12:25 PM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಚೀನಾ ಕಡೆ ಹೊರಟಿದ್ದ ರಷ್ಯಾ ತೈಲ ಹಡಗು ಕಡಲನಗರಿಗೆ: ಮಾ.21ರಂದು ನವ ಮಂಗಳೂರು ಬಂದರಿಗೆ?

19/03/2026, 13:53

ಮಂಗಳೂರು(repprterkarnataka.com): ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಸರ್ಕಾರ ವಿವಿಧ ದೇಶಗಳಿಂದ ಕಚ್ಚಾತೈಲ ಖರೀದಿ ಪ್ರಮಾಣ ಹೆಚ್ಚಳ ಮಾಡಿದೆ. ಅದರ ಬೆನ್ನಲ್ಲೇ ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ಹಡಗೊಂದು ದಿಢೀರನೆ ತನ್ನ ಮಾರ್ಗ ಬದಲಾಯಿಸಿ ಭಾರತದತ್ತ ಹೊರಟಿದೆ. ಈ ಹಡಗು ಮಾ.21ರಂದು ನವ ಮಂಗಳೂರು ಬಂದರಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಜನವರಿ ತಿಂಗಳಲ್ಲಿ ಬಾಲ್ಟಿಕ್‌ ಸಮುದ್ರ ತೀರದಿಂದ ತೈಲ ತುಂಬಿಕೊಂಡಿದ್ದ ಆಕ್ವಾ ಟೈಟನ್‌ ಎಂಬ ಹಡಗು ಪ್ರಯಾಣ ಆರಂಭಿಸಿತ್ತು. ಮೂಲ ದಾಖಲೆಗಳ ಪ್ರಕಾರ ಅದು ಚೀನಾದತ್ತ ಹೊರಟಿತ್ತು. ಆದರೆ ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರವಾದ ಬಳಿಕ ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಅಮೆರಿಕ ಅವಕಾಶ ಮಾಡಿಕೊಟ್ಟಿತ್ತು. ಅದರ ಬೆನ್ನಲ್ಲೇ ರಷ್ಯಾದ ಭಾರತ ಡೀಲ್‌ ಮಾಡಿಕೊಂಡಿದ್ದು ಅದರ ಪರಿಣಾಮ ಚೀನಾದ ಕಡೆ ಹೊರಟಿದ್ದ ಹಡಗು ತನ್ನ ಪಥ ಬದಲಿಸಿ ಭಾರತದತ್ತ ಹೊರಟಿದೆ ಎಂದು ಮೂಲಗಳು ತಿಳಿಸಿವೆ.

*2.11 ಕೋಟಿ ಸಿಲಿಂಡರ್‌ ತುಂಬಿಸಬಲ್ಲ ಎಲ್‌ಪಿಜಿ ಇನ್ನೂ ಹೋರ್ಮುಜ್‌ನಲ್ಲಿ*
ಎಲ್‌ಪಿಜಿ ಹೊತ್ತ 2 ಸೇರಿ 4 ಭಾರತೀಯ ನೌಕೆಗಳು ಗಲ್ಫ್‌ನಿಂದ ತವರಿಗೆ ಮರಳಿದ್ದರೂ ಇನ್ನೂ 22 ಹಡಗುಗಳು ಹೋರ್ಮುಜ್‌ ಜಲಸಂಧಿಯ ಬಳಿಯೇ ಇವೆ. ಆ ಪೈಕಿ 6 ನೌಕೆಗಳಲ್ಲಿ 3 ಲಕ್ಷ ಟನ್ ಎಲ್‌ಪಿಜಿ ಇದ್ದು, ಇದು 3-4 ದಿನ ಭಾರತದಲ್ಲಿ ಪೂರೈಕೆಯಾಗುವ ಎಲ್ಲಾ ಸಿಲಿಂಡರ್‌ಗಳನ್ನು ತಲುಪಿಸುವಷ್ಟಾಗಿದೆ.
ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಈ ಬಗ್ಗೆ ಮಾಹಿತಿ ನೀಡಿದ್ದು, ‘ಸದ್ಯ ಭಾರತದ 6 ಎಲ್‌ಪಿಜಿ, 1 ಎಲ್‌ಎನ್‌ಜಿ, 4 ಕಚ್ಚಾತೈಲ, 1 ರಾಸಾಯನಿಕ, 3 ಕಂಟೇಯ್ನರ್‌, 2 ಸರಕು ಸಾಗಣೆ ಹಡಗುಗಳು ಹೋರ್ಮುಜ್‌ ದಾಟುವುದು ಬಾಕಿ ಇದೆ. ಜತೆಗೆ ಒಂದು ಹೂಳೆತ್ತುವ, ಇನ್ನೊಂದು ಖಾಲಿ ಮತ್ತು 3 ನಿಯಮಿತ ನಿರ್ವಹಣೆಗೆ ಒಳಪಟ್ಟವುಗಳಾಗಿವೆ.
ಇವುಗಳ ಮೇಲೆ ಹತ್ತಿರದಿಂದ ನಿಗಾ ವಹಿಸಲಾಗುತ್ತಿದೆ ಹಾಗೂ ಅಗತ್ಯ ಬೆಂಬಲ ನೀಡಲಾಗುತ್ತಿದೆ’ ಎಂದಿದ್ದಾರೆ. ಅಂತೆಯೇ, ಮುಂಬೈನ ಜವಾಹರಲಾಲ್‌ ನೆಹರು ಬಂದರಿನಿಂದ ಗಲ್ಫ್‌ ಕಡೆ ಹೊರಟಿದ್ದ ಹಡಗುಗಳ ಸಂಖ್ಯೆಯನ್ನು 2,000ದಿಂದ 1,000ಕ್ಕೆ ಇಳಿಸಲಾಗಿದೆ. ಕೆಲವನ್ನು ಒಮಾನ್‌, ಯುಎಇಗೆ ರವಾನಿಸಿದರೆ, ಕೆಲವು ಸ್ಥಳೀಯ ಮಾರುಕಟ್ಟೆಗೆ ಮರಳಿವೆ ಎಂದು ತಿಳಿಸಿದರು.

*ಯಾವುದು ಎಷ್ಟಿದೆ?*

*ಕಚ್ಚಾತೈಲ: 16.7 ಲಕ್ಷ
ಟನ್‌
*ಎಲ್‌ಪಿಜಿ: 3.2 ಲಕ್ಷ ಟನ್‌
*ಎಲ್‌ಎನ್‌ಜಿ: 2 ಲಕ್ಷ ಟನ್‌

ಇತ್ತೀಚಿನ ಸುದ್ದಿ

ಜಾಹೀರಾತು