12:21 PM Sunday21 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

ಮಂಗಳೂರಿಗೆ ಬರೋಲ್ಲ ಅಡುಗೆ ಅನಿಲ ಹೊತ್ತ ಶಿವಾಲಿಕ್ ಹಡಗು: ಗುಜರಾತಿನಲ್ಲೇ ಇಳಿಸಲಿದೆ ಎಲ್ ಪಿಜಿ

20/03/2026, 11:13

ಮಂಗಳೂರು(reporterkarnataka.com): ಪಶ್ಚಿಮ ಏಷ್ಯಾದ ಯುದ್ಧ ಪೀಡಿತ ಪ್ರದೇಶದಲ್ಲಿರುವ ಹೊರ್ಮುಜ್‌ ಜಲಸಂಧಿಯ ಮೂಲಕ ಸಾಗಿ ಗುಜರಾತಿನ ಮುಂದ್ರಾ ಬಂದರನ್ನು ಸೋಮವಾರ ತಲುಪಿದ್ದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಹೊತ್ತ ಶಿವಾಲಿಕ್‌ ಹಡಗು ನವಮಂಗಳೂರು ಬಂದರಿಗೆ ಬರುತ್ತಿಲ್ಲ.
ಶಿವಾಲಿಕ್ ಹಡಗಿನಲ್ಲಿದ್ದ ಎಲ್‌ಪಿಜಿಯಲ್ಲಿ ಸುಮಾರು 20 ಸಾವಿರ ಟನ್‌ ಅನ್ನು ಮುಂದ್ರಾ ಬಂದರಿನಲ್ಲಿ ಇಳಿಸಿ, ಸುಮಾರು 26 ಸಾವಿರ ಟನ್‌ ಎಲ್‌ಪಿಜಿಯೊಂದಿಗೆ ಇಲ್ಲಿನ ನವಮಂಗಳೂರು ಬಂದರಿಗೆ ಬುಧವಾರ ಬರಲಿದೆ ಎಂಬ ಮಾಹಿತಿ ಇತ್ತು. ಆದರೆ ಆ ಹಡಗು ಇಲ್ಲಿಗೆ ಬರುತ್ತಿಲ್ಲ’ ಎಂದು ನವಮಂಗಳೂರು ಬಂದರಿನ ಮೂಲಗಳು ತಿಳಿಸಿವೆ.
‘ಶಿವಾಲಿಕ್ ಹಡಗಿನಲ್ಲಿದ್ದ ಭಾಗಶಃ ಎಲ್‌ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಇಳಿಸಲಾಗಿದೆ. ಇನ್ನುಳಿದ ಎಲ್‌ಪಿಜಿ ಅನ್ನು ಗುಜರಾತಿನ ದಹೇಜ್ ಟರ್ಮಿನಲ್‌ನಲ್ಲಿ ಇಳಿಸಲಾಗುತ್ತಿದೆ’ ಎಂದು ಮೂಲಗಳಿಂದ ತಿಳಿದುಬಂದಿದೆ.

ಎಚ್‌ಪಿಸಿಎಲ್‌ ಸಂಸ್ಥೆಗೆ ಎಲ್‌ಪಿಜಿ ಪೂರೈಸುವ ಹಡಗೊಂದು ಇದೇ 20ರ ನಂತರ ನವ ಮಂಗಳೂರು ಬಂದರು ತಲುಪುವ ನಿರೀಕ್ಷೆ ಇದೆ.

‘ನಮ್ಮ ಸಂಸ್ಥೆಗೆ ಎಲ್‌ಪಿಜಿ ಪೂರೈಸುವ ಹಡಗು ಮಂಗಳೂರು ಕಡೆಗೆ ಪ್ರಯಾಣ ಬೆಳೆಸುತ್ತಿದೆ. ಹಡಗಿನಲ್ಲಿರುವ ಒಟ್ಟು ಎಲ್‌ಪಿಜಿಯಲ್ಲಿ ಇಲ್ಲಿ ಎಷ್ಟನ್ನು ಇಳಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಇಲ್ಲ’ ಎಂದು ಎಚ್‌ಪಿಸಿಎಲ್ ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿ

ಜಾಹೀರಾತು