ಇತ್ತೀಚಿನ ಸುದ್ದಿ
ಸಮಾಜದ ಅಭಿವೃದ್ಧಿಯಲ್ಲಿ ಸಹಕಾರ ಪಾತ್ರ ಮಹತ್ವದ್ದು: ಶ್ರೀ ಶಂಕರ ಪತ್ತಿನ ಸಹಕಾರ ಸಂಘದ ಸ್ಥಳಾಂತರಿತ ಕಚೇರಿ ಉದ್ಘಾಟಿಸಿ ಎಡನೀರು ಶ್ರೀ
12/10/2026, 21:12
ಬಂಟ್ವಾಳ(reporterkarnataka.com): ಮೆಲ್ಕಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಶಂಕರ ಪತ್ತಿನ ಸಹಕಾರ ಸಂಘದ ಸ್ಥಳಾಂತರಿತ ಕಚೇರಿ ಉದ್ಘಾಟನಾ ಸಮಾರಂಭ ಸೋಮವಾರ ಮೆಲ್ಕಾರ್ ಸರ್ವೀಸ್ ರಸ್ತೆಯಲ್ಲಿರುವ ಸರಾ ಆರ್ಕೇಡ್ ನ ಪ್ರಥಮ ಮಹಡಿಯಲ್ಲಿ ನಡೆಯಿತು.


ಪ್ರಧಾನ ಕಚೇರಿಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ಮಾತನಾಡಿ, ಸಹಕಾರ ತತ್ವವು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದೆ. ಸಹಕಾರ ಸಂಘವು ಗ್ರಾಹಕರ ವಿಶ್ವಾಸವನ್ನು ಗಳಿಸುವುದರೊದಿಗೆ ಪರಸ್ಪರ ಕೊಡುಕೊಳ್ಳುವ ವ್ಯವಹಾರ ಉತ್ತಮವಾಗಿದ್ದಾಗ ಸಂಘವು ಪ್ರಗತಿ ಹೊಂದುತ್ತದೆ. ಶ್ರೀ ಶಂಕರ ಪತ್ತಿನ ಸಹಕಾರಿ ಸಂಘದಲ್ಲಿ ಹಣವನ್ನು ಭದ್ರವಾಗಿಡಲು ಸುಸಜ್ಜಿತವಾದ ವ್ಯವಸ್ಥೆಗಳಿವೆ ಎಂದು ಆಶೀರ್ವಚನ ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭದ್ರತಾ ಕೊಠಡಿ ಉದ್ಘಾಟಿಸಿ ಸಂಸ್ಥೆ ಅಭಿವೃದ್ದಿಯಾಗಿ ಹೊಸ ಶಾಖೆಗಳನ್ನು ತೆರೆಯಿವಂತಾಗಲಿ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ, ವಿಶೇಷ ಠೇವಣಿಗಳ ಬಿಡುಗಡೆ ಮಾಡಿ ವ್ಯವಹಾರ ಮಾಡುವವರು ಸಾಲವನ್ನು ಕ್ಲಪ್ತ ಸಮಯಕ್ಕೆ ಮರುಪಾವತಿಸಬೇಕೆಂದರು. ಮುಖ್ಯ ಅತಿಥಿಯಾಗಿ ಉದ್ಯಮಿ ಸಂಜೀವ ಪೂಜಾರಿ ಗುರುಕೃಪಾ , ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಎಂ.ಎನ್. ಕುಮಾರ್ ಮೆಲ್ಕಾರ್, ಬಿ.ಯೋಗೀಶ್ ನಾಯಕ್, ಸಹಕಾರ ಅಭಿವೃದ್ಧಿ ಅಧಿಕಾರಿ ಡಾ. ಜ್ಯೋತಿ ಡಿ., ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಸಂಜೀವ ನಾಯ್ಕ ನಿರ್ಬೈಲು ಉಪಸ್ಥಿತರಿದ್ದರು.
ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಸೆಂಬರ್ ಒಳಗೆ ಎರಡು ವರ್ಷಗಳ ಅವಧಿಗೆ ಠೇವಣಿಗೆ ಶೇ.11 ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರನ್ನು ದೃಷ್ಟಿಯಾಗಿಟ್ಟುಕೊಂಡು ಸಂಘ ಕಳೆದ ಐದು ವರ್ಷಗಳಿಂದ ಮುನ್ನಡೆಯುತ್ತಿದ್ದು, ಸಾಲ ನೀಡಿಕೆಯಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳಲಾದ ಕಾರಣ ಗ್ರಾಹಕರ ವಿಶ್ವಾಸ ಗಳಿಸಿದೆ ಎಂದರು.
ಉಪಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿದರು. ನಿರ್ದೇಶಕರಾದ ಅನಂತ ಪ್ರಭು ವಂದಿಸಿದರು. ನಿರ್ದೇಶಕ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು. ಕೀರ್ತನಾ ಹೊಳ್ಳ ಪ್ರಾರ್ಥಿಸಿದರು. ನಿರ್ದೇಶಕರಾದ ವೇದವ್ಯಾಸ ರಾಮಕುಂಜ, ಎಂ.ಈಶ್ವರ ಭಟ್ಟ, ಅನಂತ ಪ್ರಭು, ಜಯರಾಮ ಪೂಜಾರಿ, ಜಯರಾಮ ಶೇಖ, ಮುರಳೀಧರ ರಾವ್, ಭವಾನಿಶಂಕರ ಶೆಟ್ಟಿ, ರವೀಂದ್ರ ಕುಕ್ಕಾಜೆ, ರಮಾ ಎಸ್. ಭಂಡಾರಿ, ರಾಜೀವಿ ಎನ್. ವೃತ್ತಿಪರ ನಿರ್ದೇಶಕ ರಾಕೋಡಿ ಈಶ್ವರ ಭಟ್ ಮತ್ತು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವ್ಯ ಉಪಸ್ಥಿತರಿದ್ದರು.













