4:35 AM Saturday13 - June 2026
ಬ್ರೇಕಿಂಗ್ ನ್ಯೂಸ್
ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ… ಹಾಸನ | ಸಕಲೇಶಪುರ ಬಳಿ ಕರುಗಳ ಬೆನ್ನಟ್ಟಿದ ಕಾಡಾನೆ ಮರಿ ಚಿಕ್ಕಮಗಳೂರು: ಗುಂಡು ಹಾರಿಸಿಕೊಂಡು ಗೃಹಿಣಿ ಅನುಮಾನಾಸ್ಪದ ಸಾವು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ:… ಮೋದಿ ಸರ್ಕಾರದ 12 ವರ್ಷಗಳ ಕಥೆಯಲ್ಲಿ ವೈಫಲ್ಯಗಳ ಪಟ್ಟಿಯದ್ದೇ ಕಾರುಬಾರು: ಗೃಹ ಸಚಿವ… ಸಿಎಂ ಕಾನೂನು ಸಲಹೆಗಾರ ಸ್ಥಾನಕ್ಕೆ ಎ. ಎಸ್. ಪೊನ್ನಣ್ಣ ರಾಜೀನಾಮೆ: ಸಚಿವ ಸ್ಥಾನ… Kodagu | ನಾಪೋಕ್ಲು: ಕಾರು – ಬೈಕ್ ಅಪಘಾತ- ಸವಾರ ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

ವ್ಯಾಸಂಗ ವಿಷಯದಲ್ಲಿ ಮನೆಯವರೊಂದಿಗೆ ಜಗಳ: ಮನ ನೊಂದ ವಿದ್ಯಾರ್ಥಿನಿ ನೇಣಿಗೆ ಶರಣು

01/09/2021, 21:47

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com

ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ವಾಸಿ ವಿದ್ಯಾರ್ಥಿನಿಯೋರ್ವಳು, ವ್ಯಾಸಂಗದ ವಿಚಾರವಾಗಿ ಪೋಷಕರೊಡನೆ ಜಗಳವಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಉಜ್ಜಿನಿ ಗ್ರಾಮದ ನಿವಾಸಿಯಾದ ಪೂಜಾ ಯು.ಎನ್. (24) ವಿದ್ಯಾರ್ಥಿನಿ ದಾವಣಗೆರೆ ಜಿಲ್ಲೆಯ ಜಗಳೂರಿನ ಸಿದ್ದಾರ್ಥ್ ಬಿಇಡಿ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದು ಓದುತ್ತಿದ್ದಳು. ಈ ನಡುವೆ ಪೂಜಾ ಬಿಇಡಿ ವ್ಯಾಸಂಗ ಬಿಟ್ಟು ಪಿಎಚ್ಡಿ ಮಾಡುತ್ತೇನೆ ಎಂದು ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ಪೋಷಕರು ಮೊದಲು ಈ ವ್ಯಾಸಂಗ ಮುಗಿಸಿದ ನಂತರ ಮುಂದಿನ ವ್ಯಾಸಂಗ ಮಾಡು ಎಂದು ತಿಳಿ ಹೇಳಿದ್ದರಿಂದ ಬೇಸರಗೊಂಡ ಯುವತಿ ಪೂಜಾ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಈ ಘಟನೆ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು