5:29 PM Saturday27 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಮೇ ತಿಂಗಳ ಟಾಪರ್ ಆಗಿ ಕೃತಿ ಎಲ್. ಪೂಜಾರಿ ಹಾಗೂ ವಾಗ್ಮಿ ಕೆ. ಪುತ್ತೂರು ಆಯ್ಕೆ

27/06/2026, 17:28

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ಕೃತಿ ಎಲ್. ಪೂಜಾರಿ ಹಾಗೂ ವಾಗ್ಮಿ ಕೆ. ಪುತ್ತೂರು ಆಯ್ಕೆಯಾಗಿದ್ದಾರೆ.
ಲಕ್ಷ್ಮಣ್ ಪೂಜಾರಿ ಮತ್ತು ಆರತಿ ಲಕ್ಷ್ಮಣ್ ಪೂಜಾರಿ ಮಡಂತ್ಯಾರ್ ಅವರ ಪುತ್ರಿಯಾಗಿರುವ ಕೃತಿ ಎಲ್. ಪೂಜಾರಿ ಅವರು ಸೆಕ್ರೆಡ್ ಹಾರ್ಟ್ ಇಂಗ್ಲಿಷ್ ಮೀಡಿಯಂ ಶಾಲೆ ಮಡಂತ್ಯಾರ್ ನಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ಸಂಗೀತ ಕಲಾ ನಿಧಿ ಪ್ರಶಸ್ತಿ ಪುರಸ್ಕೃತರಾದ ನಾಡಿನ ಹೆಮ್ಮೆಯ ಸುಗಮ ಸಂಗೀತ ಗಾಯಕ ಪುತ್ತೂರಿನ ಗಾನ ಸಿರಿ ಕಲಾ ಕೇಂದ್ರದ ಮಡಂತ್ಯಾರ್ ಶಾಖೆಯಲ್ಲಿ ಕಿರಣ್ ಕುಮಾರ್ ಅವರಿಂದ ಸಂಗೀತ ಅಭ್ಯಾಸ,’ಚಂದುಸ್ ಡ್ಯಾನ್ಸಿಂಗ್ ಕಿಡ್ಸ್ ಫಿಲ್ಮ್ ಡ್ಯಾನ್ಸ್’
ಕ್ಲಾಸ್ ನಲ್ಲಿ ಕಲಿತು 35ರಿಂದ 40 ಸ್ಟೇಜ್ ಶೋ ಮಾಡಿರುತ್ತಾಳೆ. ನಮ್ಮ ಕುಡ್ಲ ಚಾನೆಲ್, ಸುದ್ದಿ ಚಾನೆಲ್ ಹಾಗೂ ಯು ಪ್ಲಸ್ ಟಿವಿ ಚಾನೆಲ್ ಗಳಲ್ಲಿ ಭಾಗವಹಿಸುವ ಜೊತೆಗೆ ಅರವಿಂದ್ ಬೋಳಾರ್ ಜತೆ ಆಕ್ಟ್ ಮಾಡಿದ್ದಾಳೆ.


