3:10 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ರಂಗಕರ್ಮಿ, ಚಲನಚಿತ್ರ ನಿರ್ದೇಶಕ, ‘ಗುಡ್ಡದ ಭೂತ’ ಖ್ಯಾತಿಯ ಸದಾನಂದ ಸುವರ್ಣ ಇನ್ನಿಲ್ಲ: ರಂಗ ಜಂಗಮ ಇನ್ನು ನೆನಪು ಮಾತ್ರ

16/07/2024, 18:08

ಮಂಗಳೂರು(reporterkarnataka.com): ಪ್ರಸಿದ್ದ ನಾಟಕಕಾರ, ಚಲನಚಿತ್ರ ಹಾಗೂ ರಂಗ ನಿರ್ದೇಶಕ, ‘ಗುಡ್ಡೆದ ಭೂತ’ ಖ್ಯಾತಿಯ ಸದಾನಂದ ಸುವರ್ಣ ಅವರು ಇಂದು ನಿಧನರಾದರು.
ಘಟಶ್ರಾದ್ಧ,ಕುಬಿ ಮತ್ತು ಇಯಾಲದಂತಹ ಕಲಾತ್ಮಕ ಸದಭಿರುಚಿಯ ಸಿನೆಮಾಗಳನ್ನು ಕನ್ನಡಿಗರಿಗೆ ಉಣ ಬಡಿಸಿದ್ದ ಸದಾನಂದ ಸುವರ್ಣ ಅವರು ತಮ್ಮ 92ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದರು.
ಸಿನಿಮಾ ಮಾತ್ರವಲ್ಲದೆ ಕನ್ನಡ ಮತ್ತು ತುಳು ರಂಗ ಭೂಮಿಯಲ್ಲಿ ನೂರಾರು ಅತ್ಯುತ್ತಮ ಯಶಸ್ವೀ ನಾಟಕಗಳನ್ನು ರಚಿಸಿ ಅವರು ನಿರ್ದೇಶಿಸಿದ್ದರು. ಗುಡ್ಡೆದ ಭೂತದ ಅವರ ಜನಪ್ರಿಯ ಟಿವಿ ಧಾರಾವಾಹಿ. 80ರ ದಶಕದಲ್ಲಿ ದೂರದರ್ಶನ ಚಂದನದಲ್ಲಿ ಪ್ರಸಾರವಾಗುತ್ತಿತ್ತು. ಖ್ಯಾತ ನಟ ಪ್ರಕಾಶ್ ರೈ ಇದರಲ್ಲಿ ಅಭಿನಯಿಸಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಕುರಿತು ಸಾಕ್ಷ್ಯಚಿತ್ರವನ್ನು ಸದಾನಂದ ಸುವರ್ಣರು ನಿರ್ದೇಶಿಸಿದ್ದರು.
ಸದಾನಂದ ಸುವರ್ಣ ಅವರು ಓರ್ವ ಪ್ರಯೋಗಶೀಲ ನಿರ್ದೇಶಕರಾಗಿದ್ದರು. ಮುಂಬಯಿ ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಸುವರ್ಣರು ನಂತರ ಮಂಗಳೂರಿನ ರಂಗಭೂಮಿಗೆ ಬಂದು ರಂಗಭೂಮಿಯಲ್ಲಿ ಹೊಸ ಛಾಪನ್ನು ಒತ್ತಿದವರು. ಮಂಗಳೂರಿನ ಹವ್ಯಾಸಿ ನಟ ನಟಿಯರಿಗೆ ಉರುಳು, ಕೋರ್ಟ್ ಮಾರ್ಷಲ್, ಮಳೆ ನಿಲ್ಲುವ ವರೆಗೆ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದರು.
ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಪ್ರತಿಷ್ಠಿತ ಬಿ.ವಿ.ಕಾರಂತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಆವೃತ್ತಿಯ ಹಿರಿಯ ಉಪ ಸಂಪಾದಕರಾಗಿದ್ದ ದಿ. ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಅವರು ಸದಾನಂದ ಸುವರ್ಣರ ರಂಗ ಸಾಧನೆಯ ಕುರಿತೇ “ರಂಗ ಜಂಗಮ ಸದಾನಂದ ಸುವರ್ಣ” ಅನ್ನುವ ಸಂಶೋಧನಾ ಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪಡೆದಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು