4:00 PM Sunday29 - November 2026
ಬ್ರೇಕಿಂಗ್ ನ್ಯೂಸ್
ನಶಾಮುಕ್ತ ಯುವಜನತೆಯು ವಿಕಸಿತ ಭಾರತದ ಭದ್ರ ಬುನಾದಿ: ರಾಜ್ಯಪಾಲರಾದ ಡಾ. ಸುಧಾ ಯಾದವ್ ಪಶ್ಚಿಮ ಬಂಗಾಳಕ್ಕೆ ಇನ್ನು ಮುಂದೆ ಹೊಸ ಹೆಸರು!: ಮರು ನಾಮಕರಣಕ್ಕೆ ಅದೊಂದೇ ಕಾರಣ! ಮೇಕೆದಾಟು ಯೋಜನೆ : ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ಮೂಡಿಗೆರೆ | ಮುತ್ತಿಗೆಪುರ ಗ್ರಾಮದ ವಿಂಧನ್ ಮನೆ ಮೇಲೆ ಗುಂಡಿನ ದಾಳಿ: ಕೂದಲೆಳೆಯ… ಆಫ್ರಿಕಾದ ಕಾಂಗೋದಲ್ಲಿ 95 ಕನ್ನಡಿಗರ ಬಂಧನ: ಶಿವಮೊಗ್ಗ, ದಾವಣಗೆರೆಯ ಹಕ್ಕಿಪಿಕ್ಕಿ ಸಮುದಾಯ ಏಜೆಂಟರ… ಚಿಕ್ಕಮಗಳೂರು | ಬಸವ ಮಂಟಪ ಪುಸ್ತಕದ ವಿವಾದ: ಬಾಳೆಹೊನ್ನೂರಿನ ರಂಭಾಪುರಿ ಪೀಠ ಖಂಡನೆ ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್: ರಾಜ್ಯ ಸರ್ಕಾರದ ಮೇಲ್ಮನವಿ‌ ವಜಾಗೊಳಿಸಿದ… ಕಾವೇರಿ ನದಿ ನೀರು ಹಂಚಿಕೆ | ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳನಾಡು 2… ತಲಕಾವೇರಿ ಅನ್ನದಾನ ಮಹಾಯಜ್ಞ ಸಂಪನ್ನ: ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ… ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ…

ಇತ್ತೀಚಿನ ಸುದ್ದಿ

ಕ್ರಿಸ್‌ ಮಸ್ ಹಬ್ಬ ಆಚರಣೆಗೆ 4 ವಾರಗಳ ಆಧ್ಯಾತ್ಮಿಕ ಸಿದ್ಧತೆ: ಆಗಮನ ಕಾಲ ಆರಂಭ

29/11/2026, 15:53

ಮಂಗಳೂರು,(reporterkarnataka.com): ಡಿಸೆಂಬರ್ ತಿಂಗಳು ಬಂತೆಂದರೆ ಕ್ರೈಸ್ತರಿಂದ ಕ್ರಿಸ್‌ ಮಸ್ ಹಬ್ಬ ಆಚರಣೆಗೆ ಸಿದ್ಧತೆಗಳು ಆರಂಭವಾಗುತ್ತವೆ. ಕ್ರೈಸ್ತ ಧರ್ಮದ ಆಚರಣೆಯಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಮುಂಚಿತವಾಗಿ ಬರುವ ನಾಲ್ಕು ವಾರಗಳ ಆಧ್ಯಾತ್ಮಿಕ ಸಿದ್ಧತೆಯ ಅವಧಿಯನ್ನು ಅಡ್ವೆಂಟ್ ಎನ್ನುತ್ತಾರೆ. ಅಡ್ವೆಂಟ್ ಅಂದರೆ ಆಗಮನ ಕಾಲ ಎಂದರ್ಥ. ಈ ಅವಧಿಯು ಯೇಸು ಕ್ರಿಸ್ತರ ಜನನದ ಸ್ಮರಣೆ ಹಾಗೂ ಆತನ ಎರಡನೇ ಆಗಮನದ ನಿರೀಕ್ಷೆಯನ್ನು ಸೂಚಿಸುತ್ತದೆ.
ಇದು ಕ್ರಿಸ್‌ಮಸ್ ಹಬ್ಬಕ್ಕೆ (ಡಿಸೆಂಬರ್ 25) ಸರಿಯಾಗಿ ನಾಲ್ಕು ಭಾನುವಾರಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 24ರ ಸಂಜೆಗೆ ಕೊನೆಗೊಳ್ಳುತ್ತದೆ. ಈ ವರ್ಷ ನವೆಂಬರ್ 29 ರಂದು ಆಗಮನ ಕಾಲ ಆರಂಭವಾಗಿದೆ.
ಆಗಮನ ಕಾಲದಲ್ಲಿ ಚರ್ಚ್ ಗಳಲ್ಲಿ ಪ್ರತಿ ಭಾನುವಾರ ಬಲಿಪೂಜೆಯ ಸಂದರ್ಭ ಒಂದೊಂದು ಮೇಣದ ಬತ್ತಿಯನ್ನು ಬೆಳಗಿಸಲಾಗುತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ ಎಂಬುದರ ಸಂಕೇತವೇ ಈ ಮೇಣದ ಬತ್ತಿಗಳು.
ನಿತ್ಯಹರಿದ್ವರ್ಣದ ಎಲೆಗಳಿಂದ ಮಾಡಿದ ವೃತ್ತಾಕಾರದ ಮಾಲೆಯಲ್ಲಿ ನೇರಳೆ, ಗುಲಾಬಿ ಮತ್ತು ಬಿಳಿ ಬಣ್ಣದ ನಾಲ್ಕು ಮೇಣದ ಬತ್ತಿಗಳನ್ನು ಇರಿಸಲಾಗುತ್ತದೆ. ಪ್ರತಿ ಭಾನುವಾರ ಒಂದೊಂದು ಬತ್ತಿಯನ್ನು ಹಚ್ಚಲಾಗುತ್ತದೆ. ಮಧ್ಯದಲ್ಲಿ ಕ್ರಿಸ್‌ಮಸ್ ದಿನದಂದು ಹಚ್ಚಲು ಬಿಳಿಯ ಬತ್ತಿಯನ್ನು ಇಡಲಾಗುತ್ತದೆ.
ಮೊದಲ ಭಾನುವಾರ ಬೆಳಗುವ ನೇರಳೆ ಬಣ್ಣದ ಬತ್ತಿಯು ಭರವಸೆಯ ಸಂಕೇತವಾಗಿದೆ. ಯೇಸು ಕ್ರಿಸ್ತರು ಬರುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಭಕ್ತರು ಈ ಕಾಲವನ್ನು ಆರಂಭಿಸುತ್ತಾರೆ. ಎರಡನೇ ಭಾನುವಾರದ ನೇರಳೆ ಬತ್ತಿಯು ಶಾಂತಿಯನ್ನು ಸೂಚಿಸುತ್ತದೆ. ಕುಟುಂಬದಲ್ಲಿ, ಸಮಾಜದಲ್ಲಿ ಮತ್ತು ಲೋಕದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಗುತ್ತದೆ. ಮೂರನೇ ಭಾನುವಾರ ಬೆಳಗುವ ಗುಲಾಬಿ ಬಣ್ಣದ ಬತ್ತಿಯು ಸಂತೋಷದ ಸಂಕೇತವಾಗಿದೆ. ರಕ್ಷಕರು ಸಮೀಪದಲ್ಲಿದ್ದಾರೆ ಎಂಬ ಸಂತೋಷವನ್ನು ಇದು ವ್ಯಕ್ತಪಡಿಸುತ್ತದೆ. ಇದನ್ನು ಗೌಡೆಟೆ ಭಾನುವಾರ ಎಂದು ಕರೆಯಲಾಗುತ್ತದೆ.ನಾಲ್ಕನೇ ಭಾನುವಾರದ ನೇರಳೆ ಬತ್ತಿಯು ಪ್ರೀತಿಯನ್ನು ಸೂಚಿಸುತ್ತದೆ. ದೇವರು ಮಾನವ ಕುಲವನ್ನು ಪ್ರೀತಿಸಿ ತನ್ನ ಮಗನನ್ನು ಕಳುಹಿಸಿದ ಪ್ರೀತಿಯನ್ನು ಇದು ಸ್ಮರಿಸುತ್ತದೆ. ಐದನೇ ಮತ್ತು ಅತ್ಯಂತ ಮುಖ್ಯವಾದ ಬಿಳಿ ಬಣ್ಣದ ಬತ್ತಿಯನ್ನು ಕ್ರಿಸ್ತ ಬತ್ತಿ ಎಂದು ಕರೆಯಲಾಗುತ್ತದೆ. ಇದನ್ನು ಕ್ರಿಸ್ಮಸ್ ದಿನದಂದು ಆಗಮನ ಮಾಲೆಯ ಮಧ್ಯದಲ್ಲಿ ಬೆಳಗಿಸಲಾಗುತ್ತದೆ. ಯೇಸು ಕ್ರಿಸ್ತರು ಈ ಲೋಕಕ್ಕೆ ಬೆಳಕಾಗಿ ಬಂದಿದ್ದಾರೆ ಎಂಬುದರ ಸಂಕೇತವೇ ಈ ಮೇಣದ ಬತ್ತಿಯಾಗಿದೆ.
ಆ ಪ್ರಯುಕ್ತ ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ನವೆಂಬರ್ 29 ರಂದು ಭಾನುವಾರ ಬೆಳಗ್ಗಿನ ಬಲಿ ಪೂಜೆಯ ಸಂದರ್ಭದಲ್ಲಿ ನೇರಳೆ ಬಣ್ಣದ ಮೇಣದ ಬತ್ತಿಯನ್ನು ಬೆಳಗಿಸಿ ಭರವಸೆಯ ಸಂಕೇತವನ್ನು ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಆಗಮನ ಕಾಲವು ಕೇವಲ ಹಬ್ಬದ ಸಿದ್ಧತೆಯಲ್ಲ, ಮನಸ್ಸನ್ನು ಶುದ್ಧಗೊಳಿಸಿ, ಪ್ರಾರ್ಥನೆ, ಪಶ್ಚಾತ್ತಾಪ ಮತ್ತು ದಾನ ಧರ್ಮಗಳ ಮೂಲಕ ಯೇಸು ಕ್ರಿಸ್ತರನ್ನು ಸ್ವಾಗತಿಸಲು ಸಿದ್ಧರಾಗುವ ಕಾಲವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚರ್ಚ್ ನ ಸಹಾಯಕ ಧರ್ಮ ಗುರು ವಂದನೀಯ ಫಾ. ಜೋಸೆಫ್ ಕುವೆಲ್ಲೊ, ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು