4:38 AM Tuesday21 - April 2026
ಬ್ರೇಕಿಂಗ್ ನ್ಯೂಸ್
ಇಡಿ ದಾಳಿಗೂ ತಂದೆ ಹ್ಯಾರಿಸ್ ಗೂ ಯಾವುದೇ ಸಂಬಂಧವಿಲ್ಲ; ನಾನೊಬ್ಬ ಒಳ್ಳೆಯ ಮಗನಾಗಲು… ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ…

ಇತ್ತೀಚಿನ ಸುದ್ದಿ

ಶಿರ್ವ ಗ್ರಾಮ ಪಂಚಾಯಿತಿ ಗ್ರಾಮಸಭೆ: ಇದೇ ಮೊದಲ ಬಾರಿಗೆ ಗ್ರಾಮಸ್ಥರು ಆನ್ ಲೈನ್ ಮೂಲಕ ಭಾಗವಹಿಸಲು ಅವಕಾಶ

18/07/2021, 15:04

ಶಿರ್ವ(reporterkarnataka news):
ಪಂಚಾಯತ್ ರಾಜ್ ವ್ಯವಸ್ಥೆಯಡಿ ರಾಜ್ಯದಲ್ಲೆ ಪ್ರಥಮ ಎಂಬಂತೆ ಗ್ರಾಮ ಸಭೆಯ ನೇರ ಪ್ರಸಾರ – ದೇಶ ವಿದೇಶದಲ್ಲಿರುವ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮಸ್ಥರಿಗೆ ಗ್ರಾಮ ಸಭೆಯನ್ನು ವೀಕ್ಷಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಶಿರ್ವ ಗ್ರಾಮ ಪಂಚಾಯಿತಿನ  2021-22 ಸಾಲಿನ ಪ್ರಥಮ ಗ್ರಾಮ ಸಭೆಯು ಜುಲೈ 19ರಂದು ಬೆಳಗ್ಗೆ 10.30 ಕ್ಕೆ ಶಿರ್ವ ಸಾರ್ವಜನಿಕ ಗಣೆಶೋತ್ಸವ ವೇದಿಕೆಯ ಸಮೀಪದ ಮಹಿಳಾ ಸೌಧದಲ್ಲಿ ನಡೆಯಲಿದೆ. ಈ ಗ್ರಾಮ ಸಭೆಯಲ್ಲಿ ಭಾಗವಹಿಸಲು ಎಲ್ಲ ಗ್ರಾಮಸ್ಥರಿಗೆ ಆಮಂತ್ರಣವಿದ್ದು, ಈ ಸಂಪೂರ್ಣ ಸಭೆಯನ್ನು ತಮ್ಮ ಮನೆಗಳಿಂದಲೂ ವೀಕ್ಷಿಸುವ ಅವಕಾಶವನ್ನು ಶಿರ್ವ ಪಂಚಾಯತ್ ವತಿಯಿಂದ ಏರ್ಪಡಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಒಂದು ಪಂಚಾಯತ್ ಗ್ರಾಮ ಸಭೆಯನ್ನು ಆನ್ ಲೈನ್ ಮೂಲಕ ನೇರ ಪ್ರಸಾರ ಮಾಡಲು ಶಿರ್ವ ಪಂಚಾಯತ್ ಮುಂದಾಗಿದೆ.ಈ ವಿಷಯದ ಮೇಲೆ ಮಾತನಾಡಿದ ಶಿರ್ವ  ಪಂಚಾಯತ್ ಅಧ್ಯಕ್ಷ ಕೆ. ಆರ್ .ಪಾಟ್ಕರ್ , ” ನಮ್ಮ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲ ಗ್ರಾಮಸ್ಥರ ಸಲಹೆ ಸೂಚನೆಗಳು ಮಹತ್ವದ್ದು. ನಾವು ಮಾಡಿದ ವಿವಿಧ ಯೋಜನೆಗಳ ಮಾಹಿತಿ, ನಮ್ಮ ಗ್ರಾಮಸ್ಥರಿಗೆ ನೀಡುವುದು ನಮ್ಮ ಕರ್ತವ್ಯ. ಕೊರೊನಾ ಮಹಾಮಾರಿಯ ಭಯ ಹಾಗೂ ನಿರಂತರ ಸುರಿಯುತ್ತಿರುವ ಮಳೆಯ ಕಾರಣಕ್ಕೆ  ಬಹಳಷ್ಟು ಜನರು ಈ ಗ್ರಾಮ ಸಭೆಯಲ್ಲಿ ಸಭೆಯಲ್ಲಿ ಭಾಗವಹಿಸಲು ಹಿಂಜರಗುವುದು ಸಹಜ, ಆದ್ದರಿಂದ ಅವರಿಗೆ ತಮ್ಮ ಮನೆಯಲ್ಲೇ ಕೂತು ಗ್ರಾಮ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಡುವುದೇ ಈ ನೇರಪ್ರಸಾರದ ಉದ್ದೇಶ. ಈ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಇಲಾಖಾ ಮಾಹಿತಿಯನ್ನು ನೀಡಲಿದ್ದಾರೆ, ಇದು ನಮ್ಮ ಗ್ರಾಮಸ್ಥರಿಗೆ ತಿಳಿಯುವುದು ಬಹುಮುಖ್ಯ” ಎಂದರು.

ಗ್ರಾಮಸಭೆಗೆ ವೈಯಕ್ತಿಕವಾಗಿ ಹಾಜರಾಗಲು ಇಚ್ಛಿಸುವ ಗ್ರಾಮಸ್ಥರಿಗೂ ಕೂಡ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ  ವಯಕ್ತಿಕವಾಗಿ ಭಾಗವಹಿಸುವ ಎಲ್ಲ ಗ್ರಾಮಸ್ಥರಿಗೆ ಉಚಿತ ಮಾಸ್ಕ್ ವಿತರಣೆ ನಡೆಯಲಿದ್ದು , ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಮೂಲಕ ವಿನಂತಿ ಮಾಡಲಾಗಿದೆ” ಎಂದು ಅಭಿವೃದ್ದಿ ಅಧಿಕಾರಿ, ಅನಂತ ಪದ್ಮನಾಭ ನಾಯಕ್ ತಿಳಿಸಿದರು.

ಶಿರ್ವ ಪಂಚಾಯತಿಯ ಗ್ರಾಮ ಸಭೆಯನ್ನು ಈ ಕೆಳಗಿನ ಲಿಂಕ್ ಮೂಲಕ ವೀಕ್ಷಿಸಬಹುದು 

https://tinyurl.com/ShirvaGramaSabhe

ಈ ಗ್ರಾಮಸಭೆಯಲ್ಲಿ ಗ್ರಾಮಸ್ಥರು  ವಯಕ್ತಿಕವಾಗಿ ಅಥವಾ ಆನ್ ಲೈನ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗ್ರಾಮದ ಅಭಿವೃದ್ಧಿಯ ನಿಟ್ಟಿನಿಂದ  ತಮ್ಮ ಸಲಹೆ , ಸೂಚನೆಗಳ್ಳನ್ನು ನೀಡಬೇಕೆಂದು ಶಿರ್ವ ಪಂಚಾಯತಿ ಅಧ್ಯಕ್ಷರು , ಅಭಿವೃದ್ಧಿ ಅಧಿಕಾರಿ, ಸದಸ್ಯರು ಮತ್ತು ಸಿಬ್ಬಂಧಿ ವರ್ಗದವರು ಗ್ರಾಮಸ್ಥರಲ್ಲಿ ವಿನಂತಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು