10:05 PM Friday16 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಸುಳ್ಯ | ಸಂಪಾಜೆ: ಮದ್ಯದ ಅಮಲಿನಲ್ಲಿ ಹೆದ್ದಾರಿ ಬದಿಯಲ್ಲಿದ್ದ ಕಾನ್ವೆಕ್ಸ್ ಮಿರರನ್ನೇ ಕದ್ದೊಯ್ದ ಕಳ್ಳರು

26/07/2026, 16:45

ಸುಳ್ಯ(reporterkarnataka.com): ಸಂಪಾಜೆ ಗ್ರಾಮದ ಚಡಾವಿನಲ್ಲಿ ಹೆದ್ದಾರಿ ಬಳಿ ಅಪಘಾತ ತಪ್ಪಿಸಲು ಇಟ್ಟಿರುವ ಕನ್ನಡಿಯನ್ನು ತಡರಾತ್ರಿ ದುಷ್ಕರ್ಮಿಗಳು ಕಾರಲ್ಲಿ ಬಂದು ಕದ್ದೊಯ್ದ ಮಾಹಿತಿ ತಿಳಿದ ಪೊಲೀಸರು ಸಿಸಿ ಟಿವಿ ದೃಶ್ಯ ಆಧರಿಸಿ ಕಳ್ಳರನ್ನು ಪತ್ತೆ ಹಚ್ಚಿ ಅವರಿಂದಲೇ ಮರು ಜೋಡಣೆ ಮಾಡಿಸಿದ ಘಟನೆ ನಡೆದಿದೆ.
ಕಳ್ಳತನ ಮಾಡಿದವರು ಪುತ್ತೂರು ಮೂಲದ ಶ್ರೇಯಸ್ ಕುಮಾರ್ ಮತ್ತು ಪ್ರೀತಮ್ ರೈ ಎಂದು ತಿಳಿದು ಬಂದಿದ್ದು ಕುಡಿದ ಅಮಲಿನಲ್ಲಿ ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯ ಬಳಿಕ ತಿಳಿದು ಬಂದಿದೆ.
ಇವರಿಬ್ಬರು ಪುತ್ತೂರಿನಿಂದ ಮಡಿಕೇರಿ ಕಡೆಗೆ ಸುತ್ತಾಡಲು ಕಾರಿನಲ್ಲಿ ಹೋಗುತ್ತಿದ್ದಾಗ ರಾತ್ರಿ ಸಮಯ ರಸ್ತೆ ಬದಿ ಇದ್ದ ಈ ಕನ್ನಡಿಯನ್ನು ಬಿಚ್ಚಿ ಅವರು ಬಂದಿದ್ದ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿ ಮಡಿಕೇರಿ ರಾಜಾಸೀಟ್ ಮೊದಲಾದ ಕಡೆ ಸುತ್ತಿ ಮತ್ತೆ ಪುತ್ತೂರಿಗೆ ಇದೇ ರಸ್ತೆ ಮೂಲಕ ತೆರಳಿದ್ದಾರೆ.
ಮಾರನೇ ದಿನ ಸ್ಥಳೀಯರು ರಸ್ತೆ ಬದಿ ಇದ್ದ ಕನ್ನಡಿ ಕಾಣದೇ ಇರುವ ಕಾರಣ ಪಕ್ಕದ ಮನೆಯ ಸಿ ಸಿ ಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ಇಬ್ಬರು ಯುವಕರು ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಳಿಕ ವಿವರ ಪೊಲೀಸರ ಗಮನಕ್ಕೆ ಸ್ಥಳೀಯರು ನೀಡಿದ್ದಾರೆ.
ಪೊಲೀಸರು ಸಿಸಿ ಟಿವಿಯ ದೃಶ್ಯ ವನ್ನು ಆಧರಿಸಿ ತನಿಖೆ ಕೈಗೊಂಡು ಘಟನೆಗೆ ಬಳಸಿದ ಕಾರಿನ ನಂಬರ್ ಬೋರ್ಡ್ ಸಹಾಯದಿಂದ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಅವರ ದೂರವಾಣಿ ನಂಬರ್ ಪಡೆದು ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಮದ್ಯದ ಅಮಲಿನಲ್ಲಿ ಈ ಕೃತ್ಯವನ್ನು ಮಾಡಿರುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಪೊಲೀಸರು ಕಳ್ಳತನ ಮಾಡಿದವರಿಂದಲೇ ಕನ್ನಡಿಯನ್ನು ಮರು ಜೋಡಿಸುವ ಕೆಲಸ ಮಾಡಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು