11:33 PM Tuesday16 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ ಬೃಹತ್ ಕಟೌಟ್

16/06/2026, 23:21

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕೊಡಗು ಕ್ರೀಡಾಪಟುಗಳ ತವರೂರು. ಇಲ್ಲಿನವರ ರಕ್ತದಲ್ಲೇ ಕ್ರೀಡಾ ಪ್ರೇಮ ಹರಿಯುತ್ತದೆ ಎಂಬುದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಹೌದು, ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ವಿಶ್ವ ಫುಟ್​ಬಾಲ್​ನ ಕಾಲ್ಚೆಂಡು ಚತುರ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಬೃಹತ್ ಕಟೌಟ್ ತಲೆ ಎತ್ತಿ ನಿಂಗಿದೆ.

*40 ಅಡಿ ಎತ್ತರದ ಕಟೌಟ್:*
ಫಿಫಾ ವಿಶ್ವಕಪ್ ಕಾವೇರುತ್ತಿದ್ದಂತೆ ಸ್ಥಳೀಯ ಫುಟ್‌ಬಾಲ್ ಕ್ಲಬ್ ಆದ​ ‘ಅಮಿಟಿ ಯುನೈಟೆಡ್ ಎಫ್​ಸಿ’ ಮತ್ತು ರೊನಾಲ್ಡೊ ಅವರ ಕಟ್ಟಾ ಅಭಿಮಾನಿಗಳು ಸೇರಿ ಸರಿಸುಮಾರು 40 ಅಡಿ ಎತ್ತರದ ಈ ಬೃಹತ್ ಕಟೌಟ್ ಅನ್ನು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ನಿಲ್ಲಿಸಿದ್ದಾರೆ. ಇದೀಗ ಈ ಕಟೌಟ್ ಆ ಭಾಗದಲ್ಲಿ ಹಾದುಹೋಗುವ ಪ್ರವಾಸಿಗರು ಮತ್ತು ಸ್ಥಳೀಯರ ಗಮನ ಸೆಳೆಯುತ್ತಿದೆ.ಕೊಡಗಿನ ಫುಟ್‌ಬಾಲ್ ಕ್ರೇಝ್:
ಕರ್ನಾಟಕದಲ್ಲಿ ಕೊಡಗು ಜಿಲ್ಲೆಯನ್ನು ‘ಹಾಕಿಯ ತವರೂರು’ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಹಾಕಿ ಮತ್ತು ಕ್ರಿಕೆಟ್‌ಗೆ ಎಷ್ಟು ಕ್ರೇಝ್ ಇದೆಯೋ, ಅಷ್ಟೇ ಕ್ರೇಝ್ ಫುಟ್‌ಬಾಲ್​ಗೂ ಇದೆ. ಅದರಲ್ಲೂ ಸುಂಟಿಕೊಪ್ಪ ಕೊಡಗಿನ ‘ಫುಟ್​ಬಾಲ್ ಮೆಕ್ಕಾ’ ಎಂದೇ ಗುರುತಿಸಿಕೊಂಡಿದೆ.ವಿಶ್ವಕಪ್ ಅಥವಾ ಪ್ರಮುಖ ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಗಳು ಬಂದಾಗಲೆಲ್ಲಾ ಕೊಡಗಿನ ಮೂಲೆ ಮೂಲೆಗಳಲ್ಲೂ ಫುಟ್‌ಬಾಲ್ ಫೀವರ್ ಮುಗಿಲೇರುತ್ತದೆ. ಈ ಬಾರಿ ಕ್ರಿಸ್ಟಿಯಾನೊ ರೊನಾಲ್ಡೊ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಮೇಲಿನ ಪ್ರೀತಿಯನ್ನು ಈ ಬೃಹತ್ ಕಟೌಟ್ ಮೂಲಕ ಜಗತ್ತಿಗೆ ಸಾರಿದ್ದಾರೆ.

*ಫಿಫಾ ಫೀವರ್:*
ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಕೇವಲ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಟೌಟ್ ಮಾತ್ರ ತಲೆ ಎತ್ತಿ ನಿಂತಿಲ್ಲ. ಜಿ-ಟೌನ್ ಫುಟ್​ಬಾಲ್ ಕ್ಲಬ್ ಕೂಡ ಬ್ರೆಝಿಲ್, ಪೋರ್ಚುಗಲ್, ಅರ್ಜೆಂಟೀನಾ ತಂಡಗಳ ಬೃಹತಾಕಾರದ ಬ್ಯಾನರ್​​ ಅನ್ನು ಕೂಡ ನಿಲ್ಲಿಸಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ತಂಡಗಳ ಗೆಲುವಿಗಾಗಿ ಹಾರೈಸಿದ್ದಾರೆ.

*ಮೈದಾನದ ಬೇಡಿಕೆ:*
ಸುಂಟಿಕೊಪ್ಪ ಕೊಡಗಿನ ‘ಫುಟ್​ಬಾಲ್ ಮೆಕ್ಕಾ’ ಎಂದು ಗುರುತಿಸಿಕೊಂಡರೂ, ಈ ಭಾಗದಲ್ಲಿ ಫುಟ್‌ಬಾಲ್‌ಗೆ ಸೂಕ್ತವಾದ ಸುಸಜ್ಜಿತ ಆಟದ ಮೈದಾನ ಹಾಗೂ ಕ್ರೀಡಾ ಸೌಲಭ್ಯಗಳಿಲ್ಲ ಎಂಬುದೇ ಸತ್ಯ. ಇದೀ ತಂಡಗಳ ಬ್ಯಾನರ್ ಹಾಗೂ ಕಟೌಟ್ ನಿಲ್ಲಿಸುವ ಮೂಲಕ ಸುಂಟಿಕೊಪ್ಪ ಫುಟ್​ಬಾಲ್ ಪ್ರೇಮಿಗಳು ಸುಸಜ್ಜಿತ ಆಟದ ಮೈದಾನಕ್ಕಾಗಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

*ಪ್ರವಾಸಿಗರ ಸೆಲ್ಫಿ ಸ್ಪಾಟ್:*
ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿಗೆ ತೆರಳುವ ಪ್ರವಾಸಿಗರು ಈ 40 ಅಡಿಯ ರೊನಾಲ್ಡೊ ಕಟೌಟ್ ನೋಡಿ ಗಾಡಿ ನಿಲ್ಲಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ‘ಕೊಡಗಿನ ಹುಡುಗರ ಫುಟ್‌ಬಾಲ್ ಪ್ರೇಮಕ್ಕೆ ಸಾಟಿಯೇ ಇಲ್ಲ’ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಒಟ್ಟಾರೆಯಾಗಿ ಫುಟ್​ಬಾಲ್ ಎನ್ನುವುದು ಕೇವಲ ಆಟವಲ್ಲ, ಅದೊಂದು ಭಾವನೆ ಎಂಬುದನ್ನು ಕೊಡಗಿನ ಕ್ರೀಡಾಭಿಮಾನಿಗಳು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು