5:52 AM Wednesday28 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ಅರಮನೆ ವಿಚಾರವಾಗಿ ಸಚಿವ ಯತೀಂದ್ರ ಹೇಳಿಕೆಗೆ ವಿರೋಧ: ಪ್ರಮೋದಾದೇವಿ ಒಡೆಯರ್ ಬೆಂಬಲಕ್ಕೆ… Chikkamagaluru | ಆಟೋ‌- ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ: ಬೈಕ್ ಸವಾರರ ಸ್ಥಳದಲ್ಲೇ… ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ

ಇತ್ತೀಚಿನ ಸುದ್ದಿ

ಎವರೆಸ್ಟ್‌ ಏರಿದ ಮೂವರು ಭಾರತೀಯರು ಸೇರಿದಂತೆ 274 ಮಂದಿ: ವಿಶ್ವ ದಾಖಲೆ

22/05/2026, 13:59

ನವದೆಹಲಿ(reporterkarnataka.com): ಮೂವರು ಭಾರತೀಯರು ಸೇರಿದಂತೆ 274 ಮಂದಿ ಎವರೆಸ್ಟ್‌ ಶಿಖರವನ್ನೇರಿ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.
ಇದೇ ಮೊದಲ ಬಾರಿಗೆ ಏಕಕಾಲಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪರ್ವತಾರೋಹಿಗಳು ಮೌಂಟ್‌ಎವರೆಸ್ಟ್‌ ಏರಿದ್ದಾರೆ. ಈ ಮೊದಲು 2019ರಲ್ಲಿ 223 ಪರ್ವತಾರೋಹಿಗಳು ನೇಪಾಳ ಕಡೆಯಿಂದ ಮೌಂಟ್‌ ಎವರೆಸ್ಟ್‌ ಏರಿದ್ದರು.

*ಭಾರತದ ಮೂವರು:* ಭಾರತದ ತುಳಸಿ ರೆಡ್ಡಿ ಪಲ್ಪುನೂರಿ, ಸಂದೀಪ್ ಅರೆ ಮತ್ತು ಅಜಯ್‌ ಪಾಲ್‌ ಸಿಂಗ್‌ ಧಲಿವಾಲ್ ಅವರು ವಿಶ್ವದಾಖಲೆ ಮಾಡಿದ ಈ ತಂಡದ ಭಾಗವಾಗಿದ್ದರು. ಪ್ರಮುಖ ಅಂಕಿಅಂಶಗಳು 274 ಒಟ್ಟು ಪರ್ವತಾರೋಹಿಗಳು 223 ಹಿಂದಿನ ದಾಖಲೆ (2019)ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಕಠ್ಮಂಡು: ಮೂವರು ಭಾರತೀಯರು ಸೇರಿದಂತೆ 274 ಮಂದಿ ಪರ್ವತಾರೋಹಿಗಳು ನೇಪಾಳದ ಕಡೆಯಿಂದ ಮೌಂಟ್‌ ಎವರೆಸ್ಟ್‌ ಶಿಖರವನ್ನು ಬುಧವಾರ ಏರುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಇದೇ ಮೊದಲ ಬಾರಿಗೆ ಏಕಕಾಲಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪರ್ವತಾರೋಹಿಗಳು ಮೌಂಟ್‌ಎವರೆಸ್ಟ್‌ ಏರಿದ್ದಾರೆ. ಈ ಮೊದಲು 2019ರಲ್ಲಿ 223 ಪರ್ವತಾರೋಹಿಗಳು ನೇಪಾಳ ಕಡೆಯಿಂದ ಮೌಂಟ್‌ ಎವರೆಸ್ಟ್‌ ಏರಿದ್ದರು.
ನೇಪಾಳದ 150 ಶೆರ್ಪಾಗಳು ಸೇರಿದಂತೆ 274 ಮಂದಿಯೂ 8,848.86 ಅಡಿ ಎತ್ತದ ಶಿಖರವನ್ನು ತಲುಪಿದ್ದಾರೆ ಎಂದು ನೇಪಾಳದ ಶಿಖರ ಯಾತ್ರೆ ನಿರ್ವಾಹಕರ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಿಶಿ ರಾಮ್‌ ಭಂಡಾರಿ ಅವರು ತಿಳಿಸಿದ್ದಾರೆ.
ಭಾರತದ ತುಳಸಿ ರೆಡ್ಡಿ ಪಲ್ಪುನೂರಿ, ಸಂದೀಪ್ ಅರೆ ಮತ್ತು ಅಜಯ್‌ ಪಾಲ್‌ ಸಿಂಗ್‌ ಧಲಿವಾಲ್ ಅವರು ವಿಶ್ವದಾಖಲೆ ಮಾಡಿದ ಈ ತಂಡದ ಭಾಗವಾಗಿದ್ದರು.
ಭಾರತದ ಲಕ್ಷ್ಮೀಕಾಂತ ಮಂಡಲ್ ಅವರು ಕೂಡಾ ವಿಶ್ವ ಅತೀ ಎತ್ತರದ ಶಿಖರವನ್ನು ಗುರುವಾರ ಏರಿದ್ದಾರೆ.
ಇದೇ ಅವಧಿಯಲ್ಲಿ ನೇಪಾಳದ ಕಾಮಿ ರೀಟಾ ಶೆರ್ಪಾ ಅವರು 32ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು