4:00 PM Sunday29 - November 2026
ಬ್ರೇಕಿಂಗ್ ನ್ಯೂಸ್
ನಶಾಮುಕ್ತ ಯುವಜನತೆಯು ವಿಕಸಿತ ಭಾರತದ ಭದ್ರ ಬುನಾದಿ: ರಾಜ್ಯಪಾಲರಾದ ಡಾ. ಸುಧಾ ಯಾದವ್ ಪಶ್ಚಿಮ ಬಂಗಾಳಕ್ಕೆ ಇನ್ನು ಮುಂದೆ ಹೊಸ ಹೆಸರು!: ಮರು ನಾಮಕರಣಕ್ಕೆ ಅದೊಂದೇ ಕಾರಣ! ಮೇಕೆದಾಟು ಯೋಜನೆ : ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ಮೂಡಿಗೆರೆ | ಮುತ್ತಿಗೆಪುರ ಗ್ರಾಮದ ವಿಂಧನ್ ಮನೆ ಮೇಲೆ ಗುಂಡಿನ ದಾಳಿ: ಕೂದಲೆಳೆಯ… ಆಫ್ರಿಕಾದ ಕಾಂಗೋದಲ್ಲಿ 95 ಕನ್ನಡಿಗರ ಬಂಧನ: ಶಿವಮೊಗ್ಗ, ದಾವಣಗೆರೆಯ ಹಕ್ಕಿಪಿಕ್ಕಿ ಸಮುದಾಯ ಏಜೆಂಟರ… ಚಿಕ್ಕಮಗಳೂರು | ಬಸವ ಮಂಟಪ ಪುಸ್ತಕದ ವಿವಾದ: ಬಾಳೆಹೊನ್ನೂರಿನ ರಂಭಾಪುರಿ ಪೀಠ ಖಂಡನೆ ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್: ರಾಜ್ಯ ಸರ್ಕಾರದ ಮೇಲ್ಮನವಿ‌ ವಜಾಗೊಳಿಸಿದ… ಕಾವೇರಿ ನದಿ ನೀರು ಹಂಚಿಕೆ | ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳನಾಡು 2… ತಲಕಾವೇರಿ ಅನ್ನದಾನ ಮಹಾಯಜ್ಞ ಸಂಪನ್ನ: ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ… ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ…

ಇತ್ತೀಚಿನ ಸುದ್ದಿ

ಮಕ್ಕಳ ಬುದ್ಧಿಮತ್ತೆ ವೃದ್ಧಿಗೆ ಚೆಸ್ ಸಹಕಾರಿ: ವಿದ್ವತ್ ಚೆಸ್ ಟ್ರೋಫಿ ಉದ್ಘಾಟಿಸಿ ಡಾ.ರಾಮಮೂರ್ತಿ ಅಭಿಪ್ರಾಯ

29/11/2026, 15:59

ಬೆಳ್ತಂಗಡಿ(reporterkarnataka.com): ಬದುಕು ಮತ್ತು ಚೆಸ್ ಪಂದ್ಯಾಟದ ಪ್ರತಿ ಹೆಜ್ಜೆಯಲ್ಲೂ ತಾಳ್ಮೆ ಎಂಬ ನಡೆ ಅತ್ಯವಶ್ಯವಾಗಿದೆ. ಬೇರೆಯವರ ಅನುಭವ ಎಂದಿಗೂ ನಮ್ಮ‌ ಬದುಕನ್ನು ರೂಪಿಸಲು ಸಾಧ್ಯವಿಲ್ಲ. ಸ್ವಂತ ನಿಲುವು ಮತ್ತು ಅನುಭವದಿಂದಷ್ಟೇ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಮಂಗಳೂರಿನ ಅಂಬ್ಲಮೊಗರು ಸರಕಾರಿ ಪ್ರೌಢ ಶಾಲೆಯ ಕನ್ನಡ ಪ್ರಾಧ್ಯಾಪಕ ಡಾ.ರಾಮಮೂರ್ತಿ ಕೆ.ಎನ್. ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾಯನಕೆರೆ ವಿದ್ವತ್ ಎಜುಕೇಶನ್ ಫೌಂಡೇಶನ್ ವತಿಯಿಂದ ಉಬಾರ್ ಚೆಸ್ ಅಕಾಡೆಮಿ ಮತ್ತು (ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್) ಸಹಯೋಗದಲ್ಲಿ ನ.27 ರಂದು ನಡೆದ ಅಂತರ್ ಜಿಲ್ಲಾ ಶಾಲಾ ಮಟ್ಟದ ರಾಪಿಡ್ (RAPID) ಚೆಸ್ ಪಂದ್ಯಾವಳಿ ವಿದ್ವತ್ ಚೆಸ್ ಟ್ರೋಫಿ–2026 ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಪ್ರಪಂಚದಲ್ಲಿ ಚಾಟ್ ಜಿಪೀಟಿ, ಎಐ ನಂತಃ ತಂತ್ರಜ್ಞಾನವು ನಮ್ಮ ಸ್ವಂತ ನಿರ್ಧಾರ ಹಾಗೂ ಬುದ್ಧಿಮತ್ತೆಯನ್ನು ದುರ್ಬಲಗೊಳಿಸುತ್ತದೆ. ಎಲ್ಲ ಸಾಧಕರನ್ನು ಗಮನಿಸಿದಾಗ, ಆಸಕ್ತಿಯ ಕ್ಷೇತ್ರದ ಪ್ರಪಂಚದಲ್ಲಿ ಮುಳುಗಿದರಷ್ಟೆ ಸಾಧನೆ ಹೊರಬರಲು ಸಾಧ್ಯವಾಗಿದೆ ಎಂಬುದು ಕಾಣಬಹುದಾಗಿದೆ ಎಂದರು.
ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಮೇಶ್ ಕೋಟೆ ಮಾತನಾಡಿ, ಗುಕೇಶ್ ಅವರಂತಃ ಪ್ರತಿಭಾವಂತರಿಂದ ಭಾರತದ ಚೆಸ್ ಮಾಂತ್ರಿಕತೆ ಉತ್ತುಂಗಕ್ಕೇರಿದೆ. ವಿದ್ವತ್ ಪಿಯು ಕಾಲೇಜಿನಲ್ಲಿ ನಡೆದ ಚೆಸ್ ಪಂದ್ಯಾಟದಿಂದ ಪ್ರತಿ ಮಗು ಚೆಸ್ ಕೂಟಕ್ಕೆ ಸೇರ್ಪಡೆಗೊಳ್ಳುವಂತಾಗಲಿ. ಈ ಮೂಲಕ ನಮ್ಮಲ್ಲೂ ಓರ್ವ ಗ್ರ್ಯಾಂಡ್ ಮಾಸ್ಟರ್ ಹುಟ್ಟಬೇಕೆಂಬ ಆಶಯ ನಮ್ಮದಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಗ್ರಾಮಾಂತರ ಭಾಗದಲ್ಲಿ ಮಕ್ಕಳ ಬುದ್ಧಿಮತ್ತೆಯ ವಿಸ್ತಾರಕ್ಕಾಗಿ ಉಬಾರ್ ಚೆಸ್ ಅಕಾಡೆಮಿಯಂತಹಾ ಅಕಾಡೆಮಿಗಳು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಎಲ್ಲರೂ ಗೆದ್ದೇ ಗೆಲ್ಲುತ್ತಾರೆ ಎಂಬುದಿಲ್ಲ, ನಿರಂತರ ಪರಿಶ್ರಮದಿಂದಷ್ಟೇ ಎಲ್ಲವೂ ಸಾಧ್ಯ. ಮಕ್ಕಳ ಜ್ಞಾನ ಪ್ರಕಾಶಿಸುವಲ್ಲಿ ವಿದ್ವತ್ ಕಾಲೇಜು ಪ್ರೋತ್ಸಾಹಕವಾಗಿ ಚೆಸ್ ಸ್ಪರ್ಧೆ ಆಯೋಜಿಸಿದೆ ಎಂದರು.
ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಇ.ಮಂಡಗಳಲೆ ಅವರು ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ವಿಶೇಷತೆ ಕುರಿತು ವಿವರಿಸಿದರು.
ವೇದಿಕೆಯಲ್ಲಿ ವಿದ್ವತ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.
ಉಬಾರ್ ಚೆಸ್ ಅಕಾಡೆಮಿ ನಿರ್ದೇಶಕರಾದ ಜಗನ್ನಾಥ ಅಡಪ ಪ್ರಾಸ್ತಾವಿಸಿದರು. ವಿದ್ವತ್ ಪಿ.ಯು.ಕಾಲೇಜಿನ ಆಡಳಿತಾಧಿಕಾರಿ ಅಶೋಕ ಶೆಟ್ಟಿ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ನೀಲಕಂಠ ಕಾರ್ಯಕ್ರಮ ನಿರೂಪಿಸಿದರು. ಉಬಾರ್ ಚೆಸ್ ಅಕಾಡೆಮಿಯ ಶಿಕ್ಷಕಿ ಭವ್ಯಾ ವಂದಿಸಿದರು.

*500 ಕ್ಕೂ ಅಧಿಕ ಮಂದಿ ಭಾಗಿ*
ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ 8, 10, 12, 14, 16 ಹಾಗೂ 18 ವರ್ಷ ವಯೋಮಾನದೊಳಗಿನ ಒಟ್ಟು 6 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಿತು. ಉಬಾರ್ ಚೆಸ್ ಅಕಾಡೆಮಿ ವಿದ್ಯಾರ್ಥಿಗಳು ಹಾಗೂ ಇತರ ವಿಭಾಗಗಳಲ್ಲಿ ಒಟ್ಟು *500* ಕ್ಕೂ ಅಧಿಕ ಮಂದಿ ಸ್ಪರ್ಧಿಗಳು ಭಾಗವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು