11:02 PM Thursday15 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಶಾಕಿಂಗ್ ನ್ಯೂಸ್: ಮಂಗಳೂರು, ಬೆಂಗಳೂರು ಸೇರಿದಂತೆ 10 ನಗರಗಳಲ್ಲಿ ಅಧಿಕ ಮಾಲಿನ್ಯ; ಲಾಕ್ ಡೌನ್ ನಲ್ಲೂ ಹೆಚ್ಚಳ

28/01/2022, 21:50

ಹೊಸದಿಲ್ಲಿ(reporterkarnataka.com): ಕೊರೊನಾ ಭೀತಿಯ ನಡುವೆಯೂ ದಕ್ಷಿಣ ಭಾರತದ ಮಂಗಳೂರು, ಬೆಂಗಳೂರು ಮತ್ತು ಮೈಸೂರು ಸೇರಿದಂತೆ 10 ನಗರಗಳಲ್ಲಿ ಹೆಚ್ಚಿನ ಮಾಲಿನ್ಯ ಕಂಡು ಬಂದಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ 2020ರ ನವೆಂಬರ್‌ 20ರಿಂದ 2021ರ ನವೆಂಬರ್‌ 20ರ ವರೆಗಿನ ದತ್ತಾಂಶಗಳ ಬಗ್ಗೆ ಅಧ್ಯಯನ ನಡೆಸಿರುವ ಗ್ರೀನ್‌ಪೀಸ್‌ ಇಂಡಿಯಾ ಈ ವರದಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಗದಿಪಡಿಸಿರುವ ಗುಣಮಟ್ಟಕ್ಕಿಂತಲೂ ಈ ನಗರಗಳಲ್ಲಿ ಹೆಚ್ಚಿನ ಮಾಲಿನ್ಯವಿದೆ ಎಂದು ಗ್ರೀನ್‌ಪೀಸ್‌ ಇಂಡಿಯಾ ವರದಿ ತಿಳಿಸಿದೆ.

ಕೊಯಮತ್ತೂರು, ಬೆಂಗಳೂರು, ಮಂಗಳೂರು ಮತ್ತು ಅಮರಾವತಿಯ ಪಿಎಂ 2.5 ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ ತಿಳಿಸಿರುವ ಮಟ್ಟಕ್ಕಿಂತ 6ರಿಂದ 7 ಪಟ್ಟು ಹೆಚ್ಚಾಗಿದೆ. ಮೈಸೂರು, ಕೊಚ್ಚಿ, ಚೆನ್ನೈ ಮತ್ತು ಪುದುಚೇರಿಯ ಪಿಎಂ 2.5 ಮಟ್ಟ 4ರಿಂದ 5 ಪಟ್ಟು ಹೆಚ್ಚಿದೆ ಎಂದು ಗ್ರೀನ್‌ಪೀಸ್‌ ವರದಿ ಹೇಳಿದೆ. ಈ ಮೂಲಕ ವಾಯುಮಾಲಿನ್ಯ ಮಟ್ಟ ಕೇವಲ ಉತ್ತರ ಭಾರತವಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೂ ಹೆಚ್ಚಾಗಿದೆ ಎಂಬುದನ್ನು ಮನದಟ್ಟು ಮಾಡಿದೆ ಎಂದು “ಇಂಡಿಯನ್‌ ಎಕ್ಸ್‌ಪ್ರಸ್‌’ ಉಲ್ಲೇಖೀಸಿದೆ.

ಲಾಕ್‌ಡೌನ್‌ನಲ್ಲೂ ಹೆಚ್ಚು: ವಿಚಿತ್ರವೆಂದರೆ, ಲಾಕ್‌ಡೌನ್‌ ಘೋಷಣೆ ಮಾಡಿದ್ದ ಅವಧಿಯಲ್ಲೂ 10 ನಗರಗಳಲ್ಲಿ ಪಿಎಂ 2.5 ಮತ್ತು ಪಿಎಂ 10 ವಾರ್ಷಿಕ ಮೌಲ್ಯ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾರ್ಗಸೂಚಿಗಿಂತ ಹೆಚ್ಚಾಗಿದೆ ಎಂದು ಈ ವರದಿ ತಿಳಿಸಿದೆ. ವಿಶಾಖ ಪಟ್ಟಣ, ಹೈದರಾಬಾದ್‌ಗಳಲ್ಲಿ ಮಾಲಿನ್ಯ 6 ಪಟ್ಟು ಹೆಚ್ಚಿದ್ದರೆ ಬೆಂಗಳೂರು, ಮಂಗಳೂರು, ಅಮರಾವತಿ, ಚೆನ್ನೈ, ಕೊಚ್ಚಿಯಲ್ಲಿ 3ರಿಂದ 4 ಪಟ್ಟು ಹೆಚ್ಚಿತ್ತು ಎಂದು ಗ್ರೀನ್‌ಪೀಸ್‌ ವರದಿ ಹೇಳಿದೆ. ಮೈಸೂರು, ಕೊಯಮತ್ತೂರು, ಪುದುಚೇರಿಯ ಮಾಲಿನ್ಯ ಪ್ರಮಾಣ ಎರಡರಿಂದ ಮೂರು ಪಟ್ಟು ಹೆಚ್ಚಾಗಿತ್ತು ಎಂದಿದೆ.

ಮೊದಲ 10 ಮಲಿನ ನಗರಗಳು: ಬೆಂಗಳೂರು, 2. ಹೈದರಾಬಾದ್‌, ಚೆನ್ನೈ, 4. ಅಮರಾವತಿ,ವಿಶಾಖಪಟ್ಟಣಂ, 6. ಕೊಚ್ಚಿ, ಮಂಗಳೂರು, 8. ಪುದುಚೇರಿ, ಕೊಯಮತ್ತೂರು, 10. ಮೈಸೂರು.

ಮಾಲಿನ್ಯಕ್ಕೆ ಕಾರಣವೇನು? : ಮೂಲ ಸೌಕರ್ಯ ಅಭಿವೃದ್ಧಿ, ಕೈಗಾರಿಕೆಗಳು, ಸಾರಿಗೆ, ಕಸವನ್ನು ಸುಡುವುದು, ನಿರ್ಮಾಣ ಕಾಮಗಾರಿ ಅತಿಯಾದ ಮಾಲಿನ್ಯಕ್ಕೆ ಕಾರಣವಾಗಿವೆ. ಇದರಿಂದ ಅಸ್ತಮಾ, ಹುಟ್ಟುವಾಗ ಮಗುವಿನ ತೂಕ ಕಡಿಮೆ, ಖನ್ನತೆ, ಸ್ಕಿಝೋಫ್ರೀನಿಯಾ, ಸಕ್ಕರೆ ಕಾಯಿಲೆ, ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್‌, ಅವಧಿಗಿಂತ ಮುಂಚೆಯೇ ಮಗು ಹುಟ್ಟುವ ಸಮಸ್ಯೆಗಳು ಕಾಡಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು