ಇತ್ತೀಚಿನ ಸುದ್ದಿ
ಕೊಡಗು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭ: ಜೆಡಿಎಸ್ ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸಲು ಹೈಕಮಾಂಡ್ ತೀರ್ಮಾನ
24/11/2026, 19:42
ಮಡಿಕೇರಿ(reporterkarnataka.com): ಕೊಡಗಿನಲ್ಲಿ ಜೆಡಿಎಸ್ ಗೆ ಮಹತ್ವದ ನೆಲೆ ಸಿಕ್ಕಿದೆ. ನೂತನ ತಂಡವನ್ನು ಆಯ್ಕೆ ಮಾಡಲಾಗಿದೆ.





ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಉಸ್ತುವಾರಿಯಾಗಿ ವಿ.ಎಸ್. ಸುಬ್ರಮಣಿ(ಕಾರ್ಮಾಡ್ ಸುಬ್ಬಣ್ಣ), ಜಿಲ್ಲಾ ಅಧ್ಯಕ್ಷರು -ಹೆಚ್.ಡಿ. ಪ್ರವೀಣ್*(ಸೋಮವಾರಪೇಟೆ), ಜಿಲ್ಲಾ ಕಾರ್ಯಾಧ್ಯಕ್ಷರು – ಸಿ.ಎಲ್. ವಿಶ್ವ(ನಂಜರಾಯ ಪಟ್ಟಣ),
ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ – ಕೋತೂರು ಸುರೇಶ್* ರವರನ್ನು ಕಾರ್ಯಕರ್ತ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಸೋಮವಾರಪೇಟೆಯ ಅಟಲ್ ಜಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜೆಡಿ ಲಎಸ್ ಕಾರ್ಯಕರ್ತ ಸಭೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ
ಜೆಡಿಎಸ್ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಜೊತೆಗೆ ಮಾಜಿ ಸಚಿವ ಸಾ.ರಾ. ಮಹೇಶ್ ಹಾಗೂ ಪಿರಿಯಾಪಟ್ಟಣ ಮಾಜಿ ಶಾಸಕ ಕೆ. ಮಹದೇವ್ ಸಾಥ್ ನೀಡಿದರು.












