ಇತ್ತೀಚಿನ ಸುದ್ದಿ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ
21/07/2026, 20:21
ಮೈಸೂರು(reporterkarnataka.com): ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ಗೂಸ ಕೊಟ್ಟ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ.
ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ.
ಸುರೇಶ್(23) ಪೊಲೀಸರ ಅತಿಥಿಯಾದ ಕಾಮುಕ. ತಂದೆ ತಾಯಿ ಕೂಲಿಗೆ ಹೋಗಿರುವುದ್ದು ಬಾಲಕಿ ಒಂಟಿಯಾಗಿರುವುದನ್ನ ಗಮನಿಸಿ ಮನೆಗೆ ನುಗ್ಗಿದ ಕಿರಾತಕ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಈ ವೇಳೆ ಬಾಲಕಿಯ ಛೀರಾಡಿದ್ದಾಳೆ. ಅಕ್ಕಪಕ್ಕದ ಮನೆಯವರು ಬಂದು ಹಿಗ್ಗ ಮಗ್ಗ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.











