ಇತ್ತೀಚಿನ ಸುದ್ದಿ
ಛಲವಾದಿ ನಾರಾಯಣ ಸ್ವಾಮಿ ಮನೆಗೆ ಬ್ಲಿಂಕ್ ಇಟ್ ಮೂಲಕ ಚಾಕು ಚೂರಿ ಡೆಲಿವರಿಗೆ ಯತ್ನ: ವಾಪಸ್ ಕಳುಹಿಸಿದ ಪೊಲೀಸರು
08/11/2026, 13:19
ಬೆಂಗಳೂರು(reporterkarnataka.com):;ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮನೆಗೆ ಬ್ಲಿಂಕ್ ಇಟ್ ನಿಂದ ಚಾಕು ಚೂರಿ ಆರ್ಡರ್ ಮಾಡಿದ ಘಟನೆ ನಡೆದಿದೆ.
ಡೆಲಿವರಿ ಬಾಯ್ಸ್ ಜೊತೆ ಎನ್ ಎಸ್ ಯುಐ ಹುಡುಗರು ಪ್ರತ್ಯಕ್ಷರಾಗಿದ್ದರು.


ನಾಲ್ಕು ಬೈಕ್ ನಲ್ಲಿ ಚಾಕು ಚೂರಿ ಇರುವ ಪೋಸ್ಟ್ ಕವರ್ ತಂದ ಡೆಲಿವರಿ ಬಾಯ್ಸ್. ಡೆಲಿವರಿ ಬಾಯ್ಸ್ ಗೆ ಭದ್ರತಾ ಪೊಲೀಸರಿಂದ ಪ್ರಶ್ನೆ.ಈ ವೇಳೆ ಡೆಲಿವರಿ ಬಾಯ್ಸ್ ಜೊತೆಗೆ ಎನ್ಎಸ್ ಯು ಐ ಇಬ್ಬರು ಹುಡುಗರು ಬಂದಿದ್ದರು.
ಡೆಲಿವರಿ ಬಾಯ್ಸ್ ಗೆ ಪೋಸ್ಟ್ ಕವರ್ ಗಳನ್ನು ಛಲವಾದಿ ನಾರಾಯಣಸ್ವಾಮಿಗೆ ಕೊಡುವಂತೆ ಹುಡುಗರು ಒತ್ತಾಯಿಸಿದ್ದಾರೆ.
ವಾಪಸ್ಸು ಹೋಗ್ತಿರುವ ಡೆಲಿವರಿ ಬಾಯ್ಸ್ ಗಳನ್ನು
ಮತ್ತೆ ಹೋಗಿ ಕೊಡುವಂತೆ ಎನ್ ಎಸ್ ಯುಐ ಹುಡುಗರು ಒತ್ರಾಯಿಸಿದ್ದಾರೆ. ಈ ನಡುವೆ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಡೆಲಿವರಿ ಬಾಯ್ಸ್ ಗೆ ಗದರಿ ಕಳುಹಿಸಿದ್ದಾರೆ. ಪೊಲೀಸರ ಮಾತಿನ ನಂತರ ಸ್ಥಳದಿಂದ ಎನ್ಎಸ್ ಯುಐ ಕಾರ್ಯಕರ್ತರು ತೆರಳಿದ್ದಾರೆ.












