ್ ಹಾಕಿದರೆ ನಮ್ಮ ಆಕ್ಷೇಪ ಏನಿಲ್ಲ. ಅತ್ಯಂತ ಶೀಘ್ರವಾಗಿ ಅಧಿಕೃತವಾಗಿ ನಾಮಕರಣ ಮಾಡುತ್ತೇವೆ ಎಂದರು.

ಈ ವೇಳೆ ಶಾಸಕರದಾದ ವೇದವ್ಯಾಸ್‌ ಕಾಮತ್‌, ಉಮನಾಥ್‌ ಕೋಟ್ಯಾನ್‌, ಡಾ. ಭರತ್‌ ಶೆಟ್ಟಿ ಮತ್ತಿತರರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು