2:20 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಪುತ್ತೂರು: ಜೂನ್ 7ರಂದು ಸಾಮೂಹಿಕ ಸರಸ್ವತೀ ವಂದನೆ ಮತ್ತು ವಿದ್ಯಾ ಸಂಕಲ್ಪ ಕಾರ್ಯಕ್ರಮ

04/06/2026, 18:45

ಪುತ್ತೂರು(reporterkarnataka.com): ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ
(ಪುತ್ತೂರು ತಾಲೂಕು ಮತ್ತು ಗ್ರಾಮಾಂತರ)ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಇದರ ಜಂಟಿ ಆಯೋಜಕತ್ವದಲ್ಲಿ ಶ್ರೀ ಮುಂಡ್ಯತ್ತಾಯ ದೈವಸ್ಥಾನ ಪಾಂಗಳಾಯಿ, ಮುಳಿಯ ದೇವರಕಟ್ಟೆ ಕೋರ್ಟ್ ರಸ್ತೆ , ಅಟಲ್ ಉದ್ಯಾನ ಕೊಂಬೆಟ್ಟು , ಮಾಸ್ಟರ್ ಪ್ಲಾನರಿ ಕಲ್ಲೇಗ , ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾ ವಿಷ್ಣು ದೇವಸ್ಥಾನ ಕೆಮ್ಮಿಂಜೆ, ಶ್ರೀ ರಾಘವೇಂದ್ರ ಮಠ ಕಲ್ಲಾರೆ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಕೇಂದ್ರಗಳ ಸಹಯೋಗದೊಂದಿಗೆ ಪ್ರಸ್ತುತ ವರ್ಷದ ಶಾಲಾ ಹಾಗೂ ಕಾಲೇಜುಗಳ ಆರಂಭದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ವಿದ್ಯೆ, ಸಂಸ್ಕಾರ ಹಾಗೂ ಏಕಾಗ್ರತೆಯ ಅಭಿವೃದ್ಧಿಗಾಗಿ “ಸಾಮೂಹಿಕ ಸರಸ್ವತೀ ವಂದನೆ” ಮತ್ತು “ವಿದ್ಯಾ ಸಂಕಲ್ಪ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾಮೂಹಿಕ ಸರಸ್ವತೀ ವಂದನೆ ದಿನಾಂಕ 7 ಜೂನ್ 2026ನೇ ಆದಿತ್ಯವಾರ, ಬೆಳಗ್ಗೆ ಗಂಟೆ 9 ರಿಂದ 11 ವರೆಗೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ದಲ್ಲಿ ನಡೆಯಲಿದೆ.
ವಿದ್ಯಾ ಸಂಕಲ್ಪ : ವಿದ್ಯಾರ್ಥಿಗಳಿಂದ
ಮಕ್ಕಳಿಂದ ಪುಸ್ತಕಕ್ಕೆ ಪುಷ್ಪಾರ್ಚನೆ
ಸರಸ್ವತೀ ಸೂಕ್ತ ಹವನ : ದೇವಳದ ವೈದಿಕರಿಂದ
ಶಿಶು ಮಂದಿರದಿಂದ ಪ್ರಾರಂಭಿಸಿ ಸ್ನಾತಕೋತ್ತರ ಪದವಿ ವರೆಗಿನ ಸಾರ್ವಜನಿಕ ವಿದ್ಯಾರ್ಥಿಗಳು ಕೂಡ ಭಾಗವಹಿಸಿ ಸರಸ್ವತಿ ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ವಿ.ಸೂ : ಮಕ್ಕಳು ಮನೆಯಿಂದ ಬರುವಾಗ
1. ಸಾಂಪ್ರದಾಯಿಕ ಉಡುಗೆ ತೊಡುಗೆ
2. ಒಂದು ಶಾಲಾ ಪುಸ್ತಕ ಅಥವಾ ಸುಜ್ಞಾನ ದೀಪಿಕೆ ಪುಸ್ತಕ
3. ಮನೆಯಲ್ಲೇ ಬೆಳೆದ ಒಂದು ಬೊಗಸೆ ಹೂವು ತಂದರೆ ಉತ್ತಮ
ಸಹಕಾರ : ನಿತ್ಯ ಕರಸೇವಕರು
ಬನ್ನಿ… ಭಾಗವಹಿಸಿ… ದೇವಿಯ ಕೃಪೆಗೆ ಪಾತ್ರರಾಗಿರಿ..

ಇತ್ತೀಚಿನ ಸುದ್ದಿ

ಜಾಹೀರಾತು