ಇತ್ತೀಚಿನ ಸುದ್ದಿ
ಮಂಗಳೂರು | ಅತ್ತಾವರ ಕಟ್ಟೆಯಲ್ಲಿ ಸದ್ಭಾವನಾ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
15/08/2026, 23:32
ಮಂಗಳೂರು(reporterkarnataka.com):ನಗರದ ಜಪ್ಪು ವೃತ್ತದ ಸದ್ಭಾವನಾ ವೇದಿಕೆಯ ವತಿಯಿಂದ ಬಿಜೈ ಲಯನ್ಸ್ ಕ್ಲಬ್‌ನ ಸಹಯೋಗದಲ್ಲಿ ಅತ್ತಾವರ ಕಟ್ಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಬಿಜೈ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಲಯನ್ಸ್ ಪ್ರೀತಿ ಡಿ’ಸೋಜಾ ಮಾತನಾಡಿ, “ಸ್ವಾತಂತ್ರ್ಯದ 80 ವರ್ಷಗಳಲ್ಲಿ ಭಾರತವು ಹಲವಾರು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ನಮ್ಮ ದೇಶ ಗಡಿಗಳಲ್ಲಿ ಮಾತ್ರ ಭದ್ರವಾಗಿದ್ದರೆ ಸಾಲದು; ದೇಶದ ಒಳಗೂ ಒಗ್ಗಟ್ಟು ಮತ್ತು ಏಕತೆಯ ಶಕ್ತಿಯನ್ನು ಪ್ರದರ್ಶಿಸಬೇಕು” ಎಂದು ಹೇಳಿದರು.
ಸದ್ಭಾವನಾ ವೇದಿಕೆಯ ಅಧ್ಯಕ್ಷ ದಿವಾನ್ ಕೇಶವ ಭಟ್ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ, “ನಾವೆಲ್ಲರೂ ಒಂದಾಗಿ, ಜಾತಿ-ಮತ ಭೇದವಿಲ್ಲದ ಸುಂದರ ಹಾಗೂ ಸೌಹಾರ್ದಯುತ ಭಾರತವನ್ನು ನಿರ್ಮಿಸೋಣ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸದ್ಭಾವನಾ ವೇದಿಕೆ ಹಾಗೂ ಬಿಜೈ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಗಣ್ಯರು ಉಪಸ್ಥಿತರಿದ್ದರು.












