10:19 AM Wednesday7 - October 2026
ಬ್ರೇಕಿಂಗ್ ನ್ಯೂಸ್
ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್

ಇತ್ತೀಚಿನ ಸುದ್ದಿ

ಏನಿದು ಕುರಲ್ ತುಳು ಟಚ್’? | ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಬಿಡುಗಡೆಯಾಯ್ತು ಹೊಸ ತುಳು ಲಿಪಿ ಕೀಬೋರ್ಡ್

06/10/2026, 22:53

ಮಂಗಳೂರು(reporterkarnataka.com):ತುಳು ಭಾಷೆಯನ್ನು ಡಿಜಿಟಲ್ ಜಗತ್ತಿನಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಯೂಸರ್‌ಗಳು ಇನ್ಮುಂದೆ ನೇರವಾಗಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಟೈಪ್ ಮಾಡಲು ನೆರವಾಗುವ ನೂತನ ಕೀಬೋರ್ಡ್ ಸೌಲಭ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಈ ನೂತನ ಕೀಬೋರ್ಡ್‌ಗೆ ‘ಕುರಲ್ ತುಳು ಟಚ್’ (Kural Tulu Touch) ಎಂದು ಹೆಸರಿಡಲಾಗಿದ್ದು, ತಂತ್ರಾಂಶ ಅಭಿವೃದ್ಧಿಪಡಿಸುವ ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಹರ್ಷಿತ್ ದೇವಾಡಿಗ ಹಾಗೂ ಚೈತ್ರಾ ಪೂಜಾರಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ತುಳುನಾಡ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಈ ತಂತ್ರಜ್ಞಾನವನ್ನು ಅಧಿಕೃತವಾಗಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳಿಸಲಾಯಿತು.
ಈ ಕೀಬೋರ್ಡ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ‘ಬರವು ಸಾರವು’ (Baravu Saravu) ಆ್ಯಪ್ ಮೂಲಕ ಲಭ್ಯವಿದೆ. ಆ್ಯಪ್‌ನಲ್ಲಿರುವ “ನ್ಯೂ ಕೀಬೋರ್ಡ್” (New Keyboard) ಆಯ್ಕೆಯನ್ನು ಸಕ್ರಿಯಗೊಳಿಸುವ ಮೂಲಕ, ಬಳಕೆದಾರರು ವಾಟ್ಸಾಪ್ (WhatsApp) ಸೇರಿದಂತೆ ವಿವಿಧ ಸೋಶಿಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ನೇರವಾಗಿ ತುಳು ಲಿಪಿಯಲ್ಲೇ ಸಂದೇಶಗಳನ್ನು ಟೈಪ್ ಮಾಡಬಹುದು. ಜೊತೆಗೆ ತುಳು ಕೀಬೋರ್ಡ್‌ನಿಂದ ಇತರ ಭಾಷೆಯ ಕೀಬೋರ್ಡ್‌ಗಳಿಗೆ ಸುಲಭವಾಗಿ ಬದಲಾಯಿಸಬಹುದು ಹಾಗೂ ತಾವು ಟೈಪ್ ಮಾಡಿದ ಪಠ್ಯವನ್ನು ಡಿಜಿಟಲ್ ಚಾಟ್‌ಗಳಿಗೆ ಬಳಸಬಹುದಾದ ಸ್ಟಿಕ್ಕರ್‌ಗಳನ್ನಾಗಿಯೂ ಪರಿವರ್ತಿಸಬಹುದಾಗಿದೆ.

*ದೈನಂದಿನ ಸಂವಹನಕ್ಕೆ ತುಳು ಲಿಪಿ ಸರಳೀಕರಣ*
ಸಾಮಾನ್ಯ ಮೊಬೈಲ್ ಕೀಬೋರ್ಡ್‌ಗಳಂತೆಯೇ ಸುಲಭವಾಗಿ ಬಳಸಬಹುದಾದ ವಿನ್ಯಾಸವನ್ನು ‘ಕುರಲ್ ತುಳು ಟಚ್’ ಹೊಂದಿದೆ. ಇದು ತುಳು ಭಾಷೆಯ ಅಕ್ಷರಗಳು, ಸಂಖ್ಯೆಗಳು, ಗುಣಿತಾಕ್ಷರಗಳು ಮತ್ತು ಒತ್ತಕ್ಷರಗಳನ್ನು ಬೆಂಬಲಿಸುತ್ತದೆ. ಇದರಿಂದಾಗಿ ಬಳಕೆದಾರರು ತುಳು ಲಿಪಿಗೆ ಅಗತ್ಯವಿರುವ ಪದಗಳು ಹಾಗೂ ಸಂಯೋಜನೆಗಳನ್ನು ಅತ್ಯಂತ ನಿಖರವಾಗಿ ರೂಪಿಸಲು ಸಾಧ್ಯವಾಗುತ್ತದೆ.
ತುಳು ಲಿಪಿಯನ್ನು ಕೇವಲ ಶೈಕ್ಷಣಿಕ ಅಥವಾ ದಾಖಲೆಗಳ ಸಂಗ್ರಹಕ್ಕಷ್ಟೇ ಸೀಮಿತಗೊಳಿಸದೆ, ದೈನಂದಿನ ಡಿಜಿಟಲ್ ಸಂಭಾಷಣೆಗಳಲ್ಲಿ ಪ್ರಾಯೋಗಿಕವಾಗಿ ಬಳಸುವಂತೆ ಮಾಡುವುದೇ ತಮ್ಮ ಪ್ರಮುಖ ಉದ್ದೇಶವಾಗಿತ್ತು ಎಂದು ಸಾಫ್ಟ್‌ವೇರ್ ಡೆವಲಪರ್‌ಗಳು ತಿಳಿಸಿದ್ದಾರೆ. ಆ್ಯಪ್‌ಗಾಗಿ ‘ಫ್ಲಟ್ಟರ್’ (Flutter) ಹಾಗೂ ಬ್ಯಾಕ್ಎಂಡ್ ಬೆಂಬಲಕ್ಕಾಗಿ ‘ಫೈರ್‌ಬೇಸ್’ (Firebase) ತಂತ್ರಜ್ಞಾನವನ್ನು ಬಳಸಿ, ಕೇವಲ ಎರಡೇ ವಾರಗಳಲ್ಲಿ ಈ ಕೀಬೋರ್ಡ್ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ.
ಈ ಯೋಜನೆಗೆ ಮೂರು ವರ್ಷಗಳ ಹಿಂದೆ ತಾವು ರೂಪಿಸಿದ್ದ ‘ತುಳು ಕಲಿಕೆ ಆ್ಯಪ್’ ಬಲವಾದ ತಡಿಪಾಯವಾಗಿತ್ತು ಎಂದು ಸಾಫ್ಟ್‌ವೇರ್ ಇಂಜಿನಿಯರ್ ಹರ್ಷಿತ್ ದೇವಾಡಿಗ ಸ್ಮರಿಸಿದ್ದಾರೆ.
ಈ ಆ್ಯಪ್ ಕೇವಲ ಕೀಬೋರ್ಡ್‌ಗೆಷ್ಟೇ ಸೀಮಿತವಾಗಿರದೆ, ತುಳು ಕಲಿಯಲು ಬಯಸುವವರಿಗೆ ಒಂದು ಸಮಗ್ರ ಕಲಿಕಾ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

*ವಿಶೇಷ ಫೀಚರ್‌ಗಳು:* ಆ್ಯಪ್‌ನಲ್ಲಿ ತುಳು ನಿಘಂಟು ಮೂಲಭೂತ ವಾಕ್ಯಗಳು, ಆಡಿಯೋ ಆಧಾರಿತ ಕಲಿಕಾ ಸಾಮಗ್ರಿಗಳು ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಪಾರಂಪರಿಕ ಛಾಯಾಚಿತ್ರಗಳಿವೆ.
ಬಳಕೆದಾರರು ನಿಘಂಟಿಗೆ ಹೊಸ ತುಳು ಪದಗಳನ್ನು ಸೂಚಿಸಬಹುದು; ಈ ಪದಗಳನ್ನು ಪರಿಶೀಲಿಸಿದ ನಂತರವಷ್ಟೇ ನಿಘಂಟಿಗೆ ಸೇರಿಸಲಾಗುತ್ತದೆ. ಪ್ರಸ್ತುತ ಈ ‘ಕುರಲ್ ತುಳು ಟಚ್’ ಕೀಬೋರ್ಡ್ ಆಂಡ್ರಾಯ್ಡ್ ಪ್ಲಾಟ್‌‌ಫಾರ್ಮ್‌ಗಳಿಗೆ ಮಾತ್ರ ಸೀಮಿತವಾಗಿದ್ದು, ಮುಂಬರುವ ದಿನಗಳಲ್ಲಿ ಆಪಲ್ (iOS) ಐಫೋನ್ ಬಳಕೆದಾರರಿಗೂ ಇದರ ಆವೃತ್ತಿಯನ್ನು ಬಿಡುಗಡೆ ಮಾಡಲು ಡೆವಲಪರ್‌ಗಳು ಯೋಜಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು