2:13 AM Saturday10 - October 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:…

ಇತ್ತೀಚಿನ ಸುದ್ದಿ

*ಬಿಎಂಟಿಸಿ ಬಸ್’ನಿಂದ ಸಾರಿಗೆ ಸಚಿವ ಭೈರತಿ ಸುರೇಶ್ ಅವರನ್ನು ಕೆಳಗಿಳಿಸಿದ್ದ ಬಸ್ ಡ್ರೈವರ್, ಕಂಡಕ್ಟರ್ ಸಸ್ಪೆಂಡ್*

12/07/2026, 22:08

ಬೆಂಗಳೂರು(reporterkarnataka.com): ಸಿಲಿಕಾನ್ ಸಿಟಿ ಜನರ ಜೀವನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಸಾರ್ವಜನಿಕರಿಂದ ಬಿಎಂಟಿಸಿ ಸಿಬ್ಬಂದಿ ವಿರುದ್ಧ ಸಾಲು ಸಾಲು ದೂರುಗಳು ಕೇಳಿಬರುತ್ತಿದ್ದವು. ಬಸ್ ನಿಲ್ಲಿಸದಿರುವುದು, ಚಿಲ್ಲರೆ ಸಮಸ್ಯೆ ಹಾಗೂ ಪ್ರಯಾಣಿಕರೊಂದಿಗೆ ಉದ್ಧಟತನದ ವರ್ತನೆ ತೋರುವ ಘಟನೆಗಳು ಮರುಕಳಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಸ್ವತಃ ಸಾರಿಗೆ ಸಚಿವರು ಬಿಎಂಟಿಸಿ ಬಸ್ ಹತ್ತಿ ಪ್ರಯಾಣಿಕರ ಕಷ್ಟ-ಸುಖಗಳನ್ನು ಅರಿಯಲು ‘ರಿಯಾಲಿಟಿ ಚೆಕ್’ ನಡೆಸಿದಾಗ ಅಚ್ಚರಿಯ ಹಾಗೂ ಶಾಕಿಂಗ್ ಘಟನೆಗಳು ಬೆಳಕಿಗೆ ಬಂದಿವೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ ಯೋಜನೆ’ಯಿಂದಾಗಿ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟದಲ್ಲಿದೆ ಮತ್ತು ದಿವಾಳಿಯಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇಂತಹ ಟೀಕೆಗಳ ನಡುವೆಯೇ ಸಾರ್ವಜನಿಕರ ನಿತ್ಯದ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಲು ಸಾರಿಗೆ ಸಚಿವರಾದ ಬೈರತಿ ಸುರೇಶ್ ಅವರು ಶನಿವಾರ ಸಂಜೆ ದಿಢೀರ್ ಆಗಿ ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣ ಬೆಳೆಸಿದರು. ಜಯಮಹಲ್‌ನಿಂದ ಆರಂಭವಾದ ಇವರ ರಿಯಾಲಿಟಿ ಚೆಕ್ ಸಂಚಾರವು ಟಿವಿ ಟವರ್, ಆರ್.ಟಿ. ನಗರ, ಸಿಬಿಐ ರಸ್ತೆ, ಮಸೀದಿ ನಿಲ್ದಾಣ, ಬಳ್ಳಾರಿ ಮುಖ್ಯರಸ್ತೆ ಹಾಗೂ ಹೆಬ್ಬಾಳದವರೆಗೆ ಸಾಗಿತು. ಅಲ್ಲಿಂದ ಮುಂದೆ ಭೂಪಸಂದ್ರ, ರಿಂಗ್ ರಸ್ತೆ ಮೂಲಕ ಮಾನ್ಯತಾ ಟೆಕ್ ಪಾರ್ಕ್, ನಾಗವಾರ ಮತ್ತು ಹೆಣ್ಣೂರು ಮಾರ್ಗವಾಗಿ ಗೆದ್ಲಹಳ್ಳಿಯವರೆಗೆ ಸಚಿವರು ಸಂಚರಿಸಿದರು.
ಈ ರಿಯಾಲಿಟಿ ಚೆಕ್ ವೇಳೆ ಹೆಬ್ಬಾಳ-ನಾಗಶೆಟ್ಟಿಹಳ್ಳಿ ಮಾರ್ಗದ ಬಿಎಂಟಿಸಿ ಬಸ್ ಹತ್ತಿದ ಸಾರಿಗೆ ಸಚಿವರಿಗೆ ಸಾರ್ವಜನಿಕರು ನಿತ್ಯ ಎದುರಿಸುವ ಚಿಲ್ಲರೆ ಸಮಸ್ಯೆಯ ಕಹಿ ಅನುಭವ ದಕ್ಕಿತು. ಬಸ್ ಹತ್ತಿದ ತಕ್ಷಣ ಎಂದಿನಂತೆ ಕಂಡಕ್ಟರ್ “ಟಿಕೆಟ್… ಟಿಕೆಟ್…” ಎಂದು ಸಚಿವರನ್ನು ಕೇಳಿದ್ದಾರೆ. ಆಗ ಸಚಿವರು ಟಿಕೆಟ್‌ಗಾಗಿ 100 ರೂಪಾಯಿ ನೋಟು ನೀಡಿದ್ದಾರೆ. ಆದರೆ ಸಚಿವರನ್ನು ಗುರುತಿಸದ ಕಂಡಕ್ಟರ್, “ನನ್ನ ಬಳಿಯೂ ಚಿಲ್ಲರೆ ಇಲ್ಲ” ಎಂದು ಖಾಲಿ ಬ್ಯಾಗ್ ತೋರಿಸಿ, “ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಕೆಳಗೆ ಇಳಿಯಿರಿ” ಎಂದು ನೇರವಾಗಿಯೇ ಹೇಳಿದ್ದಾರೆ. ಕಂಡಕ್ಟರ್‌ನ ಈ ಖಡಕ್ ಪ್ರತಿಕ್ರಿಯೆಯನ್ನು ಕಂಡ ಸಚಿವರು ಯಾವುದೇ ಆಕ್ರೋಶ ವ್ಯಕ್ತಪಡಿಸದೇ, ಮೌನವಾಗಿ ಬಸ್‌ನಿಂದ ಕೆಳಗೆ ಇಳಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು