ಇತ್ತೀಚಿನ ಸುದ್ದಿ
ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ
16/09/2026, 19:52
ಬೆಂಗಳೂರು(reporterkarnataka.com): ದೇಶದ ಪ್ರಮುಖ ಝೀರೋ-ಸ್ಟಾಕ್ ಫ್ರೆಶ್ ಕಾಮರ್ಸ್ ವೇದಿಕೆಯಾದ ಹ್ಯಾಂಡ್ಪಿಕ್ಡ್, ಬೆಂಗಳೂರಿನಲ್ಲಿ ಕೇವಲ ತಾಜಾ ತರಕಾರಿ-ಹಣ್ಣುಗಳಷ್ಟೇ ಅಲ್ಲದೆ ದಿನನಿತ್ಯದ ಅಗತ್ಯ ಅಡುಗೆ ಪದಾರ್ಥಗಳಿಗೂ ತನ್ನ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ.
ಕಲಬೆರಕೆ ರಹಿತ, ಶುದ್ಧ ಆಹಾರ ಸೇವನೆಗೆ ಆದ್ಯತೆ ನೀಡುವ ನಗರ ಪ್ರದೇಶದ ಗ್ರಾಹಕರಿಗಾಗಿ ವಿಶೇಷವಾಗಿ ರೂಪಿಸಲಾಗಿರುವ ಈ ಪ್ಲಾಟ್ಫಾರ್ಮ್, ಯಾವುದೇ ಕೃತಕ ರಾಸಾಯನಿಕಗಳಿಲ್ಲದ, ತಾಜಾವಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸಲು ತನ್ನ ಪೂರೈಕೆ ಸರಪಳಿಯನ್ನು ವಿಸ್ತರಿಸಿದೆ.
ಸಂಸ್ಥೆಯ ಉತ್ಪನ್ನಗಳ ಶ್ರೇಣಿಯು ಗ್ರಾಹಕರು ಆರ್ಡರ್ ನೀಡಿದ ತಕ್ಷಣವೇ ಗಿರಣಿಯಲ್ಲಿ ಬೀಸಿ ತಯಾರಿಸುವ ತಾಜಾ ಹಿಟ್ಟು, ಅರೆದ ತಾಜಾ ಸಾಂಬಾರ ಪದಾರ್ಥಗಳು, ಗಾಣದ ತಾಜಾ ಎಣ್ಣೆ, ಡೈರಿ ಉತ್ಪನ್ನಗಳು, ಸಣ್ಣ ಬ್ಯಾಚ್ಗಳಲ್ಲಿ ಸಿದ್ಧಪಡಿಸಿದ ಸ್ಪ್ರೆಡ್ಗಳು, ತಾಜಾ ಹೂವುಗಳು ಹಾಗೂ ರೆಡಿ-ಟು-ಕುಕ್ ಪದಾರ್ಥಗಳನ್ನು ಒಳಗೊಂಡಿದೆ. ಸಿಲಿಕಾನ್ ಸಿಟಿ ಬೆಂಗಳೂರು ಕಂಪನಿಯ ಪ್ರಮುಖ ಬೆಳವಣಿಗೆಯ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಈಗಾಗಲೇ ತಾಜಾ ಕೃಷಿ ಉತ್ಪನ್ನಗಳ ವಿಭಾಗದಲ್ಲಿ ಸ್ಥಾಪಿಸಿರುವ ಬಲವಾದ ಮಾರುಕಟ್ಟೆ ಅಡಿಪಾಯದೊಂದಿಗೆ, ತಾಜಾ ಹಿಟ್ಟು ಮತ್ತು ಸಾಂಬಾರ ಪದಾರ್ಥಗಳು ಮುಂಬರುವ ವರ್ಷದಲ್ಲಿ ಕಂಪನಿಯ ಪ್ರಮುಖ ಬೆಳವಣಿಗೆಯ ಚಾಲಕ ಶಕ್ತಿಯಾಗಲಿವೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರಸ್ತುತ ದಿನಗಳಲ್ಲಿ ಆಹಾರ ವಿತರಣಾ ವ್ಯವಸ್ಥೆಯು ಹೆಚ್ಚಾಗಿ ರಾಸಾಯನಿಕ ಸಂರಕ್ಷಕಗಳು (ಪ್ರಿಸರ್ವೇಟಿವ್ಸ್), ಕೃತಕ ಪದಾರ್ಥಗಳು ಹಾಗೂ ದೂರದ ಸಾರಿಗೆ ಮತ್ತು ಸೂಪರ್ಮಾರ್ಕೆಟ್ ಶೆಲ್ಫ್ ಗಳಲ್ಲಿ ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಲಾದ ಗೋದಾಮು ಶೇಖರಣಾ ವ್ಯವಸ್ಥೆಯನ್ನೇ ನೆಚ್ಚಿಕೊಂಡಿದೆ. ಆದರೆ ಹ್ಯಾಂಡ್ಪಿಕ್ಡ್ ಇದಕ್ಕೆ ತದ್ವಿರುದ್ಧವಾದ ಹೊಸ ಮಾರ್ಗವನ್ನು ಆಯ್ದುಕೊಂಡಿದೆ. ಕಂಪನಿಯ ಝೀರೋ-ಇನ್ವೆಂಟರಿ ಮಾದರಿಯು ವೇಗ ಹಾಗೂ ಸ್ಥಳೀಯ ಸಂಗ್ರಹಣೆಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಆಹಾರ ಸಿದ್ಧತೆ ಮತ್ತು ಬೆಳೆ ಕೊಯ್ಲಿನ ಹಂತದಿಂದ ಗ್ರಾಹಕರ ಮನೆಗೆ ನೇರ ಸಂಪರ್ಕ ಕಲ್ಪಿಸುತ್ತದೆ, ಇದರಿಂದಾಗಿ ಆಹಾರ ಪದಾರ್ಥಗಳು ತಮ್ಮ ನೈಸರ್ಗಿಕ ಪೋಷಕಾಂಶ ಮತ್ತು ಅಸಲಿ ಪರಿಮಳವನ್ನು ಕಳೆದುಕೊಳ್ಳುವುದಿಲ್ಲ.
ಈ ವಿಸ್ತರಣೆಯ ಕುರಿತು ಮಾತನಾಡಿದ ಹ್ಯಾಂಡ್ಪಿಕ್ಡ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಅನಂತ್ ಗೋಯಲ್ ಅವರು, “ಆಹಾರ ಪದಾರ್ಥಗಳು ದೀರ್ಘಕಾಲ ಉಳಿಯುವಂತೆ ಮಾರ್ಪಡಿಸುವುದರ ಹಿಂದೆ ಎರಡು ಆಯಾಮಗಳಿವೆ: ಒಂದೋ ಅದಕ್ಕೆ ಕೆಟ್ಟದ್ದನ್ನು ಸೇರಿಸುವುದು, ಇಲ್ಲವೇ ಅದರಲ್ಲಿರುವ ನೈಸರ್ಗಿಕ ಸತ್ವವನ್ನು ಹೊರತೆಗೆಯುವುದು. ಜಾಗತಿಕ ಕಂಪನಿಗಳು ಒಂದೇ ಕಡೆ ಸಿದ್ಧಪಡಿಸಿ ವಿಶ್ವಾದ್ಯಂತ ವಿತರಿಸಲು ಅನುಕೂಲವಾಗುವಂತೆ ಇಂತಹ ತಂತ್ರಜ್ಞಾನಗಳ ಮೇಲೆ ದಶಕಗಳಿಂದ ಅತಿಯಾಗಿ ಹೂಡಿಕೆ ಮಾಡುತ್ತಿವೆ. ನಿಮ್ಮ ಸ್ಥಳೀಯ ಸಿಹಿ ತಯಾರಕರಿಗಾಗಲಿ (ಹಲ್ವಾಯಿ) ಅಥವಾ ಸ್ಥಳೀಯ ಹಿಟ್ಟಿನ ಗಿರಣಿಗಾಗಲಿ ಆ ವಿಜ್ಞಾನ ತಿಳಿದಿಲ್ಲ. ಆದರೆ ಅಲ್ಲಿನ ದೊಡ್ಡ ಸಮಸ್ಯೆ ಎಂದರೆ ಕಚ್ಚಾವಸ್ತುಗಳ ಕಲಬೆರಕೆ. ಹ್ಯಾಂಡ್ಪಿಕ್ಡ್ ಈ ಎರಡೂ ಸವಾಲುಗಳಿಗೆ ಏಕಕಾಲದಲ್ಲಿ ಮುಕ್ತಿ ನೀಡುತ್ತಿದೆ- ಶುದ್ಧ ಕಚ್ಚಾವಸ್ತು, ಸ್ವಚ್ಛ ತಯಾರಿಕೆ ಮತ್ತು ತಾಜಾ ವಿತರಣೆ. ನೈಸರ್ಗಿಕ ನಿಯಮದ ಪ್ರಕಾರ ಕೆಡಬೇಕಾದ ಸಮಯದಲ್ಲಿಯೇ ಹಾಳಾಗುವ ನೈಜ ತಾಜಾ ಆಹಾರ ಪದಾರ್ಥಗಳನ್ನು ನಾವು ನೀಡುತ್ತಿದ್ದೇವೆ, ಏಕೆಂದರೆ ತಾಜಾತನಕ್ಕೆ ಯಾವುದೇ ಕೃತಕ ವಿಜ್ಞಾನದ ಅಗತ್ಯವಿಲ್ಲ” ಎಂದು ತಿಳಿಸಿದರು.
ಹ್ಯಾಂಡ್ಪಿಕ್ಡ್ ದಿನಸಿ ಶ್ರೇಣಿಯ ಪ್ರತಿಯೊಂದು ಬ್ಯಾಚ್ ಅನ್ನು ನುರಿತ ರೈತರು ಮತ್ತು ಗಿರಣಿಗಳಿಂದಲೇ ಸಂಗ್ರಹಿಸಲಾಗುತ್ತಿದ್ದು, ಗ್ರಾಹಕರಿಗೆ ವಿತರಿಸುವ ಸ್ಥಳದ ಸಮೀಪದಲ್ಲೇ ಸಿದ್ಧಪಡಿಸಲಾಗುತ್ತದೆ. ಈ ಮೂಲಕ ತಾಜಾ ಕೃಷಿ ಉತ್ಪನ್ನಗಳಲ್ಲಿ ತಂದಿದ್ದ ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆಯನ್ನು ಹಿಟ್ಟು, ಮಸಾಲೆ ಹಾಗೂ ಎಣ್ಣೆಯ ವಿಭಾಗದಲ್ಲೂ ವಿಸ್ತರಿಸಲಾಗಿದೆ. ಈ ಸೇವೆಯು ಪ್ರಸ್ತುತ ಗುರುಗ್ರಾಮ್, ನೋಯ್ಡಾ ಮತ್ತು ಬೆಂಗಳೂರಿನಾದ್ಯಂತ ಸಾರ್ವಜನಿಕರಿಗೆ ಲಭ್ಯವಿದೆ.
ಸಂಪೂರ್ಣ ತಾಜಾ ವಾಣಿಜ್ಯ ವ್ಯವಸ್ಥೆಯನ್ನು (ಫುಲ್-ಸ್ಟಾಕ್ ಫ್ರೆಶ್ ಕಾಮರ್ಸ್ ಇಕೋಸಿಸ್ಟಮ್) ನಿರ್ಮಿಸುವ ಹ್ಯಾಂಡ್ಪಿಕ್ಡ್ನ ಮಹತ್ವಾಕಾಂಕ್ಷೆಯ ಭಾಗವಾಗಿ ಈ ಹೆಜ್ಜೆ ಇಡಲಾಗಿದೆ. ಕೇವಲ ಕೃಷಿ ಉತ್ಪನ್ನಗಳಷ್ಟೇ ಅಲ್ಲದೆ, ದಿನನಿತ್ಯದ ಅಗತ್ಯ ವಸ್ತುಗಳಿಗೂ ವಿಶ್ವಾಸಾರ್ಹ ತಾಣವಾಗುವ ಉದ್ದೇಶವನ್ನು ಕಂಪನಿ ಹೊಂದಿದ್ದು, ತಾಜಾತನ, ಕಾರ್ಯಾಚರಣೆಯ ದಕ್ಷತೆ, ವೈವಿಧ್ಯಮಯ ವಿಭಾಗಗಳು ಹಾಗೂ ಗ್ರಾಹಕರ ನಂಬಿಕೆಯನ್ನು ಆಧರಿಸಿದ ಪೂರೈಕೆ ಸರಪಳಿಯನ್ನು ಮುನ್ನಡೆಸುತ್ತಿದೆ.












