7:56 AM Monday23 - November 2026
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ | ಮುತ್ತಿಗೆಪುರ ಗ್ರಾಮದ ವಿಂಧನ್ ಮನೆ ಮೇಲೆ ಗುಂಡಿನ ದಾಳಿ: ಕೂದಲೆಳೆಯ… ಆಫ್ರಿಕಾದ ಕಾಂಗೋದಲ್ಲಿ 95 ಕನ್ನಡಿಗರ ಬಂಧನ: ಶಿವಮೊಗ್ಗ, ದಾವಣಗೆರೆಯ ಹಕ್ಕಿಪಿಕ್ಕಿ ಸಮುದಾಯ ಏಜೆಂಟರ… ಚಿಕ್ಕಮಗಳೂರು | ಬಸವ ಮಂಟಪ ಪುಸ್ತಕದ ವಿವಾದ: ಬಾಳೆಹೊನ್ನೂರಿನ ರಂಭಾಪುರಿ ಪೀಠ ಖಂಡನೆ ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಗ್ರೀನ್ ಸಿಗ್ನಲ್: ರಾಜ್ಯ ಸರ್ಕಾರದ ಮೇಲ್ಮನವಿ‌ ವಜಾಗೊಳಿಸಿದ… ಕಾವೇರಿ ನದಿ ನೀರು ಹಂಚಿಕೆ | ಕರ್ನಾಟಕಕ್ಕೆ ಬಿಗ್ ರಿಲೀಫ್: ತಮಿಳನಾಡು 2… ತಲಕಾವೇರಿ ಅನ್ನದಾನ ಮಹಾಯಜ್ಞ ಸಂಪನ್ನ: ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳ… ಸಿನಿಮಾ ನಟರನ್ನು ನೋಡಿ ಸಿಗರೇಟ್ ಸೇದಬೇಡಿ, ಐಸಿಯು ಸೇರುವ ಪರಿಸ್ಥಿತಿ ಬರಬಹುದು: ಆರೋಗ್ಯ… ಉತ್ತರಾಖಂಡ | ಸುಮಾರು 100 ಮೀಟರ್‌ ಆಳದ ಕಂದಕಕ್ಕೆ ಉರುಳಿದ ಬಸ್: 8… ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಹೈಕಮಾಂಡ್ ತೀರ್ಮಾನಿಸಲಿದೆ: ಸಿಎಂ ಡಿ. ಕೆ. ಶಿವಕುಮಾರ್ ತಿಪಟೂರು | ಕೆಎಸ್​ಆರ್​ಟಿಸಿ ಬಸ್ ರೂಪದಲ್ಲಿ ಬಂದ ಮೃತ್ಯು: ಭೀಕರ ಅಪಘಾತದಲ್ಲಿ ಯುವಕರಿಬ್ಬರು…

ಇತ್ತೀಚಿನ ಸುದ್ದಿ

ಪಚ್ಚನಾಡಿ ಮುಖ್ಯ ರಸ್ತೆ ಕಾಂಕ್ರೀಟೀಕರಣಕ್ಕೆ 3.33 ಕೋಟಿ ಅನುದಾನ: ಕಾಮಗಾರಿ ವೀಕ್ಷಿಸಿದ ಶಾಸಕ ಡಾ. ವೈ. ಭರತ್ ಶೆಟ್ಟಿ

03/10/2026, 20:34

ಮಂಗಳೂರು(reporterkarnataka.com): ಪಚ್ಚನಾಡಿ ವಾರ್ಡ್‌ನ ಮುಖ್ಯ ರಸ್ತೆಯನ್ನು ಸಂಪೂರ್ಣ.ಕಾಂಕ್ರೀಟೀಕರಣಗೊಳಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ಯೋಜನೆಯಡಿ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ಸಹಕಾರದಿಂದ 3 ಕೋಟಿ 33 ಲಕ್ಷ ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.
ಪ್ರಗತಿಯಲ್ಲಿರುವ ಕಾಮಗಾರಿಯನ್ನು ಶಾಸಕರು ಇಂದು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿಯ ಗುಣಮಟ್ಟ ಮತ್ತು ವ್ಯವಸ್ಥಿತ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ನಿಕಟಪೂರ್ವ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್, ವಾರ್ಡ್ ಅಧ್ಯಕ್ಷ ಭಾಸ್ಕರ್ ಕೆ., ಪ್ರಮುಖರಾದ ರವೀಂದ್ರ ನಾಯಕ್ ಕುಡುಪು, ವಿಜಯ್ ಅಮೀನ್, ಇಂದಿರಾ ಸುವರ್ಣ, ಬಾಲಕೃಷ್ಣ ಕುಕ್ಯಾನ್, ಉತ್ತಯ್ಯ, ಅನಿಲ್ ಪೂಜಾರಿ, ರತನ್ ಬಂದಲೆ, ಚಂದ್ರಹಾಸ ಕುಲಾಲ್, ಪ್ರಭಾಕರ್, ಧನುಷ್, ಉದಯ ಪೂಜಾರಿ ಸೇರಿದಂತೆ ಇತರ ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು