7:34 AM Tuesday26 - May 2026
ಬ್ರೇಕಿಂಗ್ ನ್ಯೂಸ್
ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು… ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಪಿಡಿಒ ನಿರ್ಲಕ್ಷ್ಯ ವಿರುದ್ಧ ನಿವೃತ್ತ ಅಧಿಕಾರಿಯಿಂದ ತಾಪಂ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ

05/12/2021, 18:56

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ಪಿಡಿಓ ನಿರ್ಲಕ್ಷ್ಯ ಧೋರಣೆ ಖಂಡಿಸಿ ನಿವೃತ್ತ ಅಧಿಕಾರಿ ಬಿ.ಡಿ.ಓಬಪ್ಪರವರು ಕೂಡ್ಲಿಗಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಏಕಾಂಗಿಯಾಗಿ ಉಪವಾಸ ಧರಣಿ ಸತ್ಯಾಗ್ರಹ ಕುಳಿತಿದ್ದಾರೆ. 

ತಾಲೂಕಿನ ಗುಂಡು ಮುಣುಗು ಗ್ರಾಮ ಪಂಚಾಯಿತಿಯಲ್ಲಿರುವ ಆಸ್ತಿಪತ್ರಕ್ಕೆ ಸಂಬಂಧಿಸಿದ ಕಡತ, ಹತ್ತಾರು ತಿಂಗಳುಗಳಿಂದ ಪಿಡಿಓ ರಾಮಕೃಷ್ಣ ರ ಬಳಿಯಿದ್ದು ಅವರು ಕಡತ ವಿಲೇವಾರಿ ಮಾಡದೇ ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ. ಹಲವು ತಿಂಗಳುಗಳಿಂದ ವಿನಾ ಕಾರಣ ತಮ್ಮನ್ನು ಅಲೆದಾಡಿಸುತ್ತಿದ್ದಾರೆಂದು ಭೀಮ ಸಮುದ್ರ ಗ್ರಾಮದ ಬಿ.ಡಿ.ಓಬಪ್ಪ ಆರೋಪಿಸಿದ್ದಾರೆ, ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಅಧಿಕಾರಿ ಜಿ.ಎಂ.ಬಸಣ್ಣ ಅವರ ಗಮನಕ್ಕೆ ಲಿಖಿತವಾಗಿ ತಂದಿದ್ದು. ಅವರೂ ಕೂಡ ಸ್ಪಂದಿಸಿಲ್ಲ ಅವರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ. 

ಇಲಾಖಾ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದರಿಂದಾಗಿ ಕುಪಿತಗೊಂಡ
ಪಿಡಿಓ ರಾಮಕೃಷ್ಣ ತಮ್ಮೊಂದಿಗೆ ಇನ್ನೂ ಉದ್ಧಟನದಿಂದ ವರ್ತಿಸುತ್ತಿದ್ದಾರೆಂದು ಬಿ.ಡಿ. ಓಬಪ್ಪ ದೂರಿದ್ದಾರೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣರವರ ಅನುಚಿತ ವರ್ತನೆ ಹಾಗೂ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ತಾಪಂ ಅಧಿಕಾರಿ ಜಿ.ಎಂ.ಬಸಣ್ಣರವರೂ ಕೂಡ ಬೇಜವಾಬ್ದಾರಿಯನ್ನು  ತೋರುತ್ತಿದ್ದು,ಈ ಅವ್ಯವಸ್ಥೆಯನ್ನು ತಾವು ಖಂಡಿಸಿ ಉಪವಾಸ ಧರಣಿ ಸತ್ಯಾಗ್ರಹ ಮಾಡಿತ್ತಿರುವುದಾಗಿ ಓಬಣ್ಣ ತಿಳಿಸಿದ್ದಾರೆ.

ಅವರು ಬೆಳಿಗ್ಗೆಯಿಂದಲೇ ಕೂಡ್ಲಿಗಿ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಏಕಾಂಗಿಯಾಗಿ ಧರಣಿ ಉಪವಾಸ ಸತ್ಯಾಗ್ರಹ ಮಾಡಿದರು.ತಾಪಂ ಕೆಲ ಸಿಬ್ಬಂದಿಯವರು ಅವರ ಉಪವಾಸ ಧರಣಿ ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸೋ ಪ್ರಯತ್ನ ನಡೆಸಿದರು. ಆದರೆ ಅದಾವುದಕ್ಕೂ ಬಗ್ಗದ ಓಬಣ್ಣ ತಮ್ಮ ಉಪವಾಸ ಧರಣಿ ಮುಂದುವರೆಸಿದರು. ಈ ಸಂಬಂಧಿಸಿದಂತೆ ಅವರು ಹೇಳಿಕೆ ನೀಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸ್ಪಂಧಿಸದಿದ್ದಲ್ಲಿ ಶೀಘ್ರವೇ ವಿಜಯನಗರದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಚೇರಿ ಬಳಿ ತಾವು ಏಕಾಂಗಿಯಾಗಿ ಉಪವಾದ ಧರಣಿ ಸತ್ಯಾಗ್ರಹ ಮಾಡೋ ಮೂಲಕ,ಅವ್ಯವಸ್ಥೆ ವಿರುದ್ಧ ಹೋರಾಟ  ಮುಂದುವರೆಸುವುದಾಗಿ ಓಬಣ್ಣ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು