ಇತ್ತೀಚಿನ ಸುದ್ದಿ
ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು ಎಳನೀರು, ರಾಗಿ ಮಾಲ್ಟ್
25/04/2026, 21:32
ಗಣೇಶ್ ಇನಾಂದಾರ್ ಬಳ್ಳಾರಿ
info.reporterkarnataka@gmail.com
ಬಿಸಿಲು ನಾಡು ಬಳ್ಳಾರಿಯಲ್ಲಿ ಈಗ ಪ್ರತಿದಿನ ಸರಾಸರಿ 40-42 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹಾಗೂ ಜಿಲ್ಲಾಡಳಿತ ತಿಳಿಸಿದೆ.
ಬಳ್ಳಾರಿ ಜನತೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದಾರೆ,
ಮನೆ ಬಿಟ್ಟು ಹೊರಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಜನರ ದೈನಂದಿಕ ಸ್ಥಿತಿಯೇ ಹೀಗಿರುವಾಗ ಎಲ್ಲಾ ಪ್ರಾಣಿಗಳು ಸೇರಿದಂತೆ ಶ್ವಾನಗಳ ದೈನಂದಿಕ ಜೀವನ ಕ್ರಮ ಗಂಭೀರವಾಗಿದೆ.
ಈ ವಾಸ್ಥವ ಸ್ಥಿತಿಯನ್ನು ಮನವರಿಕೆ ಮಾಡಿಕೊಂಡ ಬಳ್ಳಾರಿಯ ಪೊಲೀಸ್ ಇಲಾಖೆಯು ತನ್ನ ಶ್ವಾನಗಳನ್ನು ಬಿಸಿಲಿನಿಂದ ತಂಪಾಗಿಡಲು ವಿಶೇಷ ಕಾಳಜಿಯ ಕ್ರಮಕೈಗೊಂಡಿದೆ. ಇಲ್ಲಿಯ ಪೊಲೀಸ್ ಇಲಾಖೆಯ ಡಿಎಆರ್ ಮೈದಾನದಲ್ಲಿರುವ ಆರು ಶ್ವಾನಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂಲರ್ ವ್ಯವಸ್ಥೆ ಮಾಡಲಾಗಿದೆ.
ಕೆನಡಾ ಮತ್ತು ಜರ್ಮನಿ ದೇಶಗಳ ಡಾಬರ್ ಮನ್ ಪಿಂಚರ್, ಲ್ಯಾಬ್ರಡಾರ್ ಈ ವಿದೇಶಿ ತಳಿಯ ಶ್ವಾನಗಳಿಗೆ ರಾಯಲ್ ಟ್ರೀಟ್ಮೆಂಟ್ ಕೊಡಲಾಗ್ತಿದೆ. ಅದು ಅನಿವಾರ್ಯ ಕೂಡವಾಗಿದೆ. ಜೊತೆಗೆ ದ್ರವ ಪದಾರ್ಥಗಳಾದ ಗ್ಲೂಕಾನ್ ಡಿ ಹಾಗೂ ಶಕ್ತಿವರ್ಧಕ ಪಾನೀಯಗಳನ್ನು ನೀಡಲಾಗುತ್ತಿದೆ. ಜೊತೆಗೆ ರಾಗಿ ಮಾಲ್ಟ್ ಸೇರಿದಂತೆ ಇನ್ನಿತರ ದ್ರವರೂಪದ ಪದಾರ್ಥಗಳನ್ನ ಕೊಡಲಾಗುತ್ತಿದೆ.
ಬೆಳಗ್ಗೆ 8 ಗಂಟೆಗೆ ಹಾಲು, ಪೆಡ್ ಗ್ರೇ, ಮೊಟ್ಟೆ, ರಾಗಿ ಮಾಲ್ಟ್ ನೀಡಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಎಳನೀರು, ಮಧ್ಯಾಹ್ನ 3 ಗಂಟೆಗೆ ಮತ್ತೊಮ್ಮೆ ಎಳನೀರು ಕೊಡಲಾಗುತ್ತಿದೆ. ಸಂಜೆ 5 ಗಂಟೆಗೆ ಮಟನ್, ತರಕಾರಿ ಮಿಶ್ರಿತ ರೈಸ್ ಕೊಡಲಾಗುತ್ತದೆ. ಜೊತೆಗೆ ವೈದ್ಯರು ನೀಡಿರುವ ಪ್ರೋಟೀನ್ ಹಾಗೂ ವಿಟಮಿನ್ ಟಾನಿಕ್ ಗಂಜಿಯಲ್ಲಿ ಸೇರಿಸಿ ಕೊಡಲಾಗುತ್ತಿದೆ.







ಇಗಿರುವ 6 ಶ್ವಾನಗಳಿಗೂ, ಪ್ರತಿ ಶ್ವಾನಕ್ಕೂ ಒಂದೊಂದು ಏರ್ ಕೂಲರ್ ವ್ಯವಸ್ಥೆಮಾಡಲಾಗಿದೆ. ಅತಿ ಹೆಚ್ಚು ಬಿಸಿಲು ಇರುವ ಕಾರಣ ಪೊಲೀಸ್ ಶ್ವಾನಗಳು ಹೆಚ್ಚಾಗಿ ಹೊರಗಡೆ ಬರುವುದಿಲ್ಲ.ದಿನಕ್ಕೆ 24 ಗಂಟೆ ಏರ್ ಕೂಲರ್ ವ್ಯವಸ್ಥೆ ಡಿಎಆರ್ ಮೈದಾನದಲ್ಲಿರುವ ಪೊಲೀಸ್ ಶ್ವಾನಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಗಳು ಒಂದೊಂದು ಕೂಲರ್ ಆಳವಡಿಸಲಾಗಿದೆ. ಈ ಕೂಲರ್ಗಳು ದಿನದ 24 ಗಂಟೆಯೂ ಆನ್ ಆಗಿರುತ್ತದೆ. ಇಲಾಖೆಯ ಈ ವಿಶೇಷ ಕಾಳಜಿಯು ಸಾರ್ವಜನಿಕ ವಿಶೇಷ ಶ್ಲಾಘನಿಯವಾಗಿದೆ.