ಕನ್ನಡ ಹೆಜ್ಜಾರು ಸಿನಿಮಾದಲ್ಲಿ ಡ್ಯಾನ್ಸ್ ಮೂಲಕ ಪಾತ್ರ ಮಾಡಿದ್ದಾಳೆ. ದೇವಿ ಕಿರಣ್ ಕಲಾಣಿಕೆತನ್ ಅವರಲ್ಲಿ ಭರತನಾಟ್ಯ ಕಲಿಯುತ್ತಿದ್ದು, ಜೊತೆಗೆ ಗಾನಸಿರಿ ಸುಗಮ ಸಂಗೀತ ಕಲಿಕೆ,
ಶಾಲೆಯಲ್ಲಿ ಓದುವುದರಲ್ಲಿ ಚುರುಕು, ಡ್ರಾಯಿಂಗ್ ಬಿಡಿಸುವುದು ಜೊತೆಗೆ ಯೋಗ,ಶಾರದೇ ಫೋಟೋ ಕಾಂಟೆಸ್ಟ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಡ್ಯಾನ್ಸ್ , ರನ್ನಿಂಗ್ ರೇಸ್, ಕೃಷ್ಣ ವೇಷ ಸ್ಪರ್ಧೆ ಕುದ್ರೋಳಿ ದಸರಾದಲ್ಲಿ ಹುಲಿ ವೇಷ, ರೀಲ್ಸ್ ಹಾಗೂ ನಾನಾ ತರದ ಸ್ಟಂಟ್ಸ್ ಮೂಲಕ ಗಮನ ಸೆಳೆದಿದ್ದಾಳೆ. ಹಲವಾರು ಕಾಂಪಿಟೇಷನ್ ನಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾಳೆ. ಇತ್ತೀಚೆಗೆ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ರಾಜ್ಯ ಮಟ್ಟದ ಗಾನ ಸಿರಿ ಸಾಧನಾ ಸಿರಿ ರಾಜ್ಯ ಪ್ರಶಸ್ತಿ ದೊರಕಿದೆ. ಇವಳಿಗೆ ಮೂಕ ಪ್ರಾಣಿಗಳೆಂದರೆ ತುಂಬಾ ಅಚ್ಚುಮೆಚ್ಚು. ಪ್ರಸ್ತುತ ಪದ್ಮಶ್ರೀ ಅವರ ವಾಯ್ಸ್ ಆಫ್ ಆರಾಧನಾ ತಂಡದ ಬಾಲ ಪ್ರತಿಭೆಯಾಗಿರುತ್ತಾಳೆ.
ಪದ್ಮಶ್ರೀ ಮೇಡಂ ಅವರು ಮಕ್ಕಳಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯನ್ನು ಕೊಟ್ಟಿರುತ್ತಾರೆ. ಹಾಗೆಯೇ ಬಡತನದಲ್ಲಿರುವವರಿಗೆ ತಂಡದ ಸಹಾಯದಿಂದ ಹಣಕಾಸಿನ ಸಹಾಯವನ್ನು ಮಾಡುತ್ತಾ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
ವಾಗ್ಮಿ ಕೆ ಪುತ್ತೂರು 10 ತಿಂಗಳ ಮಗುವಾಗಿದ್ದಾಗ ಆನ್‌ಲೈನ್ ನಡೆಸಿದ ಕೃಷ್ಣ ವೇಷ ಫೋಟೋ ಸ್ಪರ್ಧೆ 10-12 ರವರೆಗೆ ಬಹುಮಾನ ಪಡೆದಿದ್ದಾಳೆ. ಅದಲ್ಲದೇ ಡ್ಯಾನ್ಸ್, ಛದ್ಮವೇಷ ಸ್ಪರ್ಧೆಯಲ್ಲಿ ಹಾಗೂ ಇದುವರೆಗೂ ನಡೆಸಿದ ಕೃಷ್ಣ ವೇಷ ಸ್ವರ್ಧೆ, ಇನ್ನಿತರ ಸ್ಪರ್ಧೆಯಲ್ಲಿ ಭಾಗವಹಿಸಿ ಇದುವರೆಗೆ ಸುಮಾರು 40 ಕ್ಕಿಂತ ಹೆಚ್ಚು ಬಹುಮಾನ ಪಡೆದಿದ್ದಾಳೆ. Chanel -9 ನಡೆಸಿದ ಕೃಷ್ಣ ವೇಷ ವೀಡಿಯೋ ಸ್ವರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಹಾಗೂ ವಿಜಯ ಕರ್ನಾಟಕದವರು ನಡೆಸಿದ ಕೃಷ್ಣ ವೇಷ ಫೋಟೋ ಸ್ವರ್ಧೆಯಲ್ಲಿ ಪ್ರೋತ್ಸಾಹಕ ಬಹುಮಾನ ಪಡೆದಿದ್ದಾಳೆ. 6 ವರ್ಷದ ಈಕೆ ಡ್ಯಾನ್ಸ್, ಹಾಡುಗಾರಿಕೆ ಹಾಗೂ ಶಾಲಾ ಚಟುವಟಿಕೆಯಲ್ಲಿ ತುಂಬಾನೆ ಉತ್ತಮ ರೀತಿಯಲ್ಲಿ ಭಾಗವಹಿಸಿದ್ದಾಳೆ. ಹಾಗೂ z kannada ಸರಿಗಮಪ season-20 ಇದರಲ್ಲಿ 2ನೇ ಸುತ್ತಿಗೆ ಆಯ್ಕೆಯಾಗಿ ಭಾಗವಹಿಸಿದ್ದಾಳೆ.
ಪ್ರಸ್ತುತ ಈಕೆ ವಾಯ್ಸ್ ಆಫ್ ಆರಾಧನಾ ತಂಡದ ಬಾಲ ಪ್ರತಿಭೆಯಾಗಿ, ಸೇವಾ ರತ್ನ ಪ್ರಶಸ್ತಿ ಪಡೆದಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು