9:17 PM Thursday18 - June 2026
ಬ್ರೇಕಿಂಗ್ ನ್ಯೂಸ್
ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು

ಇತ್ತೀಚಿನ ಸುದ್ದಿ

ತ್ರೇತಾಯುಗದಲ್ಲಿ ಸೀತೆ, ದ್ವಾಪರದಲ್ಲಿ ದ್ರೌಪದಿ, ಕಲಿಯುಗದಲ್ಲಿ ಸೌಜನ್ಯ; ಆಕೆ ಬರೇ ಹೆಣ್ಣಲ್ಲ, ಶಕ್ತಿ: ಮಹೇಶ್ ಶೆಟ್ಟಿ ತಿಮರೋಡಿ

20/08/2023, 21:44

ಮಂಗಳೂರು(reporterkarnataka.com): ಧರ್ಮಸ್ಥಳದ ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿದವರು ಯಾರೆಂದು ಇಡೀ ದಕ್ಷಿಣ ಕನ್ನಡಕ್ಕೆ ಗೊತ್ತು. ನಾವು 11 ವರ್ಷಗಳಿಂದ ನ್ಯಾಯದ ಭಿಕ್ಷೆ ಬೇಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಸೌಜನ್ಯ ಹೋರಾಟ ಸಮಿತಿ ಮಂಗಳೂರು ವತಿಯಿಂದ ನಗರದ ಕದ್ರಿ ಬಯಲು ರಂಗ ಮಂದಿರದಲ್ಲಿ ಭಾನುವಾರ ನಡೆದ ಸೌಜನ್ಯ ಪರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಎಲ್ಲ ರಾಜಕೀಯ ಪಕ್ಷದವರೂ ಒಂದೇ. ನಾವು 11 ವರ್ಷಗಳಿಂದ ನ್ಯಾಯ ಕೊಡಿ ಅಂತ ಭಿಕ್ಷೆ ಬೇಡುತ್ತಿದ್ದೇವೆ. ಕಾನೂನಾತ್ಮಕವಾಗಿ ನೀವು ನ್ಯಾಯ ಕೊಡದಿದ್ದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಹೇಗೆ ಪಡೆಯಬೇಕು ಎನ್ನುವುದು ನಮಗೆ ಗೊತ್ತು ಎಂದು ಅವರು ನುಡಿದರು.
ಸೌಜನ್ಯ ಬರೇ ಹೆಣ್ಣಲ್ಲ. ಅದೊಂದು ಶಕ್ತಿ. ತ್ರೇತಾಯುಗದಲ್ಲಿ ಸೀತೆ, ದ್ವಾಪರದಲ್ಲಿ ದ್ರೌಪದಿ ಇದ್ದ ಹಾಗೆ ಕಲಿಯುಗದಲ್ಲಿ ಸೌಜನ್ಯ. ಇದು ಇಲ್ಲಿಗೆ ನಿಂತು ಹೋಗುವುದಿಲ್ಲ. ಸೌಜನ್ಯ ನೆಪ ಮಾತ್ರ. ಸೌಜನ್ಯ ಪ್ರಕರಣ ನಡೆದ ಬಳಿಕ ಒಂದೊಂದಾಗಿ ಪ್ರಕರಣಗಳು ಹೊರಬರುತ್ತಿದೆ ಎಂದು ಅವರು ನುಡಿದರು.
ಹೋರಾಟ ಸಮಿತಿಯ ಸಂಚಾಲಕಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಹಾಗೂ ಸೌಜನ್ಯ ತಾಯಿ ಕುಸುಮಾವತಿ ಉಪಸ್ಥಿತರಿದ್ದರು. ಇದಕ್ಕೆ ಮುನ್ನ ಕದ್ರಿ ದೇವಾಲಯದಿಂದ ಬಯಲು ರಂಗ ಮಂದಿರದ ವರೆಗೆ ಪಾದಯಾತ್ರೆ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು